ಭಾರತದಲ್ಲಿ ಕೋವಿಡ್ 19 ವ್ಯಾಕ್ಸಿನೇಶನ್ ಅಭಿಯಾನ ಶುರುವಾಗುತ್ತಿದ್ದಂತೆಯೇ ಸುಳ್ಳು ಸುದ್ದಿಗಳ ಹರಿವು ಕೂಡ ಹೆಚ್ಚಾಗಿದೆ. ವ್ಯಾಕ್ಸಿನೇಶನ್‌ನಿಂದ 40 ಮಕ್ಕಳು ಆಸ್ಪತ್ರೆ ದಾಖಲಾಗಿದ್ದಾರೆ ಎಂದು ತಲೆ ಬರಹ ಇರುವ ಇಂಗ್ಲಿಷ್ ಪತ್ರಿಕೆಯೊಂದರ ಚಿತ್ರವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಆದರೆ, ಕೋವಿಡ್ 19 ವ್ಯಾಕ್ಸಿನೇಶನ್‌ಗೂ ಆ ಸುದ್ದಿಗೂ ಯಾವುದೇ ಸಂಬ೦ಧವಿಲ್ಲ. ಹಾಗಿದ್ದರೆ ವಿಷಯದ ಹಿನ್ನೆಲೆ, ಮುನ್ನೆಲೆ ಏನು ಎಂದು ತಿಳಿಯಲು ಈ ವರದಿ ಪೂರ್ತಿ ಓದಿ.

ವಾದವೇನು?:

ವ್ಯಾಕ್ಸಿನೇಶನ್‌ನಿಂದ 40 ಮಕ್ಕಳು ಆಸ್ಪತ್ರೆ ದಾಖಲಾಗಿದ್ದಾರೆ ಎಂದು ತಲೆ ಬರಹ ಇರುವ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯ ವರದಿ ಚಿತ್ರವನ್ನು ಟ್ವೀಟ್ ಮಾಡಲಾಗಿದೆ. ಪಾಕಿಸ್ತಾನ್ ಬಾವುಟ ಚಿತ್ರಹೊಂದಿದ ವ್ಯಕ್ತಿಯೊಬ್ಬ ತನ್ನ ಟ್ವಿಟರ್ ಖಾತೆಯಲ್ಲಿ ಆ ಪತ್ರಿಕೆಯ ಪುಟವನ್ನು ಪೋಸ್ಟ್ ಮಾಡಿದ್ದಾರೆ.

https://twitter.com/rn_farid/status/1350825335839928328

ಸುದ್ದಿಯ ಪರಿಶೀಲನೆ ನಡೆಸಿದ್ದು ಹೇಗೆ?

ಟ್ವೀಟ್ ಮಾಡಲಾಗಿರುವ ಪತ್ರಿಕೆಯ ಚಿತ್ರದಲ್ಲಿರುವ ವರದಿಯ ಹೆಡ್ಡಿಂಗ್ ಅನ್ನು ಗೂಗಲ್‌ನಲ್ಲಿ ಸರ್ಚ್ ಮಾಡಿದಾಗ ವರದಿ 2018 ನ.30೦ರಂದು ಪ್ರಸಾರ ಮಾಡಿರುವ ಸುದ್ದಿ ಲಿಂಕ್ ಪತ್ತೆಯಾಯಿತು. ಅದೇ ಸುದ್ದಿಯಲ್ಲಿ ಫೋಟೊ ಸಹ ಪೋಸ್ಟ್ ಮಾಡಲಾಗಿದೆ. ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರುವ ಪತ್ರಿಕೆಯ ಸುದ್ದಿಯಲ್ಲಿರುವ ಚಿತ್ರವೂ ಅದೇ ಆಗಿದೆ. ಅಂದರೆ, ಆ ಫೋಟೊ, ವರದಿ 2018ನೇ ವರ್ಷದ್ದು.

ಆ ವರದಿಯಲ್ಲಿ ರುಬೆಲ್ಲಾ ವ್ಯಾಕ್ಸಿನ್ ಪಡೆದ ಕಾಪುರದ ಸುಮಾರು 40 ಮಕ್ಕಳು ಅಲರ್ಜಿ, ಜ್ಚರ, ತಲೆನೋವು, ಹೊಟ್ಟೆ ನೋವಿನಿಂದ ಆಸ್ಪತ್ರೆ ದಾಖಲಾಗಿದ್ದಾರೆ. ಎಲ್ಲ ಮಕ್ಕಳನ್ನು ಎಲ್‌ಎಲ್‌ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದರಲ್ಲಿ ೨೦ ಮಕ್ಕಳು ಆಸ್ಪತ್ರೆ ದಾಖಲಾದ ಕೆಲ ಗಂಟೆಗಳಲ್ಲಿಯೇ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ವರದಿಯಲ್ಲಿದೆ.

ನಿರ್ಧಾರ:

2018ರಂದು ನಡೆದ ಘಟನೆಗೆ ಈಗಿನ ಕೋವಿಡ್ 19 ವ್ಯಾಕ್ಸಿನ್ ಅಭಿಯಾನಕ್ಕೆ ತಳಕುಹಾಕಿ ಸುಳ್ಳು ಸುದ್ದಿ ಹರಡುವ ಯತ್ನ ಮಾಡಲಾಗಿದೆ.