ಎಲ್ಲೆಡೆ ಸೊಳ್ಳೆ ಕಾಟ ಅತಿಯಾಗಿದೆ. ಕುಂತಲ್ಲಿ, ನಿಂತಲ್ಲಿ ಸೊಳ್ಳೆಗಳು ಬಂದು ಕಚ್ಚುತ್ತಿವೆ. ಅದೇ ಸೊಳ್ಳೆಯಿಂದ ಕೊರೊನಾ ವೈರಸ್ ಸಹ ಹರಡುತ್ತದೆ ಎನ್ನುವ ಸುದ್ದಿಯೊಂದು ಎಲ್ಲೆಡೆ ವೈರಲ್ ಆಗುತ್ತಿದ್ದು, ಜನರಲ್ಲಿ ಆತಂಕ ಸೃಷ್ಟಿಸುತ್ತಿದೆ. ಸೊಳ್ಳೆಗಳಿಂದ ಮಲೇರಿಯಾ ಹರಡುತ್ತದೆ ಎನ್ನುವುದು ಬಹುತೇಕರಿಗೆ ತಿಳಿದಿದೆ. ಅದೇ ರೀತಿ ಕೊರೊನಾ ಸಹ ಸೊಳ್ಳೆಗಳ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎನ್ನುವುದು ಜನರ ಆತಂಕ. ವಾಟ್ಸ್ಯಾಪ್ ಗಳಲ್ಲಿ ಹರಿದಾಡುತ್ತಿರುವ ಈ ಸುದ್ದಿಯ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆಯನ್ನೂ ನೀಡಿದೆ. ಅದು ಏನು ಎಂದು ತಿಳಿಯಲು ಈ ವರದಿಯನ್ನು ಪೂರ್ತಿ ಓದಿ.

ಚಿಕನ್ನಿಂದ ಕೊರೊನಾ ವೈರಸ್; ಸುಳ್ಳು ಎಂದಿದೆ ಕೇಂದ್ರ ಸರ್ಕಾರ

ವಾಟ್ಸ್ ಆ್ಯಪ್ ಗಳಲ್ಲಿ ಹರಿದಾಡುತ್ತಿರುವ ಸಂದೇಶದ ಬಗ್ಗೆ ಕೇಂದ್ರ ಸರ್ಕಾರದ ಪಿಐಬಿ (ಪ್ರೆಸ್ ಇನ್ಫಾರ್ಮೇಷನ್ ಬ್ಯುರೊ) ಫ್ಯಾಕ್ಟ್ ಚೆಕ್ ಮೂಲಕ ಸ್ಪಷ್ಟನೆ ನೀಡಿದೆ. ಪಿಐಬಿ ಅಧಿಕೃತ ವೆಬ್ ಸೈಟ್ ನಲ್ಲಿ ಆ ಸುದ್ದಿ ಕುರಿತು ವಾಸ್ತವ ಸತ್ಯವನ್ನು ತೆರೆದಿಟ್ಟಿದೆ.

ಕೊರೊನಾಗೆ ಇದು ಔಷಧವೇ?

ಕೇಂದ್ರ ಸರ್ಕಾರ ಹೇಳಿದ್ದೇನು?
ಕೋವಿಡ್-19 ಕೊರೊನಾ ವೈರಸ್ ಸೊಳ್ಳೆಗಳ ಮೂಲಕ ಹರಡಲು ಸಾಧ್ಯವಿಲ್ಲ. ಕೊರೊನ ವೈರಸ್ ಸೋಂಕಿತ ವ್ಯಕ್ತಿಯ ಕೆಮ್ಮು, ಸೀನು, ಲಾಲಾರಸ ಅಥವಾ ಮೂಗಿನಿಂದ ಹೊರಸೂಸುವ ಹನಿಗಳ ಮೂಲಕ ಹರಡುತ್ತದೆ ಎಂದು ಹೇಳಿದೆ.

ಮೀನಿಗೂ ಕೊರೊನಾ: ಸುಳ್ಳು ಸುದ್ದಿಯ ಅಸಲಿ ಕತೆ ಓದಿ

ಅಲ್ಲದೆ, ವಿಶ್ವ ಆರೋಗ್ಯ ಸಂಸ್ಥೆಯು ಕೋವಿಡ್-19 ಕೊರೊನಾದಿಂದ ತಪ್ಪಿಸಿಕೊಳ್ಳಲು ಪದೇ ಪದೆ ಕೈ ತೊಳೆಯುವುದೇ ಉತ್ತಮ ದಾರಿ ಎಂದು ಹೇಳಿದೆ. ಸೊಳ್ಳೆಯಿಂದ ಕೊರೊನಾ ಹರಡುತ್ತಿದೆ ಎನ್ನುವ ಬಗ್ಗೆ ಯಾವುದೇ ಮಾಹಿತಿಯನ್ನು ವಿಶ್ವ ಆರೋಗ್ಯ ಸಂಸ್ಥೆ ಹಂಚಿಕೊಂಡಿಲ್ಲ.

ನಿರ್ಧಾರ:
ಸೊಳ್ಳೆಯಿಂದ ಕೊರೊನಾ ಹರಡುತ್ತದೆ ಎನ್ನುವ ಬಗ್ಗೆ ಯಾವುದೇ ಸಂಶೋಧನೆಗಳು ಬಹಿರಂಗವಾಗಿ ಹೇಳದೆ ಇರುವುದರಿಂದ ಸೊಳ್ಳೆಗಳಿಂದ ಕೊರೊನಾ ಹರಡುತ್ತದೆ ಎನ್ನುವುದು ಸುಳ್ಳು ಎಂದು ಭಾವಿಸಬಹುದು.