ಕಾರವಾರ: ಆಳ ಸಮುದ್ರದಲ್ಲಿ ನಿಷೇದಿತ ಬುಲ್ ಟ್ರಾಲ್ ಮೂಲಕ ಮೀನುಗಾರಿಕೆ ಮಾಡುತ್ತಿದ್ದ ಎರಡು ಬೋಟುಗಳನ್ನು ಕೋಸ್ಟ್ ಗಾರ್ಡ್ ವಶಕ್ಕೆ ಪಡೆದಿದೆ.

ಅರಬ್ಬಿ ಸಮುದ್ರದಲ್ಲಿ ಬುಲ್ ಟ್ರಾಲ್ ನಡೆಸುತ್ತಿರುವ ಬೋಟ್ ನ ಬಗ್ಗೆ ಮೀನುಗಾರರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಅದಾದ ಕೆಲವೇ ಸಮಯದಲ್ಲಿ ಕಾರವಾರದ ಕೋಸ್ಟ್ ಗಾರ್ಡ್ ಸಿ 420 ಬೋಟುಗಳನ್ನು ತೀರಕ್ಕೆ ತಂದು ವಶದಲ್ಲಿರಿಸಿಕೊಂಡಿದೆ.

ಆಳ ಸಮುದ್ರದಲ್ಲಿ ಬುಲ್ ಟ್ರಾಲ್ ಮೂಲಕ ಮೀನು ಹಿಡಿಯುವುದನ್ನು ನಿಷೇಧಿಸಲಾಗಿದೆ. ಆದರೂ ಕೆಲವರು ಅನಧಿಕೃತವಾಗಿ ಬುಲ್ ಟ್ರಾಲ್ ನಡೆಸುತ್ತಿರುವುದು ವರದಿಯಾಗಿದೆ.

ಈ ರೀತಿ ಬುಲ್ ಟ್ರಾಲ್ ನಿಂದ ಮೀನಿನ ಸಂತತಿ ಬೆಳವಣಿಗೆಯಾಗದೆ ಮತ್ಸ್ಯ ಕ್ಷಾಮ ಸೃಷ್ಟಿಯಾಗುತ್ತಿದೆ. ಇದೆಲ್ಲ ತಿಳಿದಿದ್ದರೂ ಬುಲ್ ಟ್ರಾಲ್ ನಡೆಯುತ್ತಿರುವುದು ಮೀನುಗಾರರಲ್ಲಿ ಆತಂಕ ಉಳಿಸಿದೆ.