Select Page

ಸಲ್ಮಾನ್ ಖಾನ್ 57ನೇ ವರ್ಷದ ಬರ್ತ್ ಡೇ ಪಾರ್ಟಿಲಿ ಶಾರುಖ್ ಖಾನ್ ಹೈಲೆಟ್…

ಸಲ್ಮಾನ್ ಖಾನ್ 57ನೇ ವರ್ಷದ ಬರ್ತ್ ಡೇ ಪಾರ್ಟಿಲಿ ಶಾರುಖ್ ಖಾನ್ ಹೈಲೆಟ್…

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಇಂದು (27 ಡಿಸೆಂಬರ್) 57ನೇ ವಸಂತಕ್ಕೆ ಕಾಲಿಟ್ಟಿದ್ದು, ಸಲ್ಮಾನ್ ಖಾನ್ ಬರ್ತ್ ಡೇ ಪಾರ್ಟಿಗೆ ಬಂದ ಶಾರುಖ್ ಖಾನ್ ಅವರನ್ನು ಅಲ್ಲಿದ್ದ ಅಭಿಮಾನಿಗಳು ಪಠಾಣ್ ಪಠೋಣ್ ಎಂದು ಕೂಗಲು ಶುರು ಮಾಡಿದ್ರು.

ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಶರ್ಮಾ ತಮ್ಮ ಅಣ್ಣನಿಗಾಗಿ ನಿನ್ನೆ ತಡರಾತ್ರಿ ಪಾರ್ಟಿ ಆಯೋಜಿಸಿದ್ದು, ಅಲ್ಲಿ ಅರ್ಪಿತಾ ಪತಿ ಆಯುಷ್ ಶರ್ಮಾ ಹಾಗೂ ಅವರ ಮಕ್ಕಳು ಹಾಜರಿದ್ದರು.

ಈ ಪಾರ್ಟಿಗೆ ಜಾನ್ವಿ ಕಪೂರ್, ಪೂಜಾ ಹೆಗ್ಡೆ, ತುಂಬು, ಸುನೀಲ್ ಶೆಟ್ಟಿ, ರಿತೇಶ್ ದೇಶಮುಖ್ ಹಾಗೂ ಜೆನಿಲಿಯಾ ದಂಪತಿ, ಸೋನಾಕ್ಷಿ ಸಿನ್ಹಾ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಆಗಮಿಸಿ ಶುಭ ಹಾರೈಸಿದರು.

ಇದೇ ವೇಳೆ ಆಗಮಿಸಿದ ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಸಲ್ಲು ಜೊತೆಗೆ ತೆಗಿಸಿಕೊಂಡ ಪೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅದು ಈಗ ಭಾರಿ ವೈರಲ್ ಆಗಿದೆ. ಈ ಪಾರ್ಟಿಯ ಇನ್ನೊಂದು ವಿಶೇಷ ಅಂದರೆ ಎಲ್ಲರೂ ಕಪ್ಪು ಬಣ್ಣದ ಉಡುಗೆ ಧರಿಸಿರುವುದು.

Leave a reply

Your email address will not be published. Required fields are marked *