ಬಿತ್ತನೆ ಬೀಜ ಉತ್ಪಾದಕರಾಗಿ, ಕಳಪೆ ಬೀಜ ಪತ್ತೆ ಮಾಡಿ

ಪ್ರತಿ ವರ್ಷ ಮುಂಗಾರು ಆರಂಭವಾಗುತ್ತಿದ್ದಂತೆಯೇ ಬಿತ್ತನೆ ಬೀಜ, ಗೊಬ್ಬರ ಸಮಸ್ಯೆ ಕಾಡುತ್ತದೆ. ಬಹುತೇಕ ರೈತರು ಕೃಷಿ ಇಲಾಖೆ ಕೊಡುವ ಬಿತ್ತನೆ ಬೀಜವನ್ನೇ ಅವಲಂಬಿಸಿದ್ದಾರೆ. ಇನ್ನು ಕೆಲವರು ತಾವೇ ಸ್ವಂತ ಬಿತ್ತನೆ ಬೀಜ ಸಂಗ್ರಹಿಸಿಕೊಳ್ಳುತ್ತಾರೆ.
ಅದರಲ್ಲಿ ಗುಣಮಟ್ಟ ಎಷ್ಟೋ, ಕಳಪೆ ಎಷ್ಟೋ ಎನ್ನುವ ಗೊಂದಲಗಳೇ ಹಲವಾರು. ಬಿತ್ತನೆ ಬೀಜ ಖರೀದಿ ಮಾಡುವಾಗ ಏನು ಮಾಡಬೇಕು?, ಕಳಪೆ ಬೀಜ ಖರೀದಿಸಿ ಮೋಸ ಹೋದರೆ ಏನು ಮಾಡಬೇಕು? ರೈತರು ಸಹ ರಾಜ್ಯ ಸರಕಾರ ಪ್ರಮಾಣೀಕೃತ ಬಿತ್ತನೆ ಬೀಜ ಉತ್ಪಾದಕರು ಆಗುವುದು ಹೇಗೆ? ಎನ್ನುವ ಹಲವು ವಿಷಯಗಳ ಬಗ್ಗೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ದೇವರಾಜ್ ಅವರು ಸಂದರ್ಶನವೊಂದರಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅದರ ಪೂರ್ಣ ಮಾಹಿತಿ ಇಲ್ಲಿದೆ.
ಬಿತ್ತನೆ ಬೀಜ ಉತ್ಪಾದಕರಾಗಿ:
ರೈತರಿಗೆ ಕೃಷಿ ಇಲಾಖೆ ಬಿತ್ತನೆ ಬೀಜ ಪೂರೈಸುತ್ತದೆ ಎನ್ನುವುದು ಗೊತ್ತು. ಅದೇ ಕೃಷಿ ಇಲಾಖೆಗೆ ಬಿತ್ತನೆ ಬೀಜಗಳು ಎಲ್ಲಿಂದ ಬರುತ್ತವೆ ಎಂದರೆ, ರೈತರು, ಕಂಪನಿಗಳಿಂದಲೇ. ಹಾಗಾಗಿ ರೈತರು ಸಹ ರಾಜ್ಯ ಸರಕಾರದ ಪ್ರಮಾಣೀಕೃತ ಬೀಜ ಉತ್ಪಾದಕರಾಗಬಹುದು.
ಕೃಷಿ ಇಲಾಖೆ ಅಡಿಯಲ್ಲಿ ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆ ಇದೆ. ಬಿತ್ತನೆ ಬೀಜ ಉತ್ಪಾದನೆ ಮಾಡಲು ಬಯಸುವ ರೈತರು ಈ ಸಂಸ್ಥೆಯಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಬಳಿಕ ಸಂಸ್ಥೆಯ ಸಿಬ್ಬಂದಿ ರೈತರ ಹೊಲಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಾರೆ.
ಎರಡು ಗುಂಟೆ ಒಂದು ಲಕ್ಷ ರೂ. ಆದಾಯ ಕೊಡುವ ಕೃಷಿ

