ಸರ್ಕಾರದಿಂದ ಭಾರತದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ನೀಡಲಾಗುತ್ತಿದೆ. ಅದಕ್ಕಾಗಿ ತಕ್ಷಣ ಹೆಸರು ನೋಂದಾಯಿಸಿಕೊಳ್ಳಿ ಎನ್ನುವ ವಾಟ್ಸಾಪ್ ಸಂದೇಶವೊ0ದು ಎಲ್ಲೆಡೆ ಹರಿದಾಡುತ್ತಿದೆ.

ವಾಸ್ತವದಲ್ಲಿ ಅಂಥದ್ದೊ0ದು ಯೋಜನೆ ಇದೆಯೇ?, ಭಾರತದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್ ಕೊಡಲು ಸರ್ಕಾರ ಮುಂದಾಗಿರುವುದು ನಿಜವೇ? ಇಂಥ ಹಲವು ಪ್ರಶ್ನೆಗಳಿಗೆ ಕೇಂದ್ರ ಸರ್ಕಾರವೇ ಉತ್ತರ ನೀಡಿದೆ.

ವೈರಲ್ ಸಂದೇಶವೇನು?

“ಭಾರತದ ಎಲ್ಲ ವಿದ್ಯಾರ್ಥಿಗಳಿಗೆ ಸರ್ಕಾರ ಉಚಿತವಾಗಿ ಲ್ಯಾಪ್‌ಟಾಪ್ ಕೊಡುತ್ತಿದೆ. ಜಿಓವಿ-ಲ್ಯಾಪ್‌ಟಾಪ್ ಆ್ಯಪ್ ನಲ್ಲಿ ನಿಮ್ಮ ನಂಬರ್ ನೋಂದಾಯಿ ಮತ್ತು ಉಚಿತವಾಗಿ ಲ್ಯಾಪ್‌ಟಾಪ್ ಪಡೆಯಿರಿ’ ಎಂದು ಯುಆರ್‌ಎಲ್ ಲಿಂಕ್‌ವೊAದು ನೀಡಲಾಗಿದೆ.

ಕೇಂದ್ರ ಸರ್ಕಾರ ಹೇಳಿದ್ದೇನು?

ಉಚಿತ ಲ್ಯಾಪ್‌ಟಾಪ್ ವಿತರಿಸುವ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಯುಆರ್‌ಎಲ್ ಲಿಂಕ್ ನಕಲಿಯಾಗಿದೆ. ಅಲ್ಲದೆ, ಅಂಥ ಯಾವುದೇ ಯೋಜನೆ ಜಾರಿಯಲ್ಲಿ ಇಲ್ಲ ಎಂದು ಕೇಂದ್ರ ಸರ್ಕಾರದ ಪ್ರೆಸ್ ಇನ್‌ಫಾರ್ಮೇಷನ್ ಬ್ಯೂರೊದ ಫ್ಯಾಕ್ಟ್ಚೆಕ್ ಟ್ವಿಟರ್ ಖಾತೆಯಲ್ಲಿ ಸ್ಪಷ್ಟವಾಗಿ ತಿಳಿಸಿದೆ.

ತೀರ್ಮಾನ:

ಪ್ರೆಸ್ ಇನ್‌ಫಾರ್ಮೇಷನ್ ಬ್ಯೂರೊದ ಫ್ಯಾಕ್ಟ್ಚೆಕ್ ಟ್ವಿಟರ್ ಖಾತೆಯ ಮಾಹಿತಿ ಸರ್ಕಾರದ ಅಧಿಕೃತ ಮಾಹಿತಿಯಾಗಿದೆ. ಹಾಗಾಗಿ ಅದು ನಂಬಲರ್ಹವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಉಚಿತ ಲ್ಯಾಪ್‌ಟಾಪ್ ಯೋಜನೆ ಮಾಹಿತಿ ಸುಳ್ಳು.

ವೈರಲ್ ವಿಷಯಗಳ ಬಗ್ಗೆ ತಿಳಿಯಲು ಇಲ್ಲಿ ಒತ್ತಿ