ಕರ್ನಾಟ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ ಆರ್ ಟಿಸಿ)ದಲ್ಲಿ ಖಾಲಿ ಇರುವ ವಿವಿಧ 3745 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಚಾಲಕ ಮತ್ತು ಚಾಲಕ-ಕಂ-ನಿರ್ವಾಹಕ,  ದರ್ಜೆ 3 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಆಯ್ಕೆ ಮಾಡಲು ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯು ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಲಿಂಕ್‌ ಅನ್ನು ಕೆಎಸ್ ಆರ್ ಟಿಸಿ ಅಧಿಕೃತ ವೆಬ್‌ಸೈಟ್‌ನಲ್ಲಿ 24-2-2020 ರಂದು ನೀಡಲಾಗುತ್ತದೆ.  ಹುದ್ದೆಯ ವಿವರ, ವಿದ್ಯಾರ್ಹತೆ, ವೇತನ ಎಲ್ಲದರ ಮಾಹಿತಿಗೆ ಈ ವರದಿಯನ್ನು ಪೂರ್ತಿ ಓದಿ.

ಹುದ್ದೆಗಳು:
ಚಾಲಕ : 1200
ಚಾಲಕ-ಕಂ-ನಿರ್ವಾಹಕ : 2545
ಒಟ್ಟು ಹುದ್ದೆಗಳ ಸಂಖ್ಯೆ : 3745

ಗರಿಷ್ಠ ವಯೋಮಿತಿ
ಸಾಮಾನ್ಯ ವರ್ಗ: 35 ವರ್ಷ
2ಎ, 2ಬಿ, 3ಎ, 3ಬಿ: 38 ವರ್ಷ
ಎಸ್ ಸಿ, ಎಸ್ ಟಿ, ಪ್ರ ವರ್ಗ-1: 40 ವರ್ಷ
ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ಕನಿಷ್ಠ 24 ವರ್ಷ ತುಂಬಿರಬೇಕು.

ಅರ್ಜಿ ಸಲ್ಲಿಸುವ ದಿನ
ಅರ್ಜಿ ಸಲ್ಲಿಸಲು ಆರಂಭ ದಿನಾಂಕ: ಫೆಬ್ರುವರಿ 24
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಮಾರ್ಚ್ 20
ಕೊನೆ ದಿನ ಸಂಜೆ 5 ಗಂಟೆಯೊಳಗೆ ಸಲ್ಲಿಸಬೇಕು.

ವಿದ್ಯಾರ್ಹತೆ:
– ಚಾಲಕ ಹುದ್ದೆಗೆ SSLC ಅಥವಾ ತತ್ಸಮಾನ ವಿದ್ಯಾರ್ಹತೆಯಲ್ಲಿ ತೇರ್ಗಡೆಯಾಗಿರಬೇಕು.
-ಮುಕ್ತ ವಿವಿಯಿಂದ ಪಡೆದ ಎಸ್‌ಎಸ್‌ಸಿ 500 ಅಂಕಗಳ ಅಂಕಪಟ್ಟಿಯನ್ನು ಪರಿಗಣಿಸಲಾಗುವುದಿಲ್ಲ.
– ಚಾಲ್ತಿಯಲ್ಲಿರುವ ಭಾರಿ ಸರಕು ಸಾಗಾಣಿಕೆ ವಾಹನ (HTV) ಚಾಲನಾ ಪರವಾನಿಗೆ ಹೊಂದಿ ಕನಿಷ್ಠ 2 ವರ್ಷಗಳಾಗಿರಬೇಕು.
– ಪ್ರಯಾಣಿಕರ ಭಾರಿ ವಾಹನ ಚಾಲನಾ ಪರವಾನಿಗೆ ಹಾಗೂ ಕರ್ನಾಟಕ ಪಿಎಸ್‌ವಿ ಬ್ಯಾಡ್ಜ್‌ ಹೊಂದಿರಬೇಕು.