‘ಪ್ರಧಾನಮಂತ್ರಿ ಪಿಎಂ ಕನ್ಯಾ ಯೋಜನೆ’ ಎಂದು ಸುಳ್ಳು ಪ್ರಚಾರ: ನಿಜಾಂಶ ಇಲ್ಲಿದೆ
ಪ್ರಧಾನ ಮಂತ್ರಿ ಪಿಎಂ ಕನ್ಯಾ ಎನ್ನುವ ಯೋಜನೆ ಸುದ್ದಿಯೊಂದು ಎಲ್ಲೆಡೆ ವ್ಯಾಪಕ ವೈರಲ್ ಆಗುತ್ತಿದೆ. ಅನೇಕರು ಅರ್ಜಿ ಸಲ್ಲಿಸಲು ಕಂಪ್ಯೂಟರ್ ಸೆಂಟರ್‌ಗಳಿಗೆ ಹೋಗುತ್ತಿದ್ದಾರೆ. ಆದರೆ, ವಾಸ್ತವದಲ್ಲಿ ಇಂಥದ್ದೊAದು ಯೋಜನೆ ನಿಜವಾಗಿಯೂ ಇದೆಯಾ ಎನ್ನುವ ಬಗ್ಗೆ ಯಾರೂ ಯೋಚನೆ ಮಾಡುತ್ತಿಲ್ಲ.
ಎಲ್ಲರ ವಾಟ್ಸಾಪ್‌ಗಳಲ್ಲಿ ಪತ್ರಿಕೆಯ ಸುದ್ದಿಯ ಚಿತ್ರವೊಂದು ಹರಿದಾಡುತ್ತಿದೆ. ಅದರಲ್ಲಿ ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳು ಇದ್ದರೆ ಪ್ರತಿ ತಿಂಗಳು 2000 ರೂಪಾಯಿ ನೇರವಾಗಿ ನಿಮ್ಮ ಖಾತೆಗೆ ಬರುತ್ತದೆ. ನರೇಂದ್ರ ಮೋದಿಯವರು ಜಾರಿಗೆ ತಂದಿರುವ ಪಿಎಂ ಕನ್ಯಾ ಯೋಜನೆ ಇದರ ಲಾಭ ಪಡೆಯಲು ಮಾಹಿತಿ ಅರ್ಜಿಯನ್ನು ಸಿಎಸ್‌ಸಿಗೆ ಹೋಗಿ ಸಲ್ಲಿಸಬೇಕು.
ಸಲ್ಲಿಸಿದ ನಂತರ ನಿಮಗೆ ಒಂದು ರಶೀದಿ ಕೊಡುತ್ತಾರೆ. ಅದನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು. ಈಗಲೇ ಹೋಗಿ ಪ್ರಧಾನಮಂತ್ರಿ ಕನ್ಯಾ ಆಯುಷ್ ಯೋಜನೆಗೆ ಅರ್ಜಿ ಸಲ್ಲಿಸಿ ನಿಮ್ಮ ಹೆಣ್ಣು ಮಕ್ಕಳ ಭವಿಷ್ಯ ರೂಪಿಸಿಕೊಳ್ಳಬಹುದು ಎನ್ನುವ ಮಾಹಿತಿ ಇದೆ.
ದಿ ಸ್ಟೇಟ್ ನೆಟ್ವರ್ಕ್ ಇದೇ ಮಾಹಿತಿ ಆಧರಿಸಿ ಯೋಜನೆಯ ಬಗ್ಗೆ ಖಚಿತ ಮಾಹಿತಿ ತಿಳಿಯಲು ಮುಂದಾಯಿತು.
ಪತ್ರಿಕೆಯ ಚಿತ್ರ ಸೇರಿ ಯೋಜನೆ ಹೆಸರು ಉಲ್ಲೇಖಿಸಿ ಕೇಂದ್ರ ಸರಕಾರದ ಪ್ರೆಸ್ ಇನ್‌ಫಾರ್ಮೇಶನ್ ಬ್ಯೂರೊಗೆ (ಪಿಐಬಿ) ಕೇಳಿತ್ತು. ಅದಕ್ಕೆ ಪಿಐಬಿ ಪ್ರತಿಕ್ರಿಯೆ ನೀಡಿದ್ದು, ಕೇಂದ್ರ ಸರಕಾರದಿಂದ ಇಂಥ ಯಾವುದೇ ಯೋಜನೆ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಜತೆಗೆ ದಿ ಸ್ಟೇಟ್ ನೆಟ್ವರ್ಕ್ ತಂಡ ಕರ್ನಾಟಕ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಈ ಯೋಜನೆ ಬಗ್ಗೆ ವಿಚಾರಿಸಿತು. ಅವರೂ ಕೂಡ ಕರ್ನಾಟಕದಲ್ಲಿ ಇಂಥ ಯಾವುದೇ ಯೋಜನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಇದೊಂದು ಸುಳ್ಳು ಸುದ್ದಿ ಎನ್ನುವುದು ಸ್ಪಷ್ಟವಾಗುತ್ತದೆ.
ವಿಶೇಷ ಸೂಚನೆ: ಯಾವುದೇ ಯೋಜನೆಯ ನಿಖರ ಮಾಹಿತಿ ಇಲ್ಲದೆ ಯಾರೊಂದಿಗೂ ದಾಖಲೆಗಳನ್ನು ಹಂಚಿಕೊಳ್ಳಬಾರದು. ಸುಳ್ಳು ಯೋಜನೆ ಹೆಸರಿನಲ್ಲಿ ಜನರ ದಾಖಲೆಗಳು ದುರುಪಯೋಗ ಆಗುವ ಸಾಧ್ಯತೆಗಳು ಹೆಚ್ಚಿರುತ್ತವೆ.