ಕೋವಿಡ್- 19 ಕೊರೊನಾದಿಂದಾಗಿ ಆಸ್ಟ್ರೇಲಿಯಾದ ಸಿಡ್ನಿಯ ಸೂಪರ್‌ ಮಾರ್ಕೆಟ್‌ಗಳಲ್ಲಿ ಟಾಯ್ಲೆಟ್ ಪೇಪರ್ ಗಾಗಿ ಮಹಿಳೆಯರು ಶಾಪಿಂಗ್ ಮಾಲ್ ನಲ್ಲಿಯೇ ಬಡಿದಾಡಿಕೊಂಡಿರುವ ವಿಡಿಯೊ ವೈರಲ್ ಆಗಿದೆ.

ಮಹಿಳೆಯರಿಬ್ಬರು ಶಾಪಿಂಗ್ ಟ್ರೇನನಲ್ಲಿ ಟಾಯ್ಲೆಟ್ ಪೇಪರ್ ಗಳ ರಾಶಿಯನ್ನು ತುಂಬಿಕೊಂಡಿದ್ದರು. ಮತ್ತೊಬ್ಬ ಮಹಿಳೆಗೆ ಒಂದೂ ಟಾಯ್ಲೆಟ್ ಪೇಪರ್ ಸಿಗದೇ ಇದ್ದದ್ದಕ್ಕೆ ಮೂವರ ಮಧ್ಯೆ ಬಡಿದಾಟ ಆರಂಭವಾಗಿದೆ. ಬಳಿಕ ಶಾಪಿಂಗ್ ಮಾಲ್ ನ ಸಿಬ್ಬಂದಿ ಬಂದು ಜಗಳ ಬಿಡಿಸುವ ದೃಶ್ಯ ವಿಡಿಯೊದಲ್ಲಿದೆ.

ಓದಿ: ಚಿಕನ್ನಿಂದ ಕೊರೊನಾ ವೈರಸ್; ಸುಳ್ಳು ಎಂದಿದೆ ಕೇಂದ್ರ ಸರ್ಕಾರ

ವಿಡಿಯೊದ ಸತ್ಯಾಂಶ ಪರಿಶೀಲಿಸಿದಾಗ ಅದು ಸತ್ಯ ಎಂದು ದೃಢಪಟ್ಟಿದೆ. ವಿಡಿಯೊವನ್ನು ಆಸ್ಟ್ರೇಲಿಯಾ ಮಾದ್ಯಮಗಳು ಟ್ವಿಟರ್ ನಲ್ಲಿ ಹಂಚಿಕೊಂಡಿವೆ. ಅಲ್ಲದೆ, ಆ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಈಗ ಆ ಮಹಿಳೆಯರು ನ್ಯಾಯಾಲಯದಲ್ಲಿ ಪ್ರಕಟಣ ಎದುರಿಸುತ್ತಿದ್ದಾರೆ.

ಮೀನಿಗೂ ಕೊರೊನಾ: ಸುಳ್ಳು ಸುದ್ದಿಯ ಅಸಲಿ ಕತೆ ಓದಿ

ಏನಿದು ಘಟನೆ?
ಟಾಯ್ಲೆಟ್ ಪೇಪರ್ ಗಾಗಿ 49 ವರ್ಷದ ಮಹಿಳೆಯ ಮೇಲೆ ಹಲ್ಲೆ ಮಾಡಲಾಗಿದೆ. ಶನಿವಾರ (ಮಾ.7) ಬೆಳಿಗ್ಗೆ 7 ಗಂಟೆ ಸುಮಾರಿಗೆ ಚುಲ್ಲೊರಾದ ವೂಲ್‌ವರ್ತ್ ಅಂಗಡಿಯಲ್ಲಿ ಮಹಿಳೆಯರ ಫೈಟ್ ನಡೆದಿದೆ.

ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು, ವೈರಲ್ ಆಗುತ್ತಿದೆ. ಆ ವಿಡಿಯೊದಲ್ಲಿ ಶೌಚಾಲಯದ ಕಾಗದದಿಂದ ತುಂಬಿದ ಶಾಪಿಂಗ್ ಕಾರ್ಟ್ ಮೇಲೆ ಮಹಿಳೆಯರು ಕೂಗುವುದು ಮತ್ತು ಜಗಳವಾಡುವುದು ಸೆರೆಯಾಗಿದ್ದು, ವಿಡಿಯೊವನ್ನು ಆಸ್ಟ್ರೇಲಿಯಾದ 9ನ್ಯೂಸ್ ಆಸ್ಟ್ರೇಲಿಯಾ ಸುದ್ದಿ ಸಂಸ್ಥೆ ಟ್ವೀಟ್ ಮಾಡಿದೆ.

ಮಹಿಳೆಯ ಮೇಲೆ ಹಲ್ಲೆ ಮಾಡಿದ 23 ಮತ್ತು 60 ವರ್ಷ ವಯಸ್ಸಿನ ಇಬ್ಬರು ಮಹಿಳೆಯರ ವಿರುದ್ಧ ಶನಿವಾರ ರಾತ್ರಿ ಬ್ಯಾಂಕ್‌ಟೌನ್ ಪೊಲೀಸ್ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಏಪ್ರಿಲ್ 28 ರಂದು ಬ್ಯಾಂಕ್‌ಟೌನ್ ಸ್ಥಳೀಯ ನ್ಯಾಯಾಲಯಕ್ಕೆ ಹಾಜರಾಗಲು ಅವರಿಬ್ಬರಿಗೂ ಸಮನ್ಸ್ ಜಾರಿಗೊಳಿಸಲಾಗಿದೆ ಎಂದು ದಿ ಗಾರ್ಡಿಯನ್ ಸುದ್ದಿ ಸಂಸ್ಥೆ ವರದಿ ಮಾಡಿದೆ.