ಮೈಸೂರು: ‌‌ರಾಜ್ಯ ರಾಜಕೀಯದಲ್ಲಿ ಭಾರಿ ಸದ್ದು ಮಾಡಿದ್ದ ಸ್ಯಾಂಟ್ರೋ ರವಿ ಲೈಂಗಿಕ ದೌರ್ಜನ್ಯ, ವಂಚನೆ, ಅಕ್ರಮ ವರ್ಗಾವಣೆ, ಲೇವಾದೇವಿ ಹೀಗೆ ಹತ್ತಾರು ಪ್ರಕರಣಗಳಲ್ಲಿ ಪೊಲೀಸ್ ಇಲಾಖೆಗೆ ಬೇಕಾಗಿದ್ದ ಪ್ರಮುಖ ಆರೋಪಿ. ಪೊಲೀಸ್ರು ಆತನನ್ನು ಮೈಸೂರು ಸೇರಿದಂತೆ ಹಲವು ಕಡೆ ಹುಡುಕಿದ್ರೂ ಖಾಕಿ ಕಣ್ತಪ್ಪಿಸಿ ಎಸ್ಕೇಪ್ ಆಗಿದ್ದ.

ಖಡಕ್ ಪೊಲೀಸ್ ಅಧಿಕಾರಿ ಎಡಿಜಿಪಿ ಅಲೋಕ್ ಕುಮಾರ್ ಖುದ್ದು ಅಖಾಡಕ್ಕೆ ಇಳಿದಿದ್ರು ಅವರಿಗೂ ‌‌ಸ್ಯಾಂಟ್ರೋ ರವಿ ಕೇಸ್ ತಲೆ ಬಿಸಿ ಮಾಡಿತ್ತು.

ಭಕ್ತನ ಕೈ ಹಿಡಿದ ನಿಮಿಷಾಂಭ ದೇವಿ

ಇತ್ತ ಕಡೆ ಸ್ಯಾಂಟ್ರೋ ರವಿ ಕೇಸ್ ರಾಜ್ಯ ರಾಜಕೀಯದಲ್ಲಿ ಹಲ್ ಚಲ್ ಸೃಷ್ಟಿಸಿತ್ತು. ಅಲ್ಲದೆ ಪೊಲೀಸ್ ಇಲಾಖೆ ಕಾರ್ಯವೈಖರಿ ಬಗ್ಗೆ ಪ್ರಶ್ನಿಸುವಂತ ಸ್ಥಿತಿ ಸೃಷ್ಠಿಯಾಗಿತ್ತು.

ತಕ್ಷಣ ಈ ಪ್ರಕರಣದ ಗಂಭೀರತೆ ಅರಿತ ಎಡಿಜಿಪಿ ಅಲೋಕ್ ಕುಮಾರ್ ಸ್ಯಾಂಟ್ರೋ ರವಿ ಬಂಧನಕ್ಕೆ ಸ್ಪೇಷಲ್ ಟೀಮ್ ರಚಿಸಿದ್ರು. ಈ ಕಾರ್ಯಾಚರಣೆ ಮಧ್ಯೆ ತಮ್ಮ ಆಪತ್ ದೇವತೆ ಶ್ರೀರಂಗಪಟ್ಟಣ ತಾಲೂಕಿನ ನಿಮಿಷಾಂಭ ದೇವಿ ಮೊರೆ ಹೋದ್ರು. ದೇವಿ ಮುಂದೆ ಹರಕೆ ಕಟ್ಟಿಕೊಂಡ್ರು. ಇದಾದ 22 ಗಂಟೆಯಲ್ಲೇ ಸ್ಯಾಂಟ್ರೋ ರವಿ ದೂರದ ಗುಜರಾತ್ ನಲ್ಲಿ ಕರ್ನಾಟಕದ ಪೊಲೀಸ್ ಕೈಗೆ ಸಿಕ್ಕಿಬಿದ್ರು.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅಲೋಕ್ ಕುಮಾರ್, 4 ದಿನಗಳ ಹಿಂದೆ10ನೇ ತಾರೀಖಿಗೆ ಈ ಕೇಸ್ ವಿಚಾರವಾಗಿ ‌ಮೈಸೂರಿಗೆ ಬಂದಿದ್ದೆ, ಆರೋಪಿ ಬಗ್ಗೆ ಸುಳಿವು ಸಿಗದೆ ಕಂಗಾಲಾದಾಗ ನಿಮಿಷಾಂಭ ದೇವಿ ದರ್ಶನ ಪಡೆದೆ. ಆರೋಪಿ ಬೇಗೆ ಸಿಗಲಿ ಅಂತ ಹರಕೆ ಕಟ್ಟಿಕೊಂಡಿದ್ದೆ ಎಂದರು.

ಈ ದೇವಿ ಮೇಲೆ ನನಗೆ 12 ವರ್ಷಗಳಿಂದ ಅಪಾರ ನಂಬಿಕೆಯಿದೆ. 2011ರಲ್ಲಿ ಮೈಸೂರಿನಲ್ಲಿ ಡಬಲ್ ಮರ್ಡರ್ ಕೇಸ್ ದಾಖಲಾಗಿತ್ತು. ಆಗಲೂ ದೇವಿ ಬಳಿ ಬೇಡಿಕೆ ಇಟ್ಟು, ಹರಕೆ ಕಟ್ಟಿಕೊಂಡು ‌‌ಮೈಸೂರು ತಲುಪುವಷ್ಟರಲ್ಲಿ ಆರೋಪಿಗಳು ಸಿಕ್ಕಿಬಿಟ್ಟಿದ್ರು. ಅಂದ್ರೆ ಕೇವಲ 5 ಗಂಟೆಗಳಲ್ಲೇ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿತ್ತು.

ಅಂದಿನಿಂದ ಅಂದ್ರೆ 22 ವರ್ಷಗಳಿಂದ ನಾನು ದೇವಿ ಮೇಲೆ ಅಪಾರವಾಗಿ ನಂಬಿದ್ದೇನೆ. 2011ರಲ್ಲಿ ಆದಂಗತೆ ಈಗಲೂ ಆಗಿದ್ದು, ಸ್ಯಾಂಟ್ರೋ ರವಿ ಅರೆಸ್ಟ್ ಆಗಿದ್ದಾನೆ. ಹೀಗಾಗಿ ಇಂದು ದೇವಿಗೆ ಪೂಜೆ ಸಲ್ಲಿಸಿ, ಥ್ಯಾಂಕ್ಸ್ ಹೇಳಲು ಬಂದಿದ್ದೇನೆ ಎಂದು ತಿಳಿಸಿದ್ರು.