ಭಾರತೀಯ ಕರಾವಳಿ ಭದ್ರತಾ ಪಡೆಯಲ್ಲಿ ಯಾಂತ್ರಿಕ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. 2020ರ ಆಗಸ್ಟ್ ನಿಂದ ಆರಂಭವಾಗಲಿರುವ ಕೋರ್ಸ್ ಮೂಲಕ ಈ ನೇಮಕ ನಡೆಯಲಿದ್ದು, ಪ್ರವೇಶ ಪಡೆಯಲು ಮಾರ್ಚ್ 16ರಿಂದ ಆನ್ ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಮಾರ್ಚ್ 22 ಅರ್ಜಿಸಲ್ಲಿಸಲು ಕೊನೆಯ ದಿನವಾಗಿದೆ.

ವಿದ್ಯಾರ್ಹತೆ:
ಎಸ್ಸೆಸ್ಸೆಲ್ಸಿ ಪಾಸಾಗಿರುವ ಮೂರು ವರ್ಷದ ಡಿಪ್ಲೊಮಾ ಮಾಡಿರುವ ಅಭ್ಯರ್ಥಿಗಳು ಯಾಂತ್ರಿಕ ಕೋರ್ಸ್ ಗೆ ಪ್ರವೇಶ ಪಡೆಯಬಹುದು. ಅಭ್ಯರ್ಥಿಗಳು ಎಲೆಕ್ಟ್ರಿಕಲ್, ಮೆಕ್ಯಾನಿಕಲ್ ಮತ್ತು ಎಲಕ್ಟ್ರಾನಿಕ್ಸ್ ಆ್ಯಂಡ್ ಟೆಲಿಕಮ್ಯುನಿಕೇಷನ್ (ರೇಡಿಯೊ/ ಪವರ್) ಎಂಜಿನಿಯರಿಂಗ್ ಡಿಪ್ಲೊಮಾದಲ್ಲಿ ಶೇ. 60 ರಷ್ಟು ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.
ಯಾವುದಾದರೂ ಕ್ರೀಡೆಯಲ್ಲಿ ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಮಟ್ಟವನ್ನು ಪ್ರತಿನಿಧಿಸಿ ಪ್ರಥಮ, ದ್ವಿತೀಯ ಅಥವಾ ತೃತೀಯ ಸ್ಥಾನ ಪಡೆದು ಸಾಧನೆ ಮಾಡಿದ್ದರೆ ಅಂಥ ಅಭ್ಯರ್ಥಿಗಳಿಗೆ ಶೇ. 5 ಅಂಕಗಳ ಸಡಿಲಿಕೆ ಇದೆ.

ಸರಕಾರಿ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ವಯೋಮಿತಿ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯೋಮಿತಿ 22 ವರ್ಷ. ಅಂದರೆ, 1998ರ ಆಗಸ್ಟ್ 1 ಮತ್ತು 2002ರ ಜುಲೈ 31ರ ನಡುವೆ ಜನಿಸಿರಬೇಕು. ಎಸ್ ಸಿ, ಎಸ್ ಟಿ ಅಭ್ಯರ್ಥಿಗಳಿಗೆ ಐದು ವರ್ಷ ಮತ್ತು ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಮೂರು ವರ್ಷಗಳ ವಯೋಮಿತಿ ಸಡಿಲಿಕೆ ಇದೆ.

ದೈಹಿಕ ಅರ್ಹತೆ:
ಎತ್ತರ ಕನಿಷ್ಠ 157 ಸೆ.ಮೀ. ಎದೆಯ ವಿಸ್ತೀರ್ಣತೆ ಕನಿಷ್ಠ 5 ಸೆ.ಮೀ. ಇರಬೇಕು.

ಆಯ್ಕೆ ಪ್ರಕ್ರಿಯೆ:
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಪೈಕಿ, ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಡಿಪ್ಲೊಮಾ ಪಠ್ಯಕ್ರಮವನ್ನು ಆಧರಿಸಿ ರೀಸನಿಂಗ್, ಇಂಗ್ಲಿಷ್ ಮತ್ತು ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆ ಪತ್ರಿಕೆಗಳನ್ನು ನೀಡಲಾಗುತ್ತದೆ. ಇದರಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಗೆ ದೈಹಿಕ ಸಾಮರ್ಥ್ಯ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡಿಸಿ ನೇಮಕ ಮಾಡಿಕೊಳ್ಳಲಾಗುತ್ತದೆ.

ಪರೀಕ್ಷೆ ನಡೆಯುವ ಸ್ಥಳ:
ಮುಂಬಯಿ, ಚೆನ್ನೈ, ಕೋಲ್ಕತ್ತಾ, ನೊಯ್ಡಾ.
2020ರ ಏಪ್ರಿಲ್ ನಲ್ಲಿ ಪರೀಕ್ಷೆ ನಡೆಯಲಿದೆ. ನೇಮಕಗೊಂಡ ಅಭ್ಯರ್ಥಿಗಳಿಗೆ ಓಡಿಸ್ಸಾದ INS ಚಿಲ್ಕಾದಲ್ಲಿ ತರಬೇತಿ ನೀಡಲಾಗುತ್ತದೆ.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸುವ ಆರಂಭ ದಿನಾಂಕ: 16-3-2020
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 22-3-2020
ಪರೀಕ್ಷೆ ನಡೆಯುವುದು: 2020 ಏಪ್ರಿಲ್
ಕೊರ್ಸ್ ಆರಂಭ: ಆಗಸ್ಟ್ 2020

ನೇಮಕಾತಿಯ ಆದೇಶ ಪ್ರತಿಗೆ ಕ್ಲಿಕ್ ಮಾಡಿ Click Hear

ಅರ್ಜಿ ಸಲ್ಲಿಸುವ ವೆಬ್ ಸೈಟ್: Click Hear