ರೈತರು ಬೀಜ ಬೆಳೆಯುವ ವಿವಿಧ ಹಂತದಲ್ಲಿ ಪರಿಶೀಲಿಸುತ್ತಾರೆ. ಯಾವ ಬೇಸಾಯ ಕ್ರಮ ಅಳವಡಿಸಿಕೊಂಡಿದ್ದಾರೆ. ಭೂಮಿ ಗುಣಮಟ್ಟ ಹೇಗೆ ಎಂದು ನೋಡಿ ಖಾತ್ರಿ ಮಾಡಿಕೊಳ್ಳುತ್ತಾರೆ. ಬಳಿಕ ಬೀಜವನ್ನು ಮೊಳಕೆ ಪ್ರಮಾಣ ಪ್ರಯೋಗಕ್ಕೆ ಒಳಪಡಿಸಿ ಪ್ರಮಾಣೀಕರಿಸುತ್ತಾರೆ. ನಂತರ ನೀಲಿ ಬಣ್ಣದ ಟ್ಯಾಗ್ ಕೊಡುತ್ತಾರೆ. ಬೀಜದ ಚೀಲದ ಮೇಲೆ ನೀಲಿ ಬಣ್ಣದ ಟ್ಯಾಗ್ ಇದ್ದರೆ ಗುಣಮಟ್ಟದ ಬಿತ್ತನೆ ಬೀಜ ಎಂದು ಖಾತ್ರಿ ಪಡಿಸಿಕೊಳ್ಳಬಹುದು.
ನೇರ ಮಾರ್ಗದರ್ಶನಕ್ಕಾಗಿ ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆಯ ದೂರವಾಣಿ ಸಂಖ್ಯೆ : 080 23418302, ಮೊಬೈಲ್ ಸಂಖ್ಯೆ: 9448990362/ 9448990356/ 9448990353/ 9448990382.
ಇದನ್ನೂ ಓದಿ: ಲಾಕ್ ಡೌನ್ ನಲ್ಲಿ ಕೃಷಿ ನಷ್ಟ ತಪ್ಪಿಸಿಕೊಳ್ಳಲು ಇದೆ ಪರಿಹಾರ
ಬಿತ್ತನೆ ಬೀಜಕ್ಕೆ ಸಹಾಯಧನ ಎಷ್ಟು?
ಕೃಷಿ ಇಲಾಖೆಯಿಂದ ಬಿತ್ತನೆ ಬೀಜ ಖರೀದಿ ಮಾಡುವ ಪ್ರತಿಯೊಬ್ಬ ರೈತರು ಇದನ್ನು ತಿಳಿದಿರಬೇಕು. ಕೃಷಿ ಇಲಾಖೆ ವಿತರಿಸುವ ಬಿತ್ತನೆ ಬೀಜಗಳಿಗೆ ರಾಜ್ಯ ಸರಕಾರ ಸಬ್ಸಿಡಿ ಕೊಟ್ಟಿರುತ್ತದೆ. ಅದು ವಿವಿಧ ಬೆಳೆಗಳ ಬಿತ್ತನೆ ಬೀಜಕ್ಕೆ ಭಿನ್ನವಾಗಿರುತ್ತದೆ. ಪ್ರತಿ ರೈತರಿಗೆ ಗರಿಷ್ಠ ಐದು ಎಕರೆಗೆ ಮಾತ್ರ ಬಿತ್ತನೆ ಬೀಜ ವಿತರಿಸಲಾಗುತ್ತದೆ.
ಇದನ್ನೂ ಓದಿ: ಅದೃಷ್ಟ ತರಲಿದೆ ಮುಂಗಾರು: ರೈತರಿಗೆ ವಿಜ್ಞಾನಿಗಳ ಸಲಹೆ

ಭತ್ತ ಒಂದು ಕೆಜಿ ಬಿತ್ತನೆ ಬೀಜಕ್ಕೆ 8 ರೂ. ಸಹಾಯಧನ ಇದೆ. ದ್ವಿದಳ ಧಾನ್ಯ ಒಂದು ಕೆಜಿ ಬಿತ್ತನೆ ಬೀಜಕ್ಕೆ 25 ರೂ. ಸೂರ್ಯಕಾಂತಿಗೆ 80 ರೂ., ಮುಸುಕಿನ ಜೋಳಕ್ಕೆ 20 ರೂ. ರಾಗಿ ಬೀಜಕ್ಕೆ 18 ರೂ. ಸಹಾಯಧನ ರಾಜ್ಯ ಸರಕಾರದಿಂದ ನೀಡಲಾಗುತ್ತದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಜಾತಿ ಜನಾಂಗಕ್ಕೆ ಯಾವುದೇ ಬೆಳೆಯ ಬಿತ್ತನೆ ಬೀಜಕ್ಕೆ ಶೇ. 75 ರಷ್ಟು ಸಹಾಯಧನ ಕೊಡಲಾಗುತ್ತದೆ.
ಓದಿ: ಕಬ್ಬಿನ ರವದಿಯಿಂದ ಮಣ್ಣಿನ ಫಲವತ್ತತೆ ಹೆಚ್ಚಿಸುವ ಪಂಚ ಸೂತ್ರಗಳು
ಕಳಪೆ ಬಿತ್ತನೆ ಬೀಜ ಪತ್ತೆ ಹೇಗೆ?
ಬಿತ್ತನೆ ಬೀಜ ಖರೀದಿಸುವಾಗ ಅದರು ಪ್ರಮಾಣೀಕೃತ ಬೀಜ ಹೌದೋ, ಅಲ್ಲವೋ ಎನ್ನುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಬೀಜದ ಚೀಲದ ಮೇಲೆ ನೀಲಿ ಬಣ್ಣದ ಟ್ಯಾಗ್ ಇದ್ದರೆ ಅದು ಗುಣಮಟ್ಟದ ಬೀಜ ಎಂದು ತಿಳಿಯಬಹುದು. ಜತೆಗೆ ಬೀಜ ಖೀರಿದಿಗೆ ಸಂಬಂದಿಸಿದಂತೆ ರಶೀದಿ ಪಡೆಯಬೇಕು. ಅದರಲ್ಲಿ ಖರೀದಿಸಿದ ಬೀಜದ ಪ್ರಮಾಣ, ದರ ಸೇರಿ ಎಲ್ಲ ಮಾಹಿತಿ ಇರಬೇಕು.
ಇದನ್ನೂ ಓದಿ: ಖರ್ಚಿಲ್ಲದೆ ಕೀಟ ಹತೋಟಿ ಮಾಡುವ ಅಷ್ಟ ಸೂತ್ರಗಳು
ಒಂದು ವೇಳೆ ಬಿತ್ತನೆ ನಂತರ ಬೀಜ ಕಳಪೆ ಎನ್ನುವುದು ಖಾತ್ರಿಯಾದರೆ ಆಗ ದೂರು ಕೊಡಲು ಇದು ನೆರವಾಗುತ್ತದೆ. ರೈತರು ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ಅಧಿಕಾರಿ ಅವರನ್ನು ಸಂಪರ್ಕಿಸಿ ದೂರು ಕೊಡಬಹುದು.

ಕೃಷಿ ರೈತರ