ಬರುತ್ತಿದೆ ತ್ರಿವಿಕ್ರಮ ಟೀಸರ್: ಕ್ರೇಜಿ ಪುತ್ರನ ಜನ್ಮದಿನಕ್ಕೆ ಸ್ಪೆಷಲ್ ಸರ್ಪ್ರೈಸ್

ರಿಲೀಸ್ ಗೂ ಮುನ್ನವೇ ಕ್ರೇಜ್ ಸೃಷ್ಟಿಮಾಡುತ್ತಿರುವ ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್ ಅವರ ಚಿತ್ರ “ತ್ರಿವಿಕ್ರಮ’ ಟೀಸರ್ ಬಿಡುಗಡೆಗೆ ಸಿದ್ಧವಾಗಿದೆ. ವಿಕ್ರಮ ಅವರ ಜನ್ಮ ದಿನವಾದ ಆಗಸ್ಟ್ 16 ರಂದು ಚಿತ್ರದ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ರೆಡಿ ಆಗಿದೆ.

ಈಗಾಗಲೇ ತ್ರಿವಿಕ್ರಮನ ಮೇಲೆ ದೊಡ್ಡ ಕ್ರೇಜ್ ಸೃಷ್ಟಿಯಾಗಿದೆ. ಚಿತ್ರೀಕರಣದ ಆರಂಭದಿಂದಲೂ ತ್ರಿವಿಕ್ರಮ ಭಾರೀ ನಿರೀಕ್ಷೆ ಹುಟ್ಟಿಸಿದೆ. ಅದಕ್ಕೆ ತಕ್ಕಂತೆ ಚಿತ್ರರಸಿಕರಿಗೆ ಕೊರೊನಾ ನಂತರದಲ್ಲಿ ಸರ್ಪ್ರೈಸ್ ಕೊಡುವ ರೀತಿಯಲ್ಲಿ ತ್ರಿವಿಕ್ರಮ ಜಬರ್ದಸ್ತ್ ಸದ್ದು ಮಾಡುತ್ತಿದೆ.

ವಿಕ್ರಂ ಅಪಿಯರೆನ್ಸ್, ಗೆಟಪ್, ಮ್ಯಾನರಿಸಂಗೆ ಎಲ್ಲರೂ ಫಿದಾ ಆಗಿದ್ದಾರೆ. ತ್ರಿವಿಕ್ರಮ ಆಗಮನವನ್ನು ನೋಡೋಕೆ ಗಂಧಿನಗರ ಮಂದಿ ಎದುರು ನೋಡುತ್ತಿದ್ದಾರೆ. ಕೊರೊನಾ ಇಲ್ಲದೆ ಇದ್ದರೆ ವಿಕ್ರಂ ಜನ್ಮದಿನಕ್ಕೆ ಸಿನಿಮಾ ರಿಲೀಸ್ ಆಗಬೇಕಿತ್ತು. ವಿಳಂಬವಾದರೂ ವಿಕ್ರಮ ತ್ರಿವಿಕ್ರಮನಾಗಿ ಬೆಳ್ಳಿ ಪರದೆಗೆ ಸ್ಪೆಷಲ್ ಆಗಿ ಎಂಟ್ರಿ ಕೊಡಲು ಸಿದ್ಧವಾಗುತ್ತಿದ್ದಾರೆ.

ಇದನ್ನೂ ಓದಿ: ವೈರಲ್ ಆಯ್ತು ತ್ರಿವಿಕ್ರಮ ಚಿತ್ರದ ಡೈಲಾಗ್; ಕೇಳಿದರೆ ಥ್ರಿಲ್ ಆಗುತ್ತೀರಿ

ಟೀಸರ್ ಬಿಡುಗಡೆ ಮತ್ತು ಚಿತ್ರದಲ್ಲಿನ ಪೂರ್ತಿ ವಿಷಯಗಳ ಬಗ್ಗೆ ನಿರ್ದೇಶಕ ಸಹನಾ ಮೂರ್ತಿ ಅವರೇ ದಿ ಸ್ಟೇಟ್ ನೆಟ್ವರ್ಕ್ ನೊಂದಿಗೆ ಅನಿಸಿಕೆ ಹಂಚಿಕೊಂಡಿದ್ದಾರೆ. ಇಲ್ಲಿದೆ ವಿಡಿಯೊ.

