ಬಿಎಸ್ಎಫ್ ನೇಮಕಾತಿ 2020: ದೇಶದ ಗಡಿ ಕಾಯಲು ಉತ್ಸಾಹಿ ಯುವಕರಿಗೆ ಇಲ್ಲಿದೆ ಅವಕಾಶ. 10  / 12 ನೇ (ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ) ಪಾಸ್  ಆಗಿದ್ದರೆ, ಪ್ರತಿಷ್ಠಿತ ಗಡಿ ಭದ್ರತಾ ಪಡೆಗೆ ಅರ್ಜಿ ಸಲ್ಲಿಸಬಹುದು. ನವದೆಹಲಿಯ ಡೈರೆಕ್ಟರೇಟ್ ಜನರಲ್ ಬಾರ್ಡರ್ ಸೆಕ್ಯುರಿಟಿ ಫೋರ್ಸ್ (ಬಿಎಸ್ ಎಫ್) ವಾಟರ್ ವಿಂಗ್‌ನಲ್ಲಿ ಎಸ್‌ಐ ಮತ್ತು ಎಚ್‌ಸಿಗಾಗಿ ಗ್ರೂಪ್ ‘ಬಿ’ ಮತ್ತು ‘ಸಿ’ 317 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಜತೆಗೆ ಐಟಿಐ, ಡಿಪ್ಲೊಮಾ ಪದವಿಧರರೂ ಅರ್ಜಿ ಸಲ್ಲಿಸಬಹುದು. ನೇಮಕಾತಿ ಕುರಿತು ಬಿಎಸ್ ಎಫ್ ಅಧಿಕೃತ ವೆಬ್ ಸೈಟ್ bsf.gov.in ನಲ್ಲಿ ಫೆ.15ಕ್ಕೆ ನೋಟಿಪಿಕೇಷನ್ ಬಿಡುಗಡೆಯಾಗಿದೆ. 2020ರ ಮಾರ್ಚ್ 15 ಅರ್ಜಿ ಸಲ್ಲಿಸಲು ಕೊನೆ ದಿನ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 20 ರಿಂದ 28 ವರ್ಷ ವಯಸ್ಸಾಗಿರಬೇಕು.

————————————————– ———————————
ಸರಕಾರಿ ಇತರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ
ಭಾರತೀಯ ನೌಕಾಸೇನೆಯಲ್ಲಿ ಅರ್ಜಿ ಸಲ್ಲಿಸಿ.
ಸೇನಾ ನೇಮಕಾತಿ ರ್ಯಾಲಿಗೆ ನೋಂದಣಿ ಆರಂಭ.
ಇಸ್ರೋದಲ್ಲಿ 182 ಹುದ್ದೆಗಳಿಗೆ ಅರ್ಜಿ ಆಹ್ವಾನ
ಅಂಚೆ ಇಲಾಖೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಮೈಸೂರಿನ AIISH ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.
ಕರಾವಳಿ ಕಾವಲು ಪಡೆಯಲ್ಲಿ ಆಫಿಸರ್ ಆಗಲು ಅರ್ಜಿ ಸಲ್ಲಿಸಿ
——————————— ——————————————–

ನೇಮಕಾತಿ ಪರೀಕ್ಷೆ ಮತ್ತು ಪಠ್ಯಕ್ರಮ:
ಲಿಖಿತ ಪರೀಕ್ಷೆ, ದೈಹಿಕ, ವೈದ್ಯಕೀಯ ಪರೀಕ್ಷೆಗಳು. ಹೆಚ್ಚಿನ ವಿವರಗಳಿಗಾಗಿ ಕೆಳಗಿನ ಬಿಎಸ್ಎಫ್ ನೇಮಕಾತಿ 2020 ರ ಅಧಿಕೃತ ಅಧಿಸೂಚನೆ ಪಿಡಿಎಫ್ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಖಾಲಿ ಹುದ್ದೆಗಳು:
ಎಸ್‌ಐ (ಮಾಸ್ಟರ್) -05
ಎಸ್‌ಐ (ಎಂಜಿನ್ ಡ್ರೈವರ್) -09
ಎಸ್‌ಐ (ವರ್ಕ್ ಶಾಪ್) -03
ಎಚ್‌ಸಿ (ಮಾಸ್ಟರ್) -56
ಎಚ್‌ಸಿ (ಎಂಜಿನ್ ಚಾಲಕ) -68
ಮೆಕ್ಯಾನಿಕ್ (ಡೀಸೆಲ್ / ಪೆಟ್ರೋಲ್ ಎಂಜಿನ್) -07
ಎಲೆಕ್ಟ್ರಿಷಿಯನ್-02
ಎಸಿ ತಂತ್ರಜ್ಞ -02
ಎಲೆಕ್ಟ್ರಾನಿಕ್ಸ್ -01
ಮೆಕಾನಿಕ್ -01
ಕಾರ್ಪೆಂಟರ್ -01
ಪ್ಲಂಬರ್-02
ಸಿಟಿ ಸಿಬ್ಬಂದಿ-160
ಒಟ್ಟು ಹುದ್ದೆಗಳು -317

ಶೈಕ್ಷಣಿಕ ಅರ್ಹತೆ:
ಎಸ್‌ಐ (ಎಂಜಿನ್ ಡ್ರೈವರ್) – 10 + 2 (12) ಅಥವಾ ಅದರ ಸಮಾನ.
ಎಸ್‌ಐ (ವರ್ಕ್ ಶಾಪ್) -ಮೆಕ್ಯಾನಿಕಲ್‌  ಪದವಿ.
ಎಚ್‌ಸಿ (ಮಾಸ್ಟರ್) –ಮೆಟ್ರಿಕ್
ಎಚ್‌ಸಿ (ಎಂಜಿನ್ ಡ್ರೈವರ್) –ಮೆಟ್ರಿಕ್
ಎಚ್‌ಸಿ (ವರ್ಕ್ ಶಾಪ್) – ಮೆಟ್ರಿಕ್ಯುಲೇಷನ್, ಕೈಗಾರಿಕಾ ತರಬೇತಿ ಸಂಸ್ಥೆ ಡಿಪ್ಲೊಮಾ.
ಸಿಟಿ ಸಿಬ್ಬಂದಿ – ಮೆಟ್ರಿಕ್

ಹೇಗೆ ಅರ್ಜಿ ಸಲ್ಲಿಸಬೇಕು
ಅರ್ಹ ಅಭ್ಯರ್ಥಿಗಳು ಬಿಎಸ್ಎಫ್ ಅಧಿಕೃತ ವೆಬ್‌ಸೈಟ್ www.bsf.nic.in , www.bsf.gov.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಸರಕಾರಿ ಇತರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