ವಿಡಿಯೊ: ಸಮುದ್ರದಲ್ಲಿ ಬಿದ್ದ ಪ್ಯಾರಾ ಮೋಟಾರ್: ಪ್ರವಾಸಿಗ ಗಂಭೀರ

ಕಾರವಾರ: ಹಾರುತ್ತಿದ್ದ ಪ್ಯಾರಾ ಮೋಟಾರ್ ತುಂಡಾಗಿ ಕಾರವಾರದ ಟ್ಯಾಗೋರ್ ಕಡಲತೀರದ ಸಮುದ್ರದಲ್ಲಿ ಬಿದ್ದಿದೆ.
ಪ್ಯಾರಾ ಮೋಟಾರ್ ನಲ್ಲಿ ಹಾರುತ್ತಿದ್ದ ಇನ್ ಸ್ಟ್ರಕ್ಟರ್ ಸೇರಿ ಪ್ರವಾಸಿಗ ಇಬ್ಬರೂ ಪ್ಯಾರಾ ಮೋಟಾರ್ ನೊಂದಿಗೆ ಸಮುದ್ರದಲ್ಲಿ ಬಿದ್ದಿದ್ದಾರೆ. ಸ್ಥಳದಲ್ಲಿದ್ದವರು ಕೂಡಲೇ ನೆರವಿಗೆ ಧಾವಿಸಿ ಇಬ್ಬರನ್ನೂ ನೀರಿನಿಂದ ಮೇಲೆತ್ತಿದ್ದಾರೆ.
ಈ ಘಟನೆಯಿಂದ ತೀರದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಸಮುದ್ರಕ್ಕೆ ಬಿದ್ದಿರುವ ಇನ್ ಸ್ಟ್ರಕ್ಟರ್ ಅಪಾಯದಿಂದ ಪಾರಾಗಿದ್ದಾರೆ. ಆದರೆ, ಪ್ರವಾಸಿಗನ ಸ್ಥಿತಿ ಗಂಭೀರವಾಗಿದೆ. ತಕ್ಷಣವೇ ಪ್ರವಾಸಿಗನನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.
ಪೊಲೀಸ್ ಸಮಯ ಪ್ರಜ್ಞೆ
ದುರ್ಘಟನೆ ನಡೆದ ತಕ್ಷಣ ಎಲ್ಲರೂ ಆತಂಕಗೊಂಡಿದ್ದರು. ಅಂಬುಲೆನ್ಸ್ ನೆರವು ಬೇಡಿದರೂ ತಕ್ಷಣಕ್ಕೆ ಸಿಗಲೇ ಇಲ್ಲ. ಸಮೀಪದಲ್ಲಿಯೇ ಕಾರವಾರ ಜಿಲ್ಲಾಸ್ಪತ್ರೆ ಇದ್ದಿದ್ದರಿಂದ ಕಾರವಾರ ನಗರ ಠಾಣೆ ಪಿಎಸ್ಐ ಸಂತೋಷ ಅವರ ಜೀಪಿನಲ್ಲಿಯೇ ಪ್ರವಾಸಿಗನನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು.
ಪೊಲೀಸರ ಈ ಸಮಯ ಪ್ರಜ್ಞೆ ಗಮನಸೆಳೆಯಿತು. ಇನ್ನೊಂದೆಡೆ ಪ್ರವಾಸಿಗನ ಸ್ಥಿತಿ ಗಂಭೀರವಾಗಿದ್ದಕ್ಕೆ ಆತನ ಕುಟುಂಬದವರ ಆಕ್ರಂದನ
