
ಬೀದರ್ ವಾಯುಪಡೆ ನಿಲ್ದಾಣದಲ್ಲಿ ನೇಮಕಾತಿ: ಅರ್ಜಿ ಆಹ್ವಾನ

ಬೀದರ್‌ನಲ್ಲಿರುವ ವಾಯುಪಡೆ ನಿಲ್ದಾಣದಲ್ಲಿ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅಂಚೆ ಮೂಲಕ ಮಾರ್ಚ್ 23, 2020ರೊಳಗೆ ಅರ್ಜಿ ಸಲ್ಲಿಸಬೇಕು.
ಹುದ್ದೆಗಳು
ಸ್ತ್ರಿರೋಗ ತಜ್ಞ- ಸ್ತ್ರೀರೋಗ ಮತ್ತು ಪ್ರಸೂತಿಯಲ್ಲಿಎಂಡಿ/ಡಿಎನ್‌ಬಿ ಓದಿರಬೇಕು.
ಮಕ್ಕಳ ವೈದ್ಯ– ಪಿಡಿಯಾಟ್ರಿಕ್ಸ್‌ನಲ್ಲಿಎಂಡಿ/ಡಿಎನ್‌ಬಿ ಓದಿರಬೇಕು.
ದಂತ ವೈದ್ಯ- ಬಿಡಿಎಸ್/ಎಂಡಿಎಸ್ ಓದಿರಬೇಕು.
ಮಾನಸಿಕ ಸಲಹೆಗಾರ– ಮನಃಶಾಸ್ತ್ರದಲ್ಲಿಎಂಎ/ಎಂಫಿಲ್ ಓದಿರಬೇಕು.
ಗಮನಿಸಿ: ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಸರಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಕೆ ಹೇಗೆ?
ಅಭ್ಯರ್ಥಿಗಳು ಒಂದು ಪಾಸ್‌ಪೋರ್ಟ್ ಅಳತೆಯ ಬಣ್ಣದ ಭಾವಚಿತ್ರ ಸೇರಿ ದೃಢೀಕೃತ ಅರ್ಹತಾ ಪ್ರಮಾಣ ಪತ್ರ, ಅನುಭವ ಪ್ರಮಾಣ ಪತ್ರ ಮತ್ತು ಸಂಪರ್ಕ ಸಂಖ್ಯೆಯೊಂದಿಗೆ ಬಿಳೆಹಾಳೆಯ ಮೇಲೆ ಅರ್ಜಿ ಬರೆದು ಅಂಚೆ ಮೂಲಕ ಅರ್ಜಿ ಸಲ್ಲಿಸಬೇಕು.
ವಿಳಾಸ: ಸ್ಟೇಷನ್ ಮೆಡಿಕೇರ್ ಸೆಂಟರ್, ಕೇರಾಫ್ ವಾಯುಪಡೆ ವಿಮಾನ ನಿಲ್ದಾಣ, ಬೀದರ್ 585401.