ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭೋಗಿ ಮತ್ತು ಉತ್ತರಾಯಣ ಹಬ್ಬದ ಪ್ರಯುಕ್ತ ದೇಶದ ಸಮಸ್ತ ಜನರಿಗೆ ಟ್ವೀಟ್‌ ಮೂಲಕ ಶುಭಾಶಯ ಕೋರಿದ್ದಾರೆ.

https://twitter.com/narendramodi/status/1614105917943058432?t=-9mSVKi-8oLp3NZnfuInUQ&s=19

ಈ ಸಂದರ್ಭದಲ್ಲಿ ಪ್ರತಿಯೊಬ್ಬರ ಸಂತೋಷ, ಸಮೃದ್ಧಿ ಮತ್ತು ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಭಾರತದ ಅನೇಕ ರಾಜ್ಯಗಳಲ್ಲಿ ಪೊಂಗಲ್‌ನ ಮೊದಲ ದಿನ ಭೋಗಿ ಹಬ್ಬ ಎಂದು ಆಚರಿಸಲಾಗುವುದು. ಗುಜರಾತ್‌ನಲ್ಲಿ ಉತ್ತರಾಯಣ ದಿನ ಗಾಳಿಪಟ ಉತ್ಸವವು ಪ್ರಮುಖವಾಗಿದೆ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

https://twitter.com/narendramodi/status/1614105917943058432?t=KUlnijNlSYorrmZnHK2UEA&s=19

ಕರ್ನಾಟಕದಲ್ಲಿ ಮಕರ ಸಂಕ್ರಾಂತಿ, ತಮಿಳುನಾಡಿನಲ್ಲಿ ಪೊಂಗಲ್, ಕೇರಳದಲ್ಲಿ ಶಂಕರಾಂತಿ, ‌‌ಆಂಧ್ರಪ್ರದೇಶದಲ್ಲಿ ಪೆದ್ದ ಪಂಡುಗ, ಅಸ್ಸಾಂನಲ್ಲಿ ಮಾಘ ಬಿಹು ಮತ್ತು ಉತ್ತರ ಭಾರತದ ಅನೇಕ ಭಾಗಗಳಲ್ಲಿ ಮಾಘ ಮೇಳ ಎಂದು ಈ ಹಬ್ಬವನ್ನು ಆಚರಿಸುತ್ತಾರೆ.