ಕೂದಲು ಸೌಂದರ್ಯದ ಚಿಂತೆ ಬಿಡಿ: ಇಲ್ಲಿದೆ ಮನೆ ಮದ್ದು
ಕೂದಲು ಕವಲಾಗಿ ಗಂಟು ಕಟ್ಟುವುದು ಮಹಿಳೆಯರಿಗೆ ದೊಡ್ಡ ಸಮಸ್ಯೆ. ಪುರುಷರಲ್ಲಿಯೂ ಕೂದಲು ಟಿಸಿಲೊಡೆದು ಸೌಂದರ್ಯ ಹಾಳು ಮಾಡುತ್ತವೆ. ಇದಕ್ಕೆ ನಾನಾ ಔಷಧಗಳನ್ನು ಹಚ್ಚಿದರೂ ಕಡಿಮೆಯಾಗದೆ ಸಮಸ್ಯೆ ಅನುಭವಿಸುತ್ತಿದ್ದರೆ, ಚಿಂತಿಸಬೇಡಿ. ಅದಕ್ಕೆ ಮನೆಯಲ್ಲಿಯೇ ಪರಿಹಾರವಿದೆ.
ಮನೆಯಲ್ಲಿ ಆಲೂವೇರಾ ಇದ್ದರೆ ಅದನ್ನು ಬಳಸಿ ನಮ್ಮ ಕೂದಲು ಮಧ್ಯದಲ್ಲಿ ಕವಲಾಗುವುದನ್ನು ತಪ್ಪಿಸಬಹುದು. ಯಾವುದೇ ತೊಂದರೆ ಇಲ್ಲದ ರೀತಿಯಲ್ಲಿ ಕೂದಲೂ ಚೆನ್ನಾಗಿ ಬೆಳೆಯ ಬಲ್ಲದು. ಅದು ಹೇಗೆ ಎಂಬುದಕ್ಕೆ ಈ ಲೇಖನ ಪೂರ್ತಿ ಓದಿ.
ಇದನ್ನೂ ಓದಿ: ಕೂದಲು ಕಪ್ಪಗಾಗಬೇಕೆ? ಕರಿ ಬೇವಿನಲ್ಲಿದೆ ಆರೋಗ್ಯದ ಗುಟ್ಟು
ಔಷಧ ತಯಾರಿಸುವ ವಿಧಾನ:
ಆಲೂವೇರಾದ ಒಂದು ಅಂಚನ್ನು ತುಂಡು ಮಾಡಿ ಅದನ್ನು 10 ನಿಮಿಷ ನೀರಿನಲ್ಲಿ ನೆನೆಸಿಡಬೇಕು. ನಂತರ ನೆನೆಸಿದ ಆಲೂವೇರಾದ ಮಧ್ಯದಲ್ಲಿರುವ ಲೋಳೆಯನ್ನು ತೆಗೆದು ಮಿಕ್ಸಿ ಜಾರಿಗೆ ಹಾಕಿ ರುಬ್ಬಬೇಕು. ರುಬ್ಬಿದ ಮಿಶ್ರಣವನ್ನು ಒಂದು ಬೌಲ್ ನಲ್ಲಿ ಹಾಕಿ ಇಟ್ಟುಕೊಳ್ಳಬೇಕು.
ಬಳಿಕ ಒಂದು ದೊಡ್ಡ ಈರುಳ್ಳಿ(ಚಿಕ್ಕದಾದರೆ 2) ಕತ್ತರಿಸಿಕೊಂಡು ಅದನ್ನು ಸಹ ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಬೇಕು. ಈ ಮಿಶ್ರಣವನ್ನು ಜಾಳಿಗೆಯಲ್ಲಿ ಗಾಳಿಸಿ ಇದರ ರಸವನ್ನು ಮತ್ತೊಂದು ಬೌಲ್ ನಲ್ಲಿ ಹಾಕಿಡಬೇಕು. ನಂತರ ಆಲೂವೆರಾ ಮತ್ತು ಈರುಳ್ಳಿ ರಸವನ್ನು ಸೇರಿಸಬೇಕು. ತಲೆಗೆ ಕೊಬ್ಬರಿ ಎಣ್ಣೆಯನ್ನು ಚೆನ್ನಾಗಿ ಹಚ್ಚಿಕೊಂಡ ನಂತರ ಮಿಶ್ರಣವನ್ನು ಕೂದಲಿನ ಮೂಲೆ ಮೂಲೆಗೂ ಸೇರುವ ರೀತಿ ತಲೆ ಪೂರ್ತಿ ಹಚ್ಚಬೇಕು.
ಇದನ್ನೂ ಓದಿ: ಕೂದಲು ಕಪ್ಪಗಾಗಬೇಕೆ? ಕರಿ ಬೇವಿನಲ್ಲಿದೆ ಆರೋಗ್ಯದ ಗುಟ್ಟು
ನಂತರ 2 ಗಂಟೆ ಬಿಟ್ಟು ತಲೆ ಸ್ನಾನ ಮಾಡಬೇಕು. ಹೀಗೆ ವಾರಕ್ಕೆ ಎರಡು ಬಾರಿ ಮಿಶ್ರಣವನ್ನು ಹಚ್ಚುವುದರಿಂದ ಕೂದಲು ಕವಲಾಗುವುದನ್ನು ತಪ್ಪಿಸ ಬಹುದು ಮತ್ತು ಕೂದಲು ಬೆಳೆಯುವುದನ್ನು ಕಾಣಬಹುದು.
ಲೇಖನ: ಎಂ. ಚಂದ್ರಕಲಾ.