ಪಪ್ಪಾಯಿ ಹಣ್ಣು ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ. ಹಾಗೆಯೇ ವರ್ಷಪೂರ್ತಿ ಮಾರುಕಟ್ಟೆಯಲ್ಲಿ ಸಿಗುವ ಕೆಲವು ಹಣ್ಣುಗಳಲ್ಲಿ ಇದು ಒಂದು. ಪಪ್ಪಾಯಿ ಹಣ್ಣಲ್ಲಿ ಸಾಕಷ್ಟು ಪೋಷಕಾಂಶಗಳು ಅಡಗಿವೆ. ಇದರಿಂದ ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನವೂ ಇದೆ. ಈ ‌ಹಣ್ಣಲ್ಲಿ ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಇ ಹಾಗೂ ಆ್ಯಂಟಿ ಆಕ್ಸಿಡೆಂಟ್ (ಉತ್ಕರ್ಷಣ ನಿರೋಧಕ) ಗುಣ ಕಂಡುಬರುತ್ತವೆ.

ಆದ್ರೆ, ಪಪ್ಪಾಯಿಯನ್ನು ಮರೆತು ಕೂಡ ಈ ಕೆಳಗಿನ ಆಹಾರಗಳ ಜೊತೆ ಸೇವಿಸಬಾರದು. ಯಾಕೆಂದರೆ ಅದರಿಂದ ನಿಮ್ಮ ಆರೋಗ್ಯ ಹಾಳಾಗುತ್ತದೆ.

ಪಪ್ಪಾಯಿ ಮತ್ತು ಹಾಗಲಕಾಯಿ

ಹಾಗಲಕಾಯಿಯ ರುಚಿ ಮಾತ್ರ ಕಹಿ ಇದು ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯ ತರಕಾರಿ. ಇದರಲ್ಲಿ ಪೊಟ್ಯಾಷಿಯಂ, ವಿಟಮಿನ್ ಸಿ, ‌‌ಕಬ್ಬಿಣಾಂಶ ಹೇರಳವಾಗಿದೆ. ಜೊತೆಗೆ ಕ್ಯಾನ್ಸರ್ ಕಾರಕ ಅಂಶಗಳನ್ನು ಕೊಲ್ಲುತ್ತದೆ. ಮತ್ತು ಗ್ಲುಕೋಸ್ ಮಟ್ಟವನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ. ಹಾಗಲಕಾಯಿಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದ್ರೆ ಇದರ ಜೊತೆ ಪಪ್ಪಾಯಿ ಹಣ್ಣು ತಿಂದರೆ ಅಪಾಯ ಎದುರಾಗಬಹುದು ಎಚ್ಚರ.

ಯಾಕೆಂದ್ರೆ ಇಷ್ಟೇಲ್ಲಾ ಒಳ್ಳೆ ಗುಣ ಹೊಂದಿರುವ ಹಾಗಲಕಾಯಿ ಕೆಲವೊಮ್ಮೆ ದೇಹದಲ್ಲಿರುವ ನೀರಿನ್ನು ಹೀರಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಇನ್ನು ಪಪ್ಪಾಯಿ ಹಣ್ಣು ಸಹ ಉಷ್ಣಾಂಶ ಹೊಂದಿರುವುದರಿಂದ, ಇವೆರಡನ್ನು ಜೊತೆಯಾಗಿ ಸೇವಿಸುವುದು ಅಪಾಯಕ್ಕೆ ಮುನ್ನುಡಿ ಹಾಕಿದಂತೆ. ಅಂದ್ರೆ ಎರಡನ್ನು ಒಟ್ಟಿಗೆ ಸೇವಿಸಿದ್ರೆ ನಿಮ್ಮ ದೇಹ ಡಿಹೈಡ್ರೆಷನ್ (ನಿರ್ಜಲೀಕರಣ) ಸಮಸ್ಯೆ ಎದುರಿಸೋ ಸಂಭವ ಹೆಚ್ಚು.

ಕಿತ್ತಳೆ ಮತ್ತು ಪಪ್ಪಾಯಿ

ಪಪ್ಪಾಯಿ ಮತ್ತು ಕಿತ್ತಳೆ ಹಣ್ಣುಗಳು ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲ್ಪಟ್ಟಿದ್ದರೂ ಇವುಗಳನ್ನ ಒಟ್ಟಿಗೆ ತಿನ್ನಬಾರದು.

ಹೌದು, ಕಿತ್ತಳೆ ಹಣ್ಣನ್ನು ಪಪ್ಪಾಯಿಯೊಂದಿಗೆ ಸೇವಿಸಬಾರದು ಏಕೆಂದರೆ ಕಿತ್ತಳೆ ಹುಳಿ ಮತ್ತು ಪಪ್ಪಾಯಿ ಸಿಹಿ ಹಣ್ಣು. ಇವೆರಡೂ ಪರಸ್ಪರ ವಿರುದ್ಧವಾಗಿರುತ್ತವೆ. ಇದರಿಂದಾಗಿ ನೀವು ಅತಿಸಾರ ಮತ್ತು ಅಜೀರ್ಣದಂತ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಈ ಹಣ್ಣುಗಳನ್ನು ಒಟ್ಟಿಗೆ ಸೇವಿಸುವುದನ್ನು ತಪ್ಪಿಸಿ.

ಪಪ್ಪಾಯಿ ಮತ್ತು ನಿಂಬೆ

ಕೆಲವರಿಗೆ ಪಪ್ಪಾಯಿ ಚಾಟ್ ತಿನ್ನುವ ಅಭ್ಯಾಸವಿರುತ್ತದೆ. ಆದ್ರೆ ಈ ಚಾಟ್ ನಲ್ಲಿ ಅವರು ನಿಂಬೆಹಣ್ಣಿನ ರಸವನ್ನು ಬಳಸುತ್ತಾರೆ. ‌‌‌‌‌‌‌‌‌‌‌‌‌‌ಹೀಗೆ

ಪಪ್ಪಾಯಿಯೊಂದಿಗೆ ನಿಂಬೆ ಹಣ್ಣನ್ನು ಸೇವಿಸಬಾರದು. ಯಾಕೆಂದ್ರೆ ಇವೆರಡನ್ನೂ ಒಟ್ಟಿಗೆ ಸೇವಿಸುವುದರಿಂದ ರಕ್ತ ಸಂಬಂಧಿತ ಸಮಸ್ಯೆಗಳು ಎದುರಾಗಬಹುದು. ಅಂದ್ರೆ ರಕ್ತಹೀನತೆ ಉಂಟಾಗುತ್ತದೆ. ಹೀಗಾಗಿ ಇದರ ಬಗ್ಗೆ ಎಚ್ಚರವಿರಲಿ.

ಮೊಸರು ಮತ್ತು ಪಪ್ಪಾಯಿ

ಪಪ್ಪಾಯಿ ಮತ್ತು ಮೊಸರನ್ನು ಮರೆತು ಕೂಡ ಒಟ್ಟಿಗೆ ತಿನ್ನಬಾರದು. ಕಾರಣ ಪಪ್ಪಾಯಿಯಲ್ಲಿ ಉಷ್ಣಾಂಶ ಹೆಚ್ಚು, ಮೊಸರು ತಣ್ಣಗಿರುತ್ತೆ ‌‌ಹೀಗಾಗಿ ಇವೆರಡನ್ನು ಜೊತೆಯಾಗಿ ಸೇವಿಸಬಾರದು. ಒಟ್ಟಿಗೆ ತಿನ್ನುವುದರಿಂದ ಶೀತ, ನೆಗಡಿಯಂತ ಸಮಸ್ಯೆ ನಿಮ್ಮನ್ನು ಕಾಡಬಹುದು ಎಚ್ಚರ.

ಸೌತೆಕಾಯಿ ಮತ್ತು ಪಪ್ಪಾಯಿ

ಸೌತೆಕಾಯಿ ತಂಪಿನ ಅಂಶ ಹೊಂದಿರುವ ತರಕಾರಿ. ಇದರ ಜೊತೆಗೆ ಪಪ್ಪಾಯಿ ಸೇರಿಸಿ ತಿನ್ನಬಾರದು. ಕಾರಣ ನಿಮಗೆಲ್ಲ ಗೊತ್ತಿರುವ ಹಾಗೆ ಪಪ್ಪಾಯಿ ಉಷ್ಣಾಂಶ ಹೊಂದಿರುವ ಹಣ್ಣು ಇವೆರಡನ್ನು ಒಟ್ಟಿಗೆ ಸೇವಿಸುವುದರಿಂದ ಶೀತ ಹಾಗೂ ತಲೆನೋವು ಬರುತ್ತದೆ.