ಬೆಳಗಾವಿ: ತಂಬಾಕು ಉತ್ಪನ್ನ ತಯಾರಿಕಾ ಘಟಕ ಹಾಗೂ ಸಹಾಯ ವಾಣಿಜ್ಯ ತೆರಿಗೆ ಅಧಿಕಾರಿ (ಎಸಿಸಿಟಿಒ) ಕಚೇರಿ ಮೇಲೆ ಮಂಗಳವಾರ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ದಿಢೀರ್‌ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಲೋಕಾಯುಕ್ತ ಪೊಲೀಸ್ ಅಧೀಕ್ಷಕಿ ಯಶೋಧಾ ವಂಟಗೋಡಿ ಮಾರ್ಗದರ್ಶನದಲ್ಲಿ ಡಿವೈಎಸ್ಪಿ, ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿ ಮಂಗಳವಾರ ಬೆಳ್ಳಂಬೆಳಿಗ್ಗೆ ತಂಬಾಕು ಘಟಕದ ಮೇಲೆ ಸರ್ಜ್ ವಾರೆಂಟ್ ಆಧಾರದ ಮೇಲೆ ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲನೆ ನಡೆಸಿದರು.

ನಿಪ್ಪಾಣಿ ತಾಲೂಕಿನ ಹೀರಾಪಾನ್ ಮಸಾಲಾ ತಯಾರಿಕಾ ಘಟಕ ಹಾಗೂ ಸಹಾಯಕ ವಾಣಿಜ್ಯ ತೆರಿಗೆ ಅಧಿಕಾರಿಗಳ ಕಚೇರಿ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, ತೆರಿಗೆ ಪಾವತಿ ಕುರಿತು ಪರಿಶೀಲಿಸಿದರು. ಬೆಳಿಗ್ಗೆ 10.30 ರ ಸುಮಾರಿಗೆ ಪರಿಶೀಲನೆ ಪ್ರಾರಂಭಿಸಿರುವ ಅಧಿಕಾರಿಗಳು, ರಾತ್ರಿವರೆಗೂ ಕಾರ್ಯ ನಿರ್ವಹಿಸುತ್ತಿದ್ದಾರೆ.