ಭಾರತ ಸರಕಾರವು ನೌಕಾಸೇನೆಯನ್ನು ಅತ್ಯಂತ ಬಲಿಷ್ಠ ಗೊಳಿಸಲು ಸೇನಾ ನೆಲೆಗಳನ್ನು ವಿಸ್ತರಿಸುತ್ತಿದೆ. ಅದಕ್ಕಾಗಿ ನೌಕಾಸೇನೆಯಲ್ಲಿ ವ್ಯಾಪಕ ನೇಮಕಾತಿ ನಡೆಯುತ್ತಿದೆ. ನೌಕಾಸೇನೆಯು ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅರ್ಹರನ್ನು ಹುಡುಕುತ್ತಿದೆ. ಆದರೆ, ಸಾಕಷ್ಟು ಯುವ ಜನರು ಈ ನೇಮಕಾತಿಗಳ ಪರಿಚಯ ಇಲ್ಲದೆ ಅವಕಾಶ ಕಳೆದುಕೊಳ್ಳುತ್ತಿದ್ದಾರೆ.
ಆ ಅವಕಾಶದ ದಾರಿ ಇಲ್ಲಿದೆ. ಈ ಲೇಖನವನ್ನು ಪೂರ್ತಿಯಾಗಿ ಓದಿ. ಭಾರತೀಯ ನೌಕಾಸೇನೆಯು ಆಸಕ್ತರಿಂದ ನೇರವಾಗಿಯೇ ಅರ್ಜಿಗಳನ್ನು ಸ್ವೀಕರಿಸುವ ವ್ಯವಸ್ಥೆ ಆರಂಭಿಸಿದೆ. ಯಾವುದೇ ಅಭ್ಯರ್ಥಿ ತನ್ನ ವಿದ್ಯಾರ್ಹತೆ, ವಯಸ್ಸಿಗೆ ಅನುಗುಣವಾಗಿ ಭಾರತೀಯ ಸೇನೆಯಲ್ಲಿರುವ ಯಾವ ಹುದ್ದೆಗೆ ತಾನು ಅರ್ಹ ಎನ್ನುವುದನ್ನು ತಿಳಿದುಕೊಳ್ಳಬಹುದು. ಅಲ್ಲದೆ, ಹೆಸರು ನೋಂದಾಯಿಸಿಕೊಂಡು ನೇಮಕಾತಿ ಪ್ರಕ್ರಿಯೆಯ ಮುನ್ಸೂಚನೆಯನ್ನು ತಿಳಿಯಬಹುದು.

ಅದು ಹೇಗೆ, ಎಲ್ಲಿಂದ ಸಂಪರ್ಕ ಸಾಧಿಸಬಹುದು ಎನ್ನುವುದನ್ನು ಮುಂದೆ ಓದಿ. ಅದಕ್ಕಿಂತ ಮೊದಲು ಭಾರತೀಯ ನೌಕಾಸೇನೆ ಸೇರಲು ಪ್ರಾಥಮಿಕ ಅರ್ಹತೆಗಳು ಏನು ಎಂಬುದನ್ನು ತಿಳಿದುಕೊಳ್ಳೋಣ. ನೌಕಾಸೇನೆಯಲ್ಲಿ 15 ವರ್ಷದಿಂದ 40 ವರ್ಷ ವಯಸ್ಸಿನವರಿಗೆ ವಿವಿಧ ರೀತಿಯ ಹುದ್ದೆಗಳಿವೆ. ವಿದ್ಯಾರ್ಹತೆ ಜತೆಗೆ ವಯಸ್ಸು, ದೇಹ ತೂಕವೂ ಮುಖ್ಯವಾಗಿರುತ್ತದೆ.
ಹಾಗಾಗಿ ಸೇನೆ ಸೇರಬಯಸುವವರು ಮೊದಲು ವಿದ್ಯಾರ್ಹತೆ ಜತೆಗೆ ದೈಹಿಕ ಸಾಮಥ್ರ್ಯದ ಕಡೆಯೂ ಗಮನ ಕೊಡುವುದು ಅಗತ್ಯ. ವಿದ್ಯಾರ್ಹತೆ ಮೇಲೆ ಉದ್ಯೋಗ ಅರಸುವುದಾದರೆ, ಭಾರತೀಯ ನೌಕಾ ಸೇನೆಯಲ್ಲಿ ಜಾಬ್ ಕಾರ್ನರ್ ಎನ್ನುವ ವ್ಯವಸ್ಥೆ ಇದೆ. ಅಲ್ಲಿಗೆ ಭೇಟಿ ನೀಡಿ ನಿಮ್ಮ ವಿದ್ಯಾರ್ಹತೆ, ವಯಸ್ಸು ದಾಖಲಿಸಿದರೆ ನಿಮಗೆ ಹೋಲಿಕೆಯಾಗುವ ಹುದ್ದೆಗಳ ವಿವರ ಕಾಣಿಸುತ್ತದೆ. ಆ ಹುದ್ದೆಗೆ ಇರುವ ಇತರ ಅರ್ಹತೆಗಳ ಬಗ್ಗೆಯೂ ಅಲ್ಲಿಯೇ ತಿಳಿಯಬಹುದು.

ಅರ್ಜಿ ಸಲಿಸುವುದು ಹೇಗೆ
ನೌಕಾಸೇನೆಯ ಜಾಬ್ ಕಾರ್ನರ್‍ನಲ್ಲಿ ಅರ್ಜಿ ಸಲ್ಲಿಸುವ ಮೊದಲು ಹೆಸರು ನೋಂದಾಯಿಸಿಕೊಳ್ಳಬೇಕು. ಆಧಾರ್ ಕಾರ್ಡ್ ನಂಬರ್‍ನಿಂದ ನೇರವಾಗಿ ನೋಂದಣಿ ಮಾಡಬಹುದು. ಇಲ್ಲದಿದ್ದರೆ ವೋಟರ್ ಕಾರ್ಡ್, ಪ್ಯಾನ್ ಕಾರ್ಡ್, ಎಸ್ಸೆಸ್ಸೆಲ್ಸಿ ಪ್ರಮಾಣ ಪತ್ರಗಳ ಮೂಲಕ ನೋಂದಣಿ ಮಾಡುವುದಾದರೆ, ಆ ದಾಖಲೆಗಳ ಸ್ಕ್ಯಾನ್ ಪತ್ರಿ ಇಟ್ಟುಕೊಳ್ಳಬೇಕು.
ಆನ್‍ಲೈನ್ ನಲ್ಲಿ ಈ ದಾಖಲೆನಗಳನ್ನು ಕೊಟ್ಟು ನೋಂದಣಿ ಮಾಡಿಕೊಂಡ ಬಳಿಕ ಇ-ಮೇಲ್ ವಿಳಾಸದ ರೀತಿ ಒಂದು ಯೂಸರ್ ಐಡಿ ಮತ್ತು ಪಾಸ್‍ವರ್ಡ್ ದೊರೆಯುತ್ತದೆ. ಅದರ ಮೂಲಕ ಭಾರತೀಯ ನೌಕಾಸೇನೆಯಲ್ಲಿ ಒಂದು ಖಾತೆ ಹೊಂದಿ ಸೈನ್ಯದ ವಿವಿಧ ಹುದ್ದೆಗಳಿಗೆ ಇತರ ಸಮಯದಲ್ಲಿಯೂ ನೇರವಾಗಿ ಅರ್ಜಿ ಸಲ್ಲಿಸಬಹುದು.

ತಕ್ಷಣ ಹೆಸರು ನೋಂದಾಯಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.