“ನಿರ್ಲಕ್ಷಿಸಬೇಡಿ. ದಯವಿಟ್ಟು ಇದನ್ನು ಎಚ್ಚರಿಕೆಯಿಂದ ಓದಿ “ಹಲೋ, ನಾನು ವರುಪ್ ಪುಲ್ಯಾನಿ ವಾಟ್ಸಾಪ್ ನಿರ್ದೇಶಕ, ಈ ಸಂದೇಶವು ನಮ್ಮ ಎಲ್ಲ ಬಳಕೆದಾರರಿಗೆ ನಾವು ವಾಟ್ಸಾಪ್ ಅನ್ನು ಮಾರ್ಕ್ ಜುಕರ್‌ಬರ್ಗ್ಗೆ 19 ಬಿಲಿಯನ್ ಡಾಲರ್‌ಗಳಿಗೆ ಮಾರಾಟ ಮಾಡಿದ್ದೇವೆ ಎಂದು ತಿಳಿಸುವುದು.

ವಾಟ್ಸಾಪ್ ಅನ್ನು ಈಗ ಮಾರ್ಕ್ ಜುಕರ್‌ಬರ್ಗ್ ನಿಯಂತ್ರಿಸುತ್ತಾರೆ. ನೀವು ಕನಿಷ್ಠ 20 ಸಂಪರ್ಕಗಳನ್ನು ಹೊಂದಿದ್ದರೆ, ಈ ಪಠ್ಯ ಸಂದೇಶವನ್ನು ಕಳುಹಿಸಿ ಮತ್ತು ನಿಮ್ಮ ವಾಟ್ಸಾಪ್ ಲೋಗೋ ೨೪ ಗಂಟೆಗಳಲ್ಲಿ ಫೇಸ್‌ಬುಕ್‌ನ “ಎಫ್” ನೊಂದಿಗೆ ಹೊಸ ಐಕಾನ್‌ಗೆ ಬದಲಾಗುತ್ತದೆ….

ಹೀಗೆ ಸುದೀರ್ಘ ಬರಹವುಳ್ಳ ಸಂದೇಶವೊ೦ದು ವಾಟ್ಸಾಪ್‌ನಲ್ಲಿ ವೈರಲ್ ಆಗುತ್ತಿದೆ. ಹಲವರು ಈ ಸಂದೇಶ ಓದಿ ಕಂಗಾಲಾಗಿದ್ದಾರೆ. ಇಂಗ್ಲಿಷ್‌ನಿ೦ದ ಕನ್ನಡಕ್ಕೆ ಯಥಾವತ್ ಅನುವಾದ ಮಾಡಿರುವ ರೀತಿಯಲ್ಲಿ ಈ ಬರಹ ಇದೆ. ಅಸಲಿಗೆ ಏನಿದು, ಈ ಬರದ ವಾಸ್ತವ ಸತ್ಯ ಏನು ಎನ್ನುವ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಅದರ ಬಗ್ಗೆ ತಿಳಿಯಲು ಈ ಕೆಳಗಿನ ವಿವರವನ್ನು ಪೂರ್ತಿಯಾಗಿ ಓದಿ.

ವಾಟ್ಸಾಪ್ ನಲ್ಲಿ ಇಂಗ್ಲಿಷ್, ಕನ್ನಡ ಭಾಷೆಯಲ್ಲಿ ಹರಿದಾಡುತ್ತಿರುವ ಈ ಸಂದೇಶವನ್ನು ಸರಿಯಾಗಿ ಓದಿದರೆ, “ಅದರಲ್ಲಿ 2017ರ ವೇಳೆಗೆ’ ಎನ್ನುವ ವಾಕ್ಯವಿದೆ. ಅಂದರೆ ಇದು 2017ಕ್ಕಿಂತ ಮೊದಲೇ ಈ ಸಂದೇಶ ಹರಿದಾಡುತ್ತಿದೆ ಎನ್ನುವ ಸಂಶಯ ಮೂಡಿಸುತ್ತದೆ. ಇದೇ ಮೆಸೇಜ್ ನ ಇಂಗ್ಲಿಷ್ ಭಾಷೆಯಲ್ಲಿ ಗೂಗಲ್ ಸರ್ಚ್ ಇಂಜಿನ್ ನಲ್ಲಿ ಹುಡುಕಾಡಿದಾಗ ಇದೇ ಸಂದೇಶ 2016ರಲ್ಲಿ ಬಳಸಾಗಿದೆ ಎನ್ನುವ ಮಾಹಿತಿ ತೋರಿಸುತ್ತದೆ.

ಅಲ್ಲದೆ, ೨೦೧೬ರಲ್ಲಿಯೇ ಅನೇಕ ಸುದ್ದಿ ಸಂಸ್ಥೆಗಳು ಇದು ಸುಳ್ಳು ಎಂದು ಹೇಳಿವೆ. ಅಲ್ಲದೆ, ಕೊನೆಯ ವಾರ್ನಿಂಗ್ ಎಂದು ನಾಲ್ಕು ವರ್ಷಗಳಿಂದ ಸಂದೇಶ ಹರಿದಾಡುತ್ತಿದೆ. ವಾಟ್ಸಾಪ್ ಸಂಸ್ಥೆ ವೆಬ್‌ಸೈಟ್ ನಲ್ಲಿ “ವಾಟ್ಸಾಪ್ ನಿರ್ದೇಶಕ ವರುಪ್ ಪುಲ್ಯಾನಿ” ಎಂಬ ಹೆಸರನ್ನು ಹುಡುಕಾಡಿದಾಗ ಆ ಹೆಸರಿನ ಮಾಹಿತಿ ವೆಬ್‌ಸೈಟ್‌ನಲ್ಲಿ ತೋರಿಸಲಿಲ್ಲ. ಹಾಗಾಗಿ ಈ ಸಂದೇಶ ಸುಳ್ಳಾಗಿದೆ.