Select Page

KSRP: 2672 ಪೊಲೀಸ್ ಕಾನ್ ಸ್ಟೆಬಲ್ ಭರ್ತಿಗೆ ಅರ್ಜಿ ಆಹ್ವಾನ

KSRP: 2672 ಪೊಲೀಸ್ ಕಾನ್ ಸ್ಟೆಬಲ್ ಭರ್ತಿಗೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯಲ್ಲಿ ಸೇವೆಗೆ ಸೇರಲು ಸುವರ್ಣ ಅವಕಾಶ. ಪೊಲೀಸ್ ಪಡೆಯಲ್ಲಿ ವೃತ್ತಿ ಜೀವನವನ್ನು ಇಚ್ಛಿಸುವ ಧೈರ್ಯಶಾಲಿ, ಶಿಸ್ತುಬದ್ಧ ಹಾಗೂ ಸೇವಾಸಕ್ತ ಯುವಕರನ್ನು ಕರ್ನಾಟಕ ರಾಜ್ಯ ಮೀಸಲು ಪೋಲೀಸ್ ಪಡೆಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಒಟ್ಟು 2672 ಹುದ್ದೆಗಳ ಭರ್ತಿಗೆ ರಾಜ್ಯ ಸರಕಾರ ಆದೇಶ ಪ್ರಕಟಿಸಿದೆ.

ಹುದ್ದೆಗಳ ಮಾಹಿತಿ
ವಿಶೇಷ ರಿಸರ್ವ್‌ ಪೊಲೀಸ್ ಕಾನ್ಸ್‌ಟೇಬಲ್(ಕೆಎಸ್‌ಆರ್‌ಪಿ)- 2420 ಹುದ್ದೆಗಳು
ಬ್ಯಾಂಡ್ಸ್‌ಮನ್‌ (ಕೆಸ್‌ಆರ್‌ಪಿ)- 252 ಹುದ್ದೆಗಳು.
ಅರ್ಜಿ ಶುಲ್ಕ ಎಷ್ಟು?
ಸಾಮಾನ್ಯ ವರ್ಗ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ- 250 ರೂ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ರ ಅಭ್ಯರ್ಥಿಗಳಿಗೆ- 100 ರೂ.
ಅರ್ಜಿ ಶುಲ್ಕವನ್ನು ನಗದು ರೂಪದಲ್ಲಿ ಸ್ಥಳೀಯ ಅಂಚೆ ಕಚೇರಿಗಳಲ್ಲಿ ಅಥವಾ KSRP ಅಧಿಸೂಚನೆಯಲ್ಲಿ ನೀಡಿದ ಬ್ಯಾಂಕಿನ ಅಧಿಕೃತ ಶಾಖೆಗಳಲ್ಲಿ ಪಾವತಿಸಬೇಕು.

ವಯೋಮಿತಿ
ಅರ್ಜಿಯನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು.
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 25 ವರ್ಷ. ಎಸ್‌ಸಿ / ಎಸ್‌ಟಿ / ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 27 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಕೆ ಹೇಗೆ?
ಅಭ್ಯರ್ಥಿಗಳು www.ksp.gov.in ಗೆ ಭೇಟಿ ನೀಡಿ, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು.

ಪರೀಕ್ಷೆ ಇಲ್ಲದೆ ನೇಮಕಾತಿ: ಪಂಚಾಯತ್ ರಾಜ್ ಇಲಾಖೆ 417 ಹುದ್ದೆ

ವಿದ್ಯಾರ್ಹತೆ
ಎಸ್‌ಎಸ್‌ಎಲ್‌ಸಿ ಅಥವಾ 10ನೇ ತರಗತಿ ಪಾಸ್‌ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ವೇತನ ಮಾಸಿಕ: 21000 ರೂ.

ಅರಣ್ಯ ರಕ್ಷಕ ಹುದ್ದೆ ಅರ್ಜಿ ಸಲ್ಲಿಕೆ ಅವಧಿ ಮತ್ತೆ ವಿಸ್ತರಣೆ

ಅರ್ಜಿ ಸಲ್ಲಿಕೆ ಆರಂಭ: 18-5-2020
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 15-6-2020

5 Comments

  1. Kiran k vaddinakkti

    Kiran k vaddinaktti at.hosahalli hirekrur haver

    Reply
  2. Harsha c

    In witch place Karnataka r any other places and send me the link to apply this job please respond sir or Madame

    Reply
  3. shivanand sale

    IM LIKE IT JOB SIR PLZ HELP ME 9620034216/9945042272 SHIVASALE07@GMAIL .COM

    Reply

Leave a reply

Your email address will not be published. Required fields are marked *