ಅಂಚೆ ಇಲಾಖೆ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ; ಫೆ.26 ಲಾಸ್ಟ್ ಡೇಟ್

ಅಂಚೆ ಇಲಾಖೆ ಕರ್ನಾಟಕ ವಿಭಾಗದ 13 ಜಿಲ್ಲೆಗಳಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಫೆ.26 ಕೊನೆ ದಿನವಾಗಿದೆ. ಜೂನಿಯರ್ ಅಕೌಂಟಂಟ್, ಪೋಸ್ಟಲ್ ಅಸಿಸ್ಟಂಟ್, ಸಾರ್ಟಿಂಗ್ ಅಸಿಸ್ಟಂಟ್, ಪೋಸ್ಟಮನ್ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.
ಜೂನಿಯರ್ ಅಕೌಂಟಂಟ್, ಪೋಸ್ಟಲ್ ಅಸಿಸ್ಟಂಟ್ ಮತ್ತು ಸಾರ್ಟಿಂಗ್ ಅಸಿಸ್ಟಂಟ್ ಹುದ್ದೆಯವರಿಗೆ 25,500 ರೂ. ದಿಂದ 81 ಸಾವಿರ ರೂ. ವರೆಗೆ ವೇತನ ಇದೆ. ಪೋಸ್ಟಮನ್ ಹುದ್ದೆಯವರಿಗೆ 21,700 ರೂ. ದಿಂದ 69,100 ರೂ.ವರೆಗೆ ವೇತನ ಇದೆ.
18 ರಿಂದ 27 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು. ಹಿಂದುಳಿದ ವರ್ಗಗಳ (ಒಬಿಸಿ) ಅಭ್ಯರ್ಥಿಗಳಿಗೆ 3 ವರ್ಷ, ಎಸ್ ಸಿ, ಎಸ್ ಟಿ ಅಭ್ಯರ್ಥಿಗಳಿಗೆ 5 ವರ್ಷ ಹೆಚ್ಚುವರಿ ವಿನಾಯಿತಿ ಇದೆ. ಕ್ರೀಡಾ ಕೋಟಾದಡಿ ಈ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ಇಸ್ರೋದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ವಿದ್ಯಾರ್ಹತೆ:
ಜೂನಿಯರ್ ಅಕೌಂಟಂಟ್: ಯಾವುದೇ ವಿಶ್ವವಿದ್ಯಾಲಯದ ಪದವಿ.
ಪೋಸ್ಟಲ್ ಅಸಿಸ್ಟಂಟ್, ಸಾರ್ಟಿಂಗ್ ಅಸಿಸ್ಟಂಟ್, ಪೋಸ್ಟ್ ಮ್ಯಾನ್: ದ್ವಿತೀಯ ಪಿಯುಸಿ.
ಹುದ್ದೆಗಳ ವಿವರ
ಜೂನಿಯರ್ ಅಕೌಂಟಂಟ್: 2
ಪೋಸ್ಟಲ್ ಅಸಿಸ್ಟಂಟ್: 11
ಸಾರ್ಟಿಂಗ್ ಅಸಿಸ್ಟಂಟ್: 4
ಪೋಸ್ಟ್ ಮ್ಯಾನ್: 27
ಆದೇಶ ಪ್ರತಿಗೆ ಇಲ್ಲಿ ಕ್ಲಿಕ್ ಮಾಡಿ
ನೇರವಾಗಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

Trackbacks/Pingbacks