Select Page

ಕುರಿ ಸಾಕಾಣಿಕೆ, ಗೊಬ್ಬರ ತಯಾರಿಕೆ ಉಚಿತ ತರಬೇತಿಗೆ ಅರ್ಜಿ ಆಹ್ವಾನ

ಕುರಿ ಸಾಕಾಣಿಕೆ, ಗೊಬ್ಬರ ತಯಾರಿಕೆ ಉಚಿತ ತರಬೇತಿಗೆ ಅರ್ಜಿ ಆಹ್ವಾನ

ಹೈನುಗಾರಿಕೆ ಮಾಡಬೇಕು ಎನ್ನುತ್ತಿರುವ ಯುವಕರಿಗೆ, ಕೃಷಿಯಲ್ಲಿ ಹೊಸ ಪ್ರಯೋಗ ಮಾಡಬೇಕು ಎನ್ನುತ್ತಿರುವ ರೈತರಿಗೆ ಇಲ್ಲೊಂದು ಉತ್ತಮ ಅವಕಾಶ ಇದೆ. ಕೃಷಿಯಲ್ಲಿ ಆಸಕ್ತಿ ಇರುವವರು ಮತ್ತು ರೈತರಿಗೆ ಕುರಿ ಸಾಕಾಣಿಕೆ, ಎರೆಹುಳು ಗೊಬ್ಬರ ತಯಾರಿಕೆ, ಮಹಿಳೆಯರಿಗೆ ಹೊಲಿಗೆ ತರಬೇತಿ ಹೀಗೆ ವಿವಿಧ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತದೆ.

ಈ ತರಬೇತಿಗೆ ಆಸಕ್ತಿ ಇರುವವರು ಈ ಕೆಳಗಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಈ ಕೆಳಗೆ ಕೊಟ್ಟಿರುವ ಮೊಬೈಲ್ ನಂಬರ್‌ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.

ಹೊಸದಾಗಿ ಕೃಷಿ ಆರಂಭಿಸುವವರಿಗೂ ಈ ತರಬೇತಿ ಉಪಯುಕ್ತವಾಗಲಿದೆ. ತರಬೇತಿ ಅವಧಿಯಲ್ಲಿ ಊಟ ಮತ್ತು ವಸತಿ ಉಚಿತವಾಗಿ ನೀಡಲಾಗುತ್ತದೆ.

ನ್ಯಾನೋ ಯೂರಿಯಾ ಬಳಸುವುದು ಹೇಗೆ ಗೊತ್ತೇ?

ರೈತರ ಬೆಳೆ ರೈತರಿಂದಲೇ ಸಮೀಕ್ಷೆ: ಆ್ಯಪ್ ಬಿಡುಗಡೆ

ತರಬೇತಿಯ ವಿವರ

ಬರೋಡಾ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಅಡಿಯಲ್ಲಿ ನಿರೂದ್ಯೋಗಿ ಯುವಕ, ಯುವತಿಯರಿಗೆ ಜುಲೈ ತಿಂಗಳಲ್ಲಿ ವಿವಿಧ ಉಚಿತ ತರಬೇತಿಗಳನ್ನು ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಇದೇ ಜುಲೈ 26 ರಿಂದ ತರಬೇತಿ ಆರಂಭವಾಗಿದೆ. ಜು.26ರಿಂದ ಮಹಿಳೆಯರಿಗೆ ಹೋಲಿಗೆ ತರಬೇತಿ 30 ದಿನ ನಡೆಯಲಿದೆ. ಜುಲೈ 30 ರಿಂದ ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆ ಹಾಗೂ ಕುರಿ ಸಾಕಾಣಿಕೆ ಬಗ್ಗೆ 10 ದಿನಗಳ ತರಬೇತಿ ನಡೆಯಲಿದೆ.

ಜುಲೈ 23 ರಿಂದ 30 ದಿನಗಳ ಬ್ಯೂಟಿಪಾರ್ಲರ್ ಮ್ಯಾನೇಜಮೆಂಟ್ (ಮಹಿಳೆಯರಿಗೆ ಮಾತ್ರ) ಹಾಗೂ 45 ದಿನಗಳ ಕಂಪ್ಯೂಟರ ಡಿಟಿಪಿ ತರಬೇತಿ ಆಯೋಜಿಸಲಾಗಿದೆ.

ಸೋಯಾಅವರೆಯ ಬಿತ್ತನೆ ಸಲಹೆಗಳು

ಏನೇನು ಅರ್ಹತೆ?

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 18 ರಿಂದ 45 ವರ್ಷದವರಾಗಿರಬೇಕು. ಜಾತಿ ಮತ್ತು ಆದಾಯ, ಆಧಾರ ಕಾರ್ಡ, ಬ್ಯಾಂಕ್ ಪಾಸ್ ಬುಕ್, ರೇಶನ ಕಾರ್ಡ, ಇತ್ತೀಚಿನ ಭಾವಚಿತ್ರ, ಜನ್ಮ ದಿನಾಂಕ ದೃಢೀಕರಣ ಪ್ರಮಾಣ ಪತ್ರದ ಝೆರಾಕ್ಸ್ ಪ್ರತಿಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಲು ಕೋರಲಾಗಿದೆ. ಮೊದಲು ಅರ್ಜಿ ಸಲ್ಲಿಸಿದವರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ “ನಿರ್ದೇಶಕರು, ಬರೊಡಾ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ದೇವಗಿರಿ, ಹಾವೇರಿ (ಡಿ.ಸಿ.ಆಫೀಸ್ ಕಟ್ಟಡದ ಹಿಂಭಾಗ ದೇವಗಿರಿ) ಹಾವೇರಿ. ದೂರವಾಣಿ ಸಂಖ್ಯೆ 08375-296360, ಮೊ.7795286480 /9110865650 (ಬೆಳಿಗ್ಗೆ 10 ಗಂಟೆಯಿAದ ಸಾಯಂಕಾಲ 4 ಗಂಟೆ) ಸಂಪರ್ಕಿಸಬಹುದೆAದು ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯೂರಿಯಾ ಬಳಸುವ ಮುನ್ನ ಎಚ್ಚರ: ತಜ್ಞರು ಕೊಟ್ಟ ಸಲಹೆ ಏನು?

Leave a reply

Your email address will not be published. Required fields are marked *