Select Page

ಪಂಚಭೂತಗಳಲ್ಲಿ ಲೀನರಾದ ಶತಾಯುಷಿ ಹೀರಾಬೇನ್ ಮೋದಿ

ಪಂಚಭೂತಗಳಲ್ಲಿ ಲೀನರಾದ ಶತಾಯುಷಿ ಹೀರಾಬೇನ್ ಮೋದಿ

ಗಾಂಧಿನಗರ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ತಾಯಿ ಹೀರಾಬೇನ್ ಮೋದಿಯವರ ಅಂತ್ಯ ಸಂಸ್ಕಾರ ನಡೆದಿದೆ.

ಶತಾಯುಷಿ ಹೀರಾಬೇನ್ ಮೋದಿಯವರ ಇಂದು ಬೆಳಗಿನ ಜಾವ 3.30ರ ಸುಮಾರಿಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಹೀರಾಬೇನ್ ಮೋದಿ 100 ವರ್ಷದವರಾಗಿದ್ದು, ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಇದೀಗ ಹೀರಾಬೇನ್ ಅವರ ಚಿತೆಗೆ ನರೇಂದ್ರ ಮೋದಿ ಹಾಗೂ ಸಹೋದರರು ಅಗ್ನಿ ಸ್ಪರ್ಶ ಮಾಡಿದರು. ಅಂತ್ಯಕ್ರಿಯೆಯಲ್ಲಿ ಕುಟುಂಬಸ್ಥರು ಹಾಗೂ ಆಪ್ತರು ಮಾತ್ರ ಭಾಗವಹಿಸಿದ್ದರು. ಈ ಕಾರ್ಯದಲ್ಲಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಭಾಗಿಯಾಗಿದ್ದರು.

Leave a reply

Your email address will not be published. Required fields are marked *