ಕರ್ನಾಟಕ ವಾರ್ತೆ: staff selection commission 2022
ಬೆಂಗಳೂರು ಸ್ಟಾಫ್ ಸೆಲೆಕ್ಷನ್ ಕಮಿಷನ್(ಕೆಕೆಆರ್)ನಿಂದ 835 ಹೆಡ್ ಕಾನಸ್ಟೇಬಲ್ (ಮಿನಿಸ್ಟೀರಿಯಲ್)ಹುದ್ದೆಗಳ ಭರ್ತಿಗೆ ಅರ್ಹ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳು 18 ರಿಂದ 25 ವರ್ಷದೊಳಗಿರಬೇಕು, ಇತರೆ ವರ್ಗದವರಿಗೆ ನಿಯಮಾನುಸಾರ ಸಡಿಲಿಕೆ ಇದೆ. 10+2 (Senior Secondary/ Higher Secondary) ವಿದ್ಯಾರ್ಹತೆ ಹೊಂದಿರಬೇಕು.

ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಯೊಂದಿಗೆ ದಿನಾಂಕ 16-06-2022ರೊಳಗೆ ವೆಬ್‍ಸೈಟ್ https://ssc.nic.in ನಲ್ಲಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂ.080-25502520, ಮೊ.9483862020, ದೂ.08375-249291ಕ್ಕೆ ಸಂಪರ್ಕಿಸಲು ಜಿಲ್ಲಾ ಉದ್ಯೋಗಾಧಿಕಾರಿಗಳು ತಿಳಿಸಿದ್ದಾರೆ.