ದಕ್ಷಿಣ ಕನ್ನಡ: ಚಾರ್ಟೆಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಮಂಗಳೂರು ಸಮೀಪದ ಹೊಸಬೆಟ್ಟು ಗ್ರಾಮದ ರಮ್ಯಶ್ರೀ ದೇಶದಲ್ಲಿ ದ್ವಿತೀಯ ರ್‍ಯಾಂಕ್‌ ಪಡೆದಿದ್