Select Page

ಉಚಿತ ವಿದ್ಯುತ್ ಸಂಪರ್ಕ “ಬೆಳಕು” ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಉಚಿತ ವಿದ್ಯುತ್ ಸಂಪರ್ಕ “ಬೆಳಕು” ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಕರ್ನಾಟಕ ವಾರ್ತೆ: ವಿದ್ಯುತ್ ಸೌಲಭ್ಯವು ಮೂಲಭೂತ ಸೌಕರ್ಯಗಳಲ್ಲೊಂದಾಗಿದ್ದು, ಸದ್ಯದ ಕೋವಿಡ್-19 ಪರಿಸ್ಥಿತಿಯಲ್ಲಿ ಮನೆಯಿಂದಲೇ ಕೆಲಸ ಮಾಡಲು ಹಾಗೂ ಆನ್‍ಲೈನ್ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲು ಎಲ್ಲಾ ಕುಟುಂಬದ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದು ಅಗತ್ಯವಾಗಿದ್ದು, ಉಚಿತ ವಿದ್ಯುತ್ ಸಂಪರ್ಕ ನೀಡುವ “ಬೆಳಕು” ಯೋಜನೆ ಸೌಲಭ್ಯಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಈ ಯೋಜನೆಯಡಿ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದನ್ನು ಸರ್ಕಾರವು ಆದ್ಯತೆಯೆಂದು ಪರಿಗಣಿಸಿ, ಸರ್ಕಾರದ ಇಂಧನ ಇಲಾಖೆ ವತಿಯಿಂದ 01 ಸೆಂಪ್ಟಂಬರ್ 2021 ರಿಂದ ಪ್ರಾರಂಭಗೊಂಡಿರುತ್ತದೆ.

ಬೆಳಕು ಯೋಜನೆಯ ಸೌಲಭ್ಯ ಪಡೆಯಲು ಅರ್ಜಿದಾರರು 31 ಜನವರಿ 2022 ರೊಳಗಾಗಿ ತಮ್ಮ ಸಮೀಪದ ಹೆಸ್ಕಾಂನ ವಿಭಾಗ, ಉಪ-ವಿಭಾಗ, ಶಾಖಾ ಕಚೇರಿ ಅಥವಾ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಅರ್ಜಿಯನ್ನು ನೊಂದಾಯಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

ಈ ಯೋಜನೆಯಡಿಯಲ್ಲಿ ವಿದ್ಯುತ್ ರಹಿತ ಮನೆಗಳ ಫಲಾನುಭವಿಗಳಿಂದ ರೇಷನ್ ಕಾರ್ಡ, ಆಧಾರ ಕಾರ್ಡ, ವೋಟರ್ ಐಡಿ, ಗ್ರಾಮ ಪಂಚಾಯಿತಿ ಒದಗಿಸುವ ಪಟ್ಟಿ ಅಥವಾ ಇನ್ನಿತರೆ ದಾಖಲಾತಿಗಳನ್ನು ಪರಿಗಣಿಸಿ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿದೆ.

ಸಾರ್ವಜನಿಕರು ಈ ಯೋಜನೆ ಸದುಪಯೋಗಪಡೆದುಕೊಳ್ಳಲು ಹೆಸ್ಕಾಂ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Trackbacks/Pingbacks

  1. ಗಂಗಾ-ಕಲ್ಯಾಣ ನೀರಾವರಿ ಸೌಲಭ್ಯಕ್ಕೆ ಅರ್ಜಿ ಆಹ್ವಾನ | - […] ಉಚಿತ ವಿದ್ಯುತ್ ಸಂಪರ್ಕ “ಬೆಳಕು” ಸೌಲಭ್ಯಕ… […]

Leave a reply

Your email address will not be published. Required fields are marked *