ಮುಕ್ತಾಯ ಹಂತದಲ್ಲಿ ಚಿತ್ರೀಕರಣ

ಚಿತ್ರ ಈಗಾಗಲೇ ಅಂತಿಮ ಹಂತಕ್ಕೆ ಬಂದು ಮುಟ್ಟಿದೆ. ಇನ್ನೆರಡು ಹಾಡುಗಳ ಚಿತ್ರೀಕರಣವಷ್ಟೇ ಬಾಕಿ ಉಳಿದಿದೆ. ಆದಷ್ಟು ಬೇಗ ಶೂಟಿಂಗ್ ಆರಂಭಿಸಲು ಚಿತ್ರತಂಡ ಯೋಚಿಸಿದೆ.

ಇದನ್ನೂ ಓದಿ: ಪ್ರೇಮ ಕತೆ: ಪತ್ರದಲ್ಲಿ ಸಿಕ್ಕ ಪ್ರೀತಿಗೆ ಮೊಬೈಲ್ ಅಂತರ

ಆಸ್ಟ್ರೇಲಿಯಾದಲ್ಲಿ ಶೂಟಿಂಗ್ ಮಾಡಬೇಕು ಅಂದುಕೊಂಡಿದ್ದ ಹಾಡನ್ನು ಇಂಡಿಯಾ-ಚೀನಾ ಬಾರ್ಡ್ ನಲ್ಲಿ ಚಿತ್ರೀಕರಿಸಲು ತಂಡ ರೆಡಿಯಾಗಿದೆ. ಬಹುಕೋಟಿ ವೆಚ್ಚದಲ್ಲಿ ಗೌರಿ ಎಂಟರ್ ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಆಗುತ್ತಿರೋ ಸಿನಿಮಾದಲ್ಲಿ ಬಹುತಾರಾಂಗಣವೇ ಇದೆ.

ಇದನ್ನೂ ಓದಿ: ಹೀರೋಯಿನ್ ಆದರು ಸಂತೂರ್ ಮಮ್ಮಿ: ಯಾರೂ ಈ ಚೆಲುವೆ?

ಆಡಿಯೋ ರೈಟ್ಸ್ ಸೋಲ್ಡ್

ಚಿತ್ರದ ಆಡಿಯೊ ರೈಟ್ಸ್ 50 ಲಕ್ಷಕ್ಕೆ ಎ2 ಮ್ಯೂಸಿಕ್ ಕಂಪನಿಗೆ ಸೋಲ್ಡ್ ಔಟ್ ಆಗಿದೆ. ಸಿನಿಮಾ ಹಂಚಿಕೆ, ಸ್ಯಾಟಲೈಟ್ ರೈಟ್ಸ್ ಗೂ ದೊಡ್ಡ ಆಫರ್ಸ್ ಬರ್ತಿದೆ. ಸಂತೂರ್ ಮಮ್ಮಿ ಖ್ಯಾತಿಯ ಅಕಾಂಕ್ಷ ಶರ್ಮಾ ನಾಯಕಿಯಾಗಿ ನಟಿಸಿದ್ದಾರೆ.

ಇದನ್ನೂ ಓದಿ: ಪ್ರೇಮ ಕತೆಗಳು, ಹಾಸ್ಯ, ಕತೆಗಳು

ರೋಸ್, ಮಾಸ್ ಲೀಡರ್ ಖ್ಯಾತಿಯ ಸಹನಾ ಮೂರ್ತಿ ತ್ರಿವಿಕ್ರಮ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಸೋಮಣ್ಣ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಅರ್ಜುನ್ ಜನ್ಯ ಮ್ಯೂಸಿಕ್, ಸಂತೋಷ ರೈ ಪಾತಾಜೆಯ ಕ್ಯಾಮೆರಾ ವರ್ಕ್ ಸಿನಿಮಾಗಿದೆ.

Leave a reply

Your email address will not be published. Required fields are marked *