ಯಾವುದೇ ವ್ಯಕ್ತಿ ಅಥವಾ ಪ್ರಾಣಿ ನೂರು ವರ್ಷ ಬದುಕಿದರೂ ಅದು ದಾಖಲೆ ಎಂದು ಹುಬ್ಬೇರಿಸುತ್ತೇವೆ. ಈಗಂತೂ ವರ್ಷದಿಂದ ವರ್ಷಕ್ಕೆ ಬರುವ ಹತ್ತಾರು ವೈರಸ್ ಗಳಿಂದ ಬಚಾವಾಗಿ ಆಯಸ್ಸು ಉಳಿಸಿಕೊಳ್ಳುವುದು ಪ್ರತಿಯೊಂದು ಜೀವಿಗೂ ದೊಡ್ಡ ಸವಾಲೇ ಸರಿ.

ಇಂಥದ್ದರಲ್ಲಿ ಆತ 187 ವರ್ಷಗಳಿಂದ ಭೂಮಿ ಮೇಲೆ ಬದುಕಿದ್ದಾನೆ. ದಕ್ಷಿಣ ಅಟ್ಲಾಂಟಿಕ್ ಸಮುದ್ರದ ದ್ವೀಪವೊಂದರಲ್ಲಿ ಜಗತ್ತಿನ ಆ ಹಿರಿಯ ಜೀವ ವಾಸವಿದೆ. ಈಗಂತೂ ಆತನೇ ಜಗತ್ತಿನ ಅತ್ಯಂತ ಹಿರಿಯ ಜೀವಿ ಎಂದು ಭಾವಿಸಲಾಗಿದೆ.

ಆತನ ಹೆಸರು ಜೊನಾಥನ್. 1832ರಲ್ಲಿಜನಿಸಿದ ಆತ ಈಗಲೂ ಬದುಕಿದ್ದಾನೆ. ಈಗ ಅವನಿಗೆ 187 ವರ್ಷ. ಜಗತ್ತಿನ ಎರಡು ಮಹಾಯುದ್ಧಗಳನ್ನು ಕಂಡಿದ್ದಾನೆ. ಎಂಥದ್ದದ್ದೋ ವೈರಸ್, ಸೋಂಕುಗಳನ್ನು ಜಗತ್ತಿನಲ್ಲಿ ಸುಳಿದಾಡಿದರೂ ಆತ ಮಾತ್ರ ಯಾವುದಕ್ಕೂ ಹೆದರದೆ ಗಟ್ಟಿಯಾಗಿದ್ದಾನೆ.

ಇದನ್ನೂ ಓದಿ: ದಟ್ಟಾರಣ್ಯದಲ್ಲಿ ದಾರಿ ತೋರಿಸುವ ಮೂರು ಶ್ವಾನಗಳು.

ಸೇಂಟ್ ಹೆಲೆನಾ ಎನ್ನುವ ದ್ವೀಪದಲ್ಲಿರುವ ಜೊನಾಥನ್ ಆಯಸ್ಸು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಆಗಿದೆ. ಸೇಂಟ್ ಹೆಲೆನಾ ಎನ್ನುವುದು ದ್ವೀಪರಾಷ್ಟ್ರ. ಜೊನಾಥನ್ ಗೆ 50 ವರ್ಷವಾಗಿದ್ದಾಗ ಹೆಲೆನಾದ ರಾಜ್ಯಪಾಲರ ಭವನದಲ್ಲಿ ಆಶ್ರಯ ನೀಡಲಾಯಿತು. ಅಂದಿನಿಂದ ಜೊನಾಥನ್ ಅಲ್ಲಿಯೇ ಇದ್ದಾನೆ. ಆತನನ್ನು ನೋಡಿಕೊಳ್ಳಲು ವಿಶೇಷ ವೈದ್ಯರ ತಂಡ ಕೆಲಸ ಮಾಡುತ್ತಿದೆ.

ಇದನ್ನೂ ಓದಿ: ಜನ್ಮದಿನ ಆಚರಿಸಿಕೊಳ್ಳುವ ಹೋರಿ.

1886ರಲ್ಲಿ ತೆಗೆದ ಜೊನಾಥನ್ (ಎಡಬದಿ) ಮತ್ತು ಇನ್ನೊಂದು ದೈತ್ಯ ಆಮೆಯ ಪೋಟೊ.

ಯಾರು ಈ ಜೊನಾಥನ್?
ಜೊನಾಥನ್ ಎಂದರೆ ಆತ ಮನುಷ್ಯ ಅಲ್ಲ. ಗಂಡು ಆಮೆ. ಅದಕ್ಕೆ ಜೊನಾಥನ್ ಎಂದು ಹೆಸರಿಟ್ಟು ರಾಜ್ಯಪಾಲರ ಭವನದಲ್ಲಿ ಸಲಹಲಾಗುತ್ತಿದೆ. ಸೀಶೆಲ್ಸ್ ದೈತ್ಯ ಆಮೆ ಜಾತಿಗೆ ಸೇರಿದ ಜೊನಾಥನ್ ಈಗ ಜಗತ್ತಿನ ಅತ್ಯಂತ ಹಿರಿಯ ಜೀವಿ. ಇದರ ತಾಯಿ ಮಲಿಲಾ 188ನೇ ವಯಸ್ಸಿನಲ್ಲಿ 1965ರಲ್ಲಿ ನಿಧನವಾಯಿತು. ಜೊನಾಥನ್ ಇನ್ನೊಂದು ವರ್ಷ ಬದುಕಿದರೆ ಅತಿ ಹೆಚ್ಚು ವರ್ಷ ಬದುಕಿದ ಜೀವಿ ಎನ್ನುವ ದಾಖಲೆ ಸೃಷ್ಟಿಯಾಗಲಿದೆ.

ಸದ್ಯ ಜೊನಾಥನ್ ಕಣ್ಣಿನ ಪೊರೆಯಿಂದ ಕುರುಡನಾಗಿದ್ದಾನೆ. ವಾಸನೆಯ ಪ್ರಜ್ಞೆಯನ್ನು ಸಹ ಕಳೆದುಕೊಂಡಿದ್ದಾನೆ.  ಪೌಷ್ಠಿಕಾಂಶದ ಹಣ್ಣು ಮತ್ತು ತರಕಾರಿ ಆಹಾರ ನೀಡುವ ಮೂಲಕ ಪಶುವೈದ್ಯರು ಅವನನ್ನು ನೋಡಿಕೊಳ್ಳುತ್ತಾರೆ.

ಭಾರತದ ಕೋಲ್ಕತ್ತಾದಲ್ಲಿರುವ ಎಲಿಪೋರ್ ಜಿಯೋಲಾಜಿಕಲ್ ಗಾರ್ಡನ್ ನಲ್ಲಿ ಅಲ್ಡಬ್ರಾ ಎನ್ನುವ ಆಮೆಯೊಂದು 2006ರಲ್ಲಿ ಮೃತಪಟ್ಟಿತ್ತು. ಅದರ ಆಯಸ್ಸು 255 ಎಂದು ಹೇಳಲಾಗುತ್ತಿದೆ. ಆದರೆ, ಅದು ಖಚಿತವಾಗಿಲ್ಲ.