ಕೋವಿಡ್- 19 ಕೊರೊನಾ ವೈರಸ್ ನಿಯಂತ್ರ ಸವಾಲು ಒಂದೆಡೆಯಾದರೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳು ಜನರನ್ನು ಇನ್ನಷ್ಟು ಭಯ ಬೀಳಿಸುತ್ತಿದೆ. ಇಷ್ಟು ದಿನ ಚಿಕನ್ , ಮಟನ್ ನಲ್ಲಿ ಕೊರೊನಾ ಇದೆ ಎಂದು ಹೇಳುತ್ತಿದ್ದವರು ಈಗ ಮೀನಿಗೂ ಕೊರೊನಾ ಬಂದಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಮೀನುವೊಂದಕ್ಕೆ ದೇಹದ ಮೇಲೆ ಗುಳ್ಳೆ ರೀತಿ ಆಗಿರುವ ಫೋಟೊವೊಂದು ವಾಟ್ಸ್ ಆ್ಯಪ್ ಗಳಲ್ಲಿ ಹರಿದಾಡುತ್ತಿದೆ. ಅದರ ಜತೆಗೆಯಲ್ಲಿಯೇ ಮೀನಿಗೂ ಕೊರೊನಾ ಬಂದಿದೆ. ದಯವಿಟ್ಟು ತಿನ್ನಬೇಡಿ ಎಂದು ಸಂದೇಶ ಪಾರ್ವರ್ಡ್ ಆಗುತ್ತಿದೆ. ಈ ಸುದ್ದಿ ಈಗ ಎಲ್ಲೆಡೆ ಭಾರೀ ಆತಂಕ, ಗೊಂದಲ ಹುಟ್ಟುಹಾಕಿದೆ.

ಇದನ್ನೂ ಓದಿ: ಚಿಕನ್ ನಿಂದ ಕೊರೊನಾ ವೈರಸ್; ಸುಳ್ಳು ಎಂದಿದೆ ಕೇಂದ್ರ ಸರ್ಕಾರ

2017 ರಲ್ಲಿ ಪ್ರಕಟವಾಗಿರುವ ಮೀನಿನ ಪೋಟೊ

ಇದನ್ನೂ ಓದಿ: ಚಿಕನ್ ನಿಂದ ಕೊರೊನಾ ವೈರಸ್; ಸುಳ್ಳು ಎಂದಿದೆ ಕೇಂದ್ರ ಸರ್ಕಾರ

ಮೂರು ವರ್ಷ ಹಳೆಯ ಫೋಟೊ

ಅಸಲಿಗೆ ಈ ಸುದ್ದಿಯ ಸತ್ಯವೇನೆಂದು ಶೋಧಿಸಿದಾಗ. ಮೀನುಗಳಿಗೆ ಕೊರೊನಾ ಬಂದಿದೆ ಎನ್ನುವುದು ಅಪ್ಪಟ ಸುಳ್ಳು ಸುದ್ದಿ. ಮೀನಿನ ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜ್ ನಲ್ಲಿ ಹುಡುಕಿದಾಗ ಅದು 2017ರಲ್ಲಿ ಒಂದು ಬ್ಲಾಗ್ ನಲ್ಲಿ ಪೋಸ್ಟ್ ಆಗಿದೆ. ಅಂದರೆ ಅದು ಮೂರು ವರ್ಷಗಳ ಹಳೆಯ ಚಿತ್ರ. ಜತೆಗೆ ಆ ಫೋಟೊವನ್ನು ಈಗಷ್ಟೇ ಮೊಬೈಲ್ ನಲ್ಲಿ ತೆಗೆದಿರುವ ರೀತಿಯಲ್ಲಿ ದಿನಾಂಕ ನಮೂದಿಸಲಾಗಿದೆ. ದಿನಾಂಕದ ಫಾರ್ಮೆಟ್ ಕೂಡ ಎಡಿಟ್ ಮಾಡಿ ಅಂಟಿಸಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಹಾಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮೀನಿನ ಚಿತ್ರ ಅಸಲಿಯಾದರೂ, ಅದು ಕೊರೊನಾದಿಂದ ಹಾಗೆ ಆಗಿದೆ ಎನ್ನುವುದು ಸುಳ್ಳು ಎನ್ನುವುದು ದೃಡ ಪಡುತ್ತದೆ.

ಕೊರೊನಾಗೆ ಇದು ಔಷಧವೇ?

ವಿಶ್ವ ಆರೋಗ್ಯ ಸಂಸ್ಥೆ ಹೇಳುವುದೇನು?
ವಿಶ್ವ ಆರೋಗ್ಯ ಸಂಸ್ಥೆ ಹೇಳುವ ಪ್ರಕಾರ ಕೊರೊನಾ ವೈರಸ್ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ. ಪ್ರಾಣಿಗಳಿಗೆ ಆ ವೈರಸ್ ಬಂದಿದೆ ಎನ್ನುವುದು ಎಲ್ಲಿಯೂ ಸಾಬೀತಾಗಿಲ್ಲ. ವಿಶ್ವ ಸಂಸ್ಥೆ ಸಹ ಕೊರೊನಾ ಮನುಷ್ಯರನ್ನು ಬಿಟ್ಟು ಬೇರೆ ಪ್ರಾಣಿಗಳಿಂದ ಮನುಷ್ಯರಿಗೆ ಹಬ್ಬಿದೆ ಎನ್ನುವುದನ್ನು ಸಾಕ್ಷೀಕರಿಸಿಲ್ಲ. ಅಲ್ಲದೆ ಈವರೆಗೆ ಕೊರೊನಾದಿಂದ ಪ್ರಾಣಿಗಳು ಸತ್ತಿರುವ ಉದಾಹರಣೆಯೂ ತೀರಾ ಕಡಿಮೆ ಇದೆ.

ಕೊರೊನಾಗೆ ಇದು ಔಷಧವೇ?

ವಿಶ್ವ ಆರೋಗ್ಯ ಸಂಸ್ಥೆ ಮತ್ತು ಕೇಂದ್ರ ಆರೋಗ್ಯ ಇಲಾಖೆ ಕೊರೊನಾ ಬಗ್ಗೆ ಪ್ರತಿ ದಿನದ ಬೆಳವಣಿಗೆಗಳನ್ನು ಅವಲೋಕಿಸುತ್ತಿವೆ. ನಿತ್ಯವೂ ಕೊರೊನಾ ಕುರಿತು ಸಂಶೋಧನೆಗಳು ನಡೆಯುತ್ತಿವೆ. ಎಲ್ಲಿಯೂ ಮೀನುಗಳಿಗೆ ಕೊರೊನಾ ಬಂದಿದೆ ಎನ್ನುವುದು ಪತ್ತೆಯಾಗಿಲ್ಲ. ಚಿಕನ್ ಸಹ ಬಳಕೆಗೆ ಸುರಕ್ಷಿತವಾಗಿದೆ ಎಂದು ಭಾರತ ಸರಕಾರ ಸ್ಪಷ್ಟಪಡಿಸಿದೆ.