ಕೊರೊನಾ ವೈರಸ್ ಹರಡುವುದನ್ನು ತಪ್ಪಿಸಲು ರಾಜ್ಯ ಸರಕಾರ 100 ಪ್ರಾಥಮಿಕ ತಂಡ ಮತ್ತು 900 ದ್ವಿತೀಯ ಸಂಪರ್ಕ ತಂಡ ರಚಿಸಲು ತೀರ್ಮಾನಿಸಿದೆ. ಈ ತಂಡದಲ್ಲಿ ಸರ್ಕಾರಿ ಶಾಲೆ ಶಿಕ್ಷಕರು ಸಹ ಇರಲಿದ್ದಾರೆ. ಇದರೊಂದಿಗೆ ಶಿಕ್ಷರ ಮೇಲೆ ಹೊಸ ಹೊಣೆಗಾರಿಕೆ ಹೊರಿಸಲಾಗಿದೆ.

ಈ ಕುರಿತು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಅವರಿಗೆ ಪತ್ರ ಬರೆದಿದ್ದಾರೆ. ಆ ಪತ್ರದ ಪ್ರಕಾರ ರಾಜ್ಯ ಸರ್ಕಾರ ಸಂಪರ್ಕ ತಂಡ ರಚಿಸಲು ಮಾ.26 ರಂದು ಜ್ಞಾಪನಾ ಪತ್ರ ಹೊರಡಿಸಿದೆ.

ಪ್ರಾಥಮಿಕ ಸಂಪರ್ಕ ತಂಡದಲ್ಲಿ ಒಬ್ಬ ಶಿಕ್ಷಕ, ದ್ವಿತೀಯ ಸಂಪರ್ಕ ತಂಡದಲ್ಲಿ ಇಬ್ಬರು ಶಿಕ್ಷಕರು ಇರಲಿದ್ದಾರೆ ಎಂದು ಜ್ಞಾಪನ  ಪತ್ರದಲ್ಲಿ ತಿಳಿಸಲಾಗಿದೆ. ಇದನ್ನು ಆಕ್ಷೇಪಿಸಿ ಬಸವರಾಜ ಹೊರಟ್ಟಿ ಅವರು ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿದ್ದಾರೆ.

ಕೊರೊನಾ ವೈರಸ್ ತಡೆಯಲು ಸಂಪರ್ಕ ತಂಡ ರಚಿಸಿರುವುದು ಸ್ವಾಗತಾರ್ಹ. ಆದರೆ, ಆ ಕೆಲಸಕ್ಕೂ ಪೂರ್ಣವಾಗಿ ಶಿಕ್ಷಕರನ್ನೇ ಬಳಸಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಅವರು ಆಕ್ಷೇಪಿಸಿದ್ದಾರೆ. ಅಲ್ಲದೆ, ಈಗಾಗಲೇ ಬೇರೆ ಬೇರೆ ಇಲಾಖೆಗಳಲ್ಲಿ ಕೆಲಸವಿಲ್ಲದ ಸಾಕಷ್ಟು ಸಿಬ್ಬಂದಿ ಇದ್ದಾರೆ.

ತಾವು ಶಿಕ್ಷಣ ಮಂತ್ರಿ ಇದ್ದಾಗಲೂ ರಾಜ್ಯ ಸರಕಾರದ ಯಾವುದೇ ಕೆಲಸಕ್ಕೆ ಎಲ್ಲ ಇಲಾಖೆಗಳ ಸಿಬ್ಬಂದಿಯನ್ನು ಸಮಾನವಾಗಿ ಬಳಸಿಕೊಳ್ಳಬೇಕು ಎಂದು ನಿರ್ಧರಿಸಲಾಗಿತ್ತು. ಈಗ ಈ ಕೆಲಸಕ್ಕೆ ಶಿಕ್ಷಕರನ್ನು ಮಾತ್ರ ಬಳಸಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಅನೇಕ ವಿಷಯಗಳನ್ನು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

ಇದು ಇಟಲಿಯಲ್ಲಿ ಕೊರೊನಾ ಸೃಷ್ಟಿಸಿದ ಹೆಣಗಳ ರಾಶಿಯೇ: ಸತ್ಯ ತಿಳಿದರೆ ಶಾಕ್ಆಗುತ್ತೀರಿ

ಅವರು ಮುಖ್ಯ ಕಾರ್ಯದರ್ಶಿ ಅವರಿಗೆ ಬರೆದ ಪತ್ರ ಇಲ್ಲಿದೆ.

ಇದನ್ನೂ ಓದಿ: ಕೂದಲು ಕಪ್ಪಗಾಗಬೇಕೆ? ಕರಿ ಬೇವಿನಲ್ಲಿದೆ ಆರೋಗ್ಯದ ಗುಟ್ಟು