ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಆಗಲು ಸುವರ್ಣ ಅವಕಾಶ. ರಾಜ್ಯ ಪೊಲೀಸ್ ಇಲಾಖೆಯಲ್ಲಿನ 162 ಸಬ್ ಇನ್ ಸ್ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಚಾಲನೆ ನೀಡಲಾಗಿದೆ. ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ನೇಮಕಾತಿ ಸಂಬಂಧ ರಾಜ್ಯ ಸರಕಾರ ಬುಧವಾರ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಸದ್ಯದಲ್ಲಿಯೇ ನೇಮಕಾತಿಗೆ ಕುರಿತ ಪೂರ್ಣ ವಿವರಗಳುಳ್ಳ ಆದೇಶ ಪ್ರಕಟವಾಗಲಿದೆ. ರಕ್ಷಣೆ, ಸಂವೇದನೆ ಮತ್ತು ಶೌರ್ಯ ವ್ಯಕ್ತಿತ್ವವಾಗಿದ್ದಲ್ಲಿ ಕರ್ನಾಟಕ ಪೊಲೀಸ್ ನಿಮ್ಮ ಕಾರ್ಯಕ್ಷೇತ್ರ ಎನ್ನುವ ಘೋಷಣೆಯೊಂದಿಗೆ ರಾಜ್ಯ ಸರ್ಕಾರ ಯುವಕರನ್ನು ಪೊಲೀಸ್ ಸೇವೆ ಆಹ್ವಾನಿಸಿದೆ.

ಹುದ್ದೆಗಳ ಮಾಹಿತಿ
ಸಶಸ್ತ್ರ ಮೀಸಲು ಪೊಲೀಸ್ ಸಬ್ ಇನ್ ಸ್ಪೆಕ್ಟರ್- 45 ಹುದ್ದೆಗಳು.
(ಹೈದರಾಬಾದ್ ಕರ್ನಾಟಕ- 5; ಇತರ ಪ್ರದೇಶ- 40 ಹುದ್ದೆ)
ವಿಶೇಷ ಮೀಸಲು ಪೊಲೀಸ್ ಸಬ್ ಇನ್ ಸ್ಪೆಕ್ಟರ್ (ಕೆಎಸ್ ಆರ್ ಪಿ)- 40 ಹುದ್ದೆಗಳು.
ಸಬ್ ಇನ್ ಸ್ಪೆಕ್ಟರ್ (ಕೆಎಸ್ಐಎಸ್ ಎಫ್)- 51 ಹುದ್ದೆಗಳು.
ಪೊಲೀಸ್ ಸಬ್ ಇನ್ ಸ್ಪೆಕ್ಟರ್ (ವೈರ್ ಲೆಸ್)- 26 ಹುದ್ದೆಗಳು.
ಒಟ್ಟೂ 162 ಹುದ್ದೆಗಳು.

ಪರೀಕ್ಷೆ ಇಲ್ಲದೆ ನೇಮಕಾತಿ: ಪಂಚಾಯತ್ ರಾಜ್ ಇಲಾಖೆ 417 ಹುದ್ದೆ

ಅರ್ಜಿ ಸಲ್ಲಿಕೆ ಹೇಗೆ?
ಅಭ್ಯರ್ಥಿಗಳು www.ksp.gov.in ಗೆ ಭೇಟಿ ನೀಡಿ, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು.

KSRP: 2672 ಪೊಲೀಸ್ ಕಾನ್ ಸ್ಟೆಬಲ್ ಭರ್ತಿಗೆ ಅರ್ಜಿ ಆಹ್ವಾನ

ಪ್ರಮುಖ ದಿನಾಂಕಗಳು.
ಅರ್ಜಿ ಸಲ್ಲಿಕೆ ಆರಂಭ ದಿನಾಂಕ- 26/05/2020.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ- 26/06/2020

ಮತ್ತಷ್ಟು ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿ

ರಾಜ್ಯ ಸರ್ಕಾರದ ಪ್ರಕಟಣೆ