Select Page

ಟೊಮ್ಯಾಟೊ ಸಮಗ್ರ ಅಭಿವೃದ್ಧಿಗೆ ಸಹಾಯಧನ: ಅರ್ಜಿ ಆಹ್ವಾನ

ಟೊಮ್ಯಾಟೊ ಸಮಗ್ರ ಅಭಿವೃದ್ಧಿಗೆ ಸಹಾಯಧನ: ಅರ್ಜಿ ಆಹ್ವಾನ

ಕೇಂದ್ರ ಸರ್ಕಾರ ಯೋಜನೆ “operation  greens” A Scheme for integrated Development of Tomato, onion and potato (TOP) value chain ಕಾರ್ಯಕ್ರಮದಡಿ ಟೊಮ್ಯಾಟೊ ಸಮಗ್ರ ಅಭಿವೃದ್ಧಿ ಯೋಜನೆಯಡಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ವೈಯಕ್ತಿಕ ಫಲಾನುಭವಿ (ರೈತರು), ಉದ್ದಿಮೆದಾರರು, ರೈತ ಉತ್ಪಾದಕ ಸಂಸ್ಥೆಗಳನ್ನು ಉತ್ತೇಜಿಸಿ ಮಾರುಕಟ್ಟೆ ಕಲ್ಪಿಸುವುದು, ಮಾರುಕಟ್ಟೆಗೆ ಹೆಚ್ಚು ಆವಕವಾಗುವ ಸಂರ್ದಭದಲ್ಲಿ ಸಂಸ್ಕರಣೆ ಮಾಡಲು ಸಂಸ್ಕರಣೆ ಮತ್ತು ಮೌಲ್ಯ ವರ್ಧನೆಯನ್ನು ಉತ್ತೇಜಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ಆಸಕ್ತಿಯುಳ್ಳ ರೈತರು, ಉದ್ದಿಮೆದಾರರು, ರೈತ ಉತ್ಪಾದಕ ಸಂಸ್ಥೆಗಳಿಂದ ಆನ್‍ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.

ಸಹಾಯಧನದ ವಿವರ:

ಯೋಜನೆಯನ್ನು ಅನುಷ್ಠಾನಿಸುವ ಸಂಸ್ಥೆಗಳಿಗೆ ಶೇ.50 ರಂತೆ (50 ಕೋಟಿ ರೂ.ಗೆ ಮೀರದಂತೆ) ನೈಜ ಯೋಜನಾ ವೆಚ್ಚಕ್ಕೆ ಸಹಾಯಧನವನ್ನು ನೀಡಲಾಗುವುದು. ಯೋಜನಾ ಅನುಷ್ಠಾನ ಸಂಸ್ಥೆ ರೈತ ಉತ್ಪಾದಕ ಸಂಸ್ಥೆ ಆದಲ್ಲಿ ಸಹಾಯಧನವನ್ನು ಶೇ.70 ರಂತೆ (50 ಕೋಟಿ ರೂ.ಗೆ ಮೀರದಂತೆ) ನೈಜ ಯೋಜನಾ ವೆಚ್ಚಕ್ಕೆ ಸಹಾಯಧನಕ್ಕೆ ಪರಿಗಣಿಸಲಾಗುವುದು.

ಅರ್ಜಿಗಳನ್ನು ಆನ್‍ಲೈನ್ ಮೂಲಕ https://sampada.gov.in/ ವೆಬ್‍ಸೈಟ್‍ನಲ್ಲಿ ಸಲ್ಲಿಸಬೇಕು. 30-09-2020 ರೊಳಗೆ ಅರ್ಜಿ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

Leave a reply

Your email address will not be published. Required fields are marked *