
ಕುಟುಂಬಕ್ಕೊಂದು ಕೇಂದ್ರ ಸರ್ಕಾರಿ ನೌಕರಿ, 32 ಸಾವಿರ ರೂ. ವೇತನ: ವಾಸ್ತವ ಏನು?

ನೀವು ಭಾರತೀಯರಾಗಿದ್ದರೆ ಕೇಂದ್ರ ಸರ್ಕಾರ ಕುಟುಂಬಕ್ಕೊಂದು ನೌಕರಿ ಕೊಡಲಿದ್ದು, ಅದಕ್ಕಾಗಿ “ಏಕ್ ಪರಿವಾರ ಏಕ್ ನೌಕರಿ’ ಎನ್ನುವ ಯೋಜನೆ ಆರಂಭಿಸಿದೆ ಎನ್ನುವ ಸುದ್ದಿಯೊಂದು ದೇಶದಲ್ಲಿ ವೈರಲ್ ಆಗುತ್ತಿದೆ. ಯಾರೇ ಆಗಿರಲಿ ಅವರು ಭಾರತೀಯರಾಗಿದ್ದರೆ ಸಾಕು. ಕುಟುಂಬದ ಒಬ್ಬ ಸದಸ್ಯರಿಗೆ ಕೇಂದ್ರ ಸರ್ಕಾರದಿಂದ ನೌಕರಿ ಸಿಗಲಿದೆ. ಅನಕ್ಷರಸ್ಥರಿಗೂ ಉದ್ಯೋಗ ಸಿಗಲಿದೆ ಕೂಡಲೇ ಅರ್ಜಿ ಸಲ್ಲಿಸಿ ಎನ್ನುವ ಸುದ್ದಿಯೊಂದು ಎಲ್ಲೆಡೆ ಹರಿದಾಡುತ್ತಿದೆ. ದೆಹಲಿ ಮತ್ತಿತರ ಉತ್ತರ ಭಾರತದ ರಾಜ್ಯಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯದ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.
ಅಸಲಿಗೆ ಏನಿದು ಯೋಜನೆ?, ಇದರ ಅಸಲಿಯತ್ತು ಏನು ಎನ್ನುವುದನ್ನು ತಿಳಿಯಲು ಈ ವರದಿ ಪೂರ್ತಿ ಓದಿ.
ಇದನ್ನೂ ಓದಿ: ಪ್ರಧಾನಮಂತ್ರಿ ಸಾಲ ಯೋಜನೆ, ಎಲ್ಲರಿಗೂ ಎರಡು ಲಕ್ಷ ರೂ.: ನಿಜವೇ?

ಏನಿದು ಸುದ್ದಿ?
ವೆಬ್ ಸೈಟ್, ಯುಟೂಬ್ ಗಳಲ್ಲಿ “ಏಕ್ ಪರಿವಾರ್ ಏಕ್ ನೌಕರಿ-2020’ ಯೋಜನೆ ಹೆಸರಿನಲ್ಲಿ ಸುದ್ದಿ ಹಬ್ಬಿಸಲಾಗುತ್ತಿದೆ. ಅಲ್ಲಿ ತಿಳಿಸುತ್ತಿರುವಂತೆ ಭಾರತ ಸರ್ಕಾರದಿಂದ ಪ್ರತಿ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ಕೊಡಲಾಗುತ್ತದೆ. ಅನಕ್ಷರಸ್ಥರಾಗಿದ್ದರೆ ತಿಂಗಳಿಗೆ 18 ಸಾವಿರ ರೂ., 8 ನೇ ತರಗತಿ ಪಾಸ್ ಆಗಿದ್ದರೆ 28 ಸಾವಿರ ರೂ. ಮಾಸಿಕ ವೇತನ, 10 ನೇ ತರಗತಿ ಉತ್ತಿರ್ಣರಾಗಿದ್ದರೆ ಮಾಸಿಕ 32 ಸಾವಿರ ರೂ. ವೇತನದ ಕೆಲಸ ದೊರೆಯಲಿದೆ.
ಇದನ್ನೂ ಓದಿ: ಪ್ರಧಾನಮಂತ್ರಿ ಸಾಲ ಯೋಜನೆ, ಎಲ್ಲರಿಗೂ ಎರಡು ಲಕ್ಷ ರೂ.: ನಿಜವೇ?
ಮೊದಲು ತರಬೇತಿ ನೀಡಿ ನಂತರ ಯೋಗ್ಯತೆ ಅನುಗುಣವಾಗಿ ನೌಕರಿ ಸಿಗಲಿದೆ. ಈಗಾಗಲೇ ಯಾರಾದರು ಸರ್ಕಾರಿ ನೌಕರಿಯಲ್ಲಿ ಇದ್ದರೆ, ಅಂಥ ಕುಟುಂಬ ಈ ಯೋಜನೆ ವ್ಯಾಪ್ತಿಗೆ ಬರುವುದಿಲ್ಲ. ಸರ್ಕಾರಿ ನೌಕರಿಯಲ್ಲಿ ಇಲ್ಲದೆ ಇದ್ದರೆ ಅಂಥ ಕುಟುಂಬದ ಒಬ್ಬ ಸದಸ್ಯರಿಗೆ ಮಾತ್ರ ಉದ್ಯೋಗ ಸಿಗಲಿದೆ ಎಂದು ಉದ್ಯೋಗ ಸಂಬಂಧಿಸಿದ ವೆಬ್ ಸೈಟ್, ಯೂಟೂಬ್ ಗಳಲ್ಲಿ ವಿಡಿಯೊ ಹರಿಬಿಡಲಾಗುತ್ತಿದೆ.

ಕಳೆದ ಎರಡು ತಿಂಗಳಿಂದ ಈ ಸುದ್ದಿ ಭಾರೀ ವೈರಲ್ ಆಗಿವೆ. ಅದರಲ್ಲಿಕೆಲವರು ಅರ್ಜಿ ನಮೂನೆ ಪ್ರಕಟಿಸಿದರೆ, ಇನ್ನು ಕೆಲವರು ಶೀಘ್ರದಲ್ಲಿಯೇ ಈ ಬಗ್ಗೆ ಅಧಿಸೂಚನೆ ಬರಲಿದೆ ಎಂದು ಹೇಳಿದ್ದಾರೆ. Pmhelpline.com, epesny.nic.in ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಹೇಳಲಾಗುತ್ತಿದೆ.
ವಾಸ್ತವ ಏನು?
ಈ ಯೋಜನೆ ಬಗ್ಗೆ ತನಿಖೆ ನಡೆಸಿದಾಗ ಅದೊಂದು ಅಪ್ಪಟ ಸುಳ್ಳು ಎನ್ನುವುದು ಪತ್ತೆಯಾಗಿದೆ. ಕುಟುಂಬಕ್ಕೊಂದು ನೌಕರಿ ಎನ್ನುವ ಬಗ್ಗೆ ಕೇಂದ್ರ ಸರ್ಕಾರ ಎಲ್ಲಿಯೂ ಪ್ರಚಾರ ಮಾಡಿಲ್ಲ. ಕೇಂದ್ರದ ಯಾವ ಸಚಿವರೂ ಇಂಥ ಯೋಜನೆಗಳ ಬಗ್ಗೆ ಹೇಳಿಕೊಂಡಿಲ್ಲ.
ಇದನ್ನೂ ಓದಿ: ಪ್ರಧಾನಮಂತ್ರಿ ಸಾಲ ಯೋಜನೆ, ಎಲ್ಲರಿಗೂ ಎರಡು ಲಕ್ಷ ರೂ.: ನಿಜವೇ?
ಅಲ್ಲದೆ ಕೇಂದ್ರ ಸರ್ಕಾರದ ವೆಬ್ ಸೈಟ್ ಗಳು gov.in ನಲ್ಲಿ ಇರುತ್ತವೆ. .com ಎನ್ನುವುದು ಖಾಸಗಿ ವೆಬ್ ಸೈಟ್ ಗಳಲ್ಲಿ ಬಳಕೆಯಾಗುತ್ತವೆ. ಆನ್ ಲೈನ್ ನಲ್ಲಿ ಇಂಥ ಸುದ್ದಿಗಳನ್ನು ಹಬ್ಬಿಸಿ ವೈರಲ್ ಮಾಡುವ ಸಲುವಾಗಿ ಹೀಗೆ ಮಾಡಿರುವ ಸಾಧ್ಯತೆ ಇದೆ. ಕೇಂದ್ರ ಸರಕಾರದ ಪಿಐಬಿ ಫ್ಯಾಕ್ಟ್ ಚೆಕ್ ಕೂಡ ಈ ಸುದ್ದಿ ಸುಳ್ಳು ಎಂದು ಸ್ಪಷ್ಟಪಡಿಸಿದೆ. ಇಂಥ ಯಾವುದೇ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿ ಮಾಡಿಲ್ಲ ಎಂದು ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದೆ.