ಫಳಫಳ ಹೊಳೆಯುವ ಬಿಳಿ ಹಲ್ಲು, ಯಾರಿಗೆ ಇಷ್ಟವಿಲ್ಲ ಹೇಳಿ. ಎಲ್ಲರಿಗೂ ಶುಭ್ರವಾದ ಬಿಳಿ ಹಲ್ಲು ಇಷ್ಟ. ಆದ್ರೆ ಕೆಲವರಿಗೆ ನೀರಿನ ಸಮಸ್ಯೆಯಿಂದ, ವಿಟಮಿನ್ ಗಳ ಕೊರೆತೆಯಿಂದ ಹಲ್ಲಿನ ಮೇಲೆ ಕಲೆಗಳಾಗಿರುತ್ತವೆ. ಇನ್ನು ಸ್ವಲ್ಪ ಜನರಿಗೆ ಬೇರೆ ಬೇರೆ ಕಾರಣಗಳಿಂದ ಹಲ್ಲು ಹಳದಿಯಾಗಿರುತ್ತವೆ.

ಹಳದಿ ಹಲ್ಲನ್ನು ಯಾವುದೇ ರೀತಿಯ ಖರ್ಚಿಲ್ಲದೆ ಮನೆಯಲ್ಲೆ ಸಿಗುವ ಪದಾರ್ಥಗಳಿಂದ ಪೆಸ್ಟ್ ಮಾಡಿ ಉಪಯೋಗಿಸಿ ಫಳಫಳ ಹೊಳೆಯುವಂತೆ ಮಾಡಲು ಉಪಾಯ ಇಲ್ಲಿದೆ. ಈ ವಿಶೇಷ ಪೆಸ್ಟ್ ಹಲ್ಲು ಮಾತ್ರವಲ್ಲ ಒಸಡಿನ ಆರೋಗ್ಯವನ್ನೂ ಕಾಪಾಡುತ್ತದೆ. ಹಾಗಾದ್ರೆ ತಡ ಮಾಡ್ದೆ ಮುಂದೆ ಓದಿ, ಹೇಗೆ ಮಾಡೋದು ಈ ಮನೆ ಮದ್ದನ್ನು ಅಂತ.

ಬೇಕಾಗುವ ಪದಾರ್ಥಗಳು: ಚೆಂಡು ಹೂವು ಅಥವಾ ಮಾವಿನ ಎಲೆ ಅದೂ ಇಲ್ಲ ಅಂದ್ರೆ ನಿಂಬೆಹಣ್ಣು, ಕಲ್ಲುಪ್ಪು, ಅರಿಶಿನ ಪುಡಿ, ಎಳ್ಳೆಣ್ಣೆ.

ಮಾಡುವ ವಿಧಾನ:
ಮೊದಲಿಗೆ ಒಂದು ಚೆಂಡು ಹೂವನ್ನು ತೆಗೆದುಕೊಂಡು ಅದನ್ನು ಕುಟ್ಟಾನಿಯಲ್ಲಿ ಚೆನ್ನಾಗಿ ಜಜ್ಜಿಕೊಳ್ಳಬೇಕು. ಬಳಿಕ 1 ಚಮಚ ಕಲ್ಲುಪ್ಪು ಹಾಗೂ ಸ್ವಲ್ಪ ಅರಿಶಿನ ಸೇರಿಸಿ ಚೆನ್ನಾಗಿ ಕುಟ್ಟಿಕೊಳ್ಳಿ. ನಂತರ 1 ಚಮಚ ಎಳ್ಳೆಣ್ಣೆ ಸೇರಿಸಿ ಎಲ್ಲವನ್ನು ಹದವಾಗಿ ಪೆಸ್ಟ್ ರೀತಿ ಮಾಡಿಕೊಳ್ಳಿ.

ಈ ‌‌ಪೆಸ್ಟ್ ನಿಂದ ಬೆಳಿಗ್ಗೆ ಮತ್ತು ರಾತ್ರಿ ಮಲಗುವ ಮೊದಲು ಬ್ರಷ್ ಮೂಲಕ ಹುಲ್ಲನ್ನು ಚೆನ್ನಾಗಿ ಉಜ್ಜಿ ಉಗುರು ಬೆಚ್ಚಗಿನ ನೀರು ಅಥವಾ ತನ್ನೀರಿನಿಂದ ಬಾಯಿ ಮುಕ್ಕಳಿಸಿ. ಹೀಗೆ ಪ್ರತಿದಿನವೂ ಮಾಡಿದರೆ ಉತ್ತಮ ಫಲಿತಾಂಶ ಪಡೆಯಬಹುದು. ಈ ಮನೆಮದ್ದು ಹಲ್ಲುಗಳು ಬೆಳ್ಳಗೆ ಮಾಡುವುದರ ಜೊತೆಗೆ ಒಸಡಿನಲ್ಲಿ ರಕ್ತಸ್ರಾವ ಅಥವಾ ಹುಣ್ಣು ಆಗಿದ್ದರೆ ಅದನ್ನು ಸಹ ಹೊಗಲಾಡಿಸುತ್ತದೆ.

ಚೆಂಡು ಹೂವಿನ ಔಷಧಿ ಗುಣಗಳು

ಚೆಂಡು ಹೂವಿನಲ್ಲಿ ಆ್ಯಂಟಿವೈರಸ್, ಆ್ಯಂಟಿ ಇಫ್ಲಮೆಂಟರಿ( ಉರಿಯುತದ ವಿರೋಧಿ ಗುಣ), ನಂಜು ನಿರೋಧಕ ( ಆ್ಯಂಟಿ ಸೆಪ್ಟಿಕ್) ಗುಣಗಳಿವೆ. ಹೀಗಾಗಿ ಬಾಯಿ ಹುಣ್ಣು ಬರದಂತೆ ತಡೆಯುವ ಔಷಧಿ ಗುಣ ಈ ಹೂವಿನಲ್ಲಿ ಇದೆ. ಹಾಗೆಯೇ ಕ್ಯಾನ್ಸರ್ ವಿರುದ್ಧ ‌(ಆ್ಯಂಟಿ ಕ್ಯಾನ್ಸರ್) ಹೋರಾಡುವ ಶಕ್ತಿಯೂ ಇದರಲ್ಲಿದೆ.

ಇನ್ನು ಕಲ್ಲುಪ್ಪು ಹಾಗೂ ಅರಿಶಿನ ನಿಮ್ಮ ಬಾಯಲ್ಲಿರುವ ಹೊಲಸು (ಡರ್ಟ್) ನ್ನು ಹೊರಹಾಕಲು ಸಹಾಯ ಮಾಡುತ್ತದೆ. ಹಲ್ಲಿನ ಮಧ್ಯೆ ಇಲ್ಲವೆ ಒಸಡಿನಲ್ಲಿ ರಕ್ತಸ್ರಾವ ಆಗುತ್ತಿದ್ದರೆ ಅದನ್ನು ತಡೆಗಟ್ಟಿ ನಿಮ್ಮ ಬಾಯಿಯ ಆರೋಗ್ಯವನ್ನು ಕಾಪಾಡುತ್ತದೆ.

ಗಿಡಮೂಲಿಕೆ ತೈಲಗಳ ರಾಜ’

ಇನ್ನು ಕಪ್ಪು ಎಳ್ಳಿನ ಎಣ್ಣೆ ಸೇವನೆಯು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಈ ಎಳ್ಳೆಣ್ಣೆಯನ್ನು ‘ಗಿಡಮೂಲಿಕೆ ತೈಲಗಳ ರಾಜ’ ಅಂತಲೂ ಕರೆಯುತ್ತಾರೆ. ಕಪ್ಪು ಎಳ್ಳಿನ ಎಣ್ಣೆಯಲ್ಲಿ ಪ್ರೋಟೀನ್, ಸೋಡಿಯಂ, ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ನಾರಿನಂಥ ಅಂಶಗಳು ಹೇರಳವಾಗಿವೆ.

ಈ ಎಳ್ಳೆಣ್ಣೆ ಬಾಯಿಯ ದುರ್ವಾಸನೆ ತೊಡೆದುಹಾಕಲು ಮತ್ತು ಹಲ್ಲಿನ ಹುಣ್ಣು ಮತ್ತು ರಕ್ತಸ್ರಾವವನ್ನು ತಡೆಯಲು ಸಹಾಯ ಮಾಡುತ್ತದೆ. ಎಳ್ಳಿನ ಎಣ್ಣೆಯಿಂದ ಮಾಡಿದ ಪೆಸ್ಟ್ ಅನ್ನು ‌ಪ್ರತಿದಿನ ಉಪಯೋಗಿಸುವುದರಿಂದ
ನಿಮ್ಮ ಒಸಡುಗಳು ಬಲಿಷ್ಠಗೊಳ್ಳುತ್ತವೆ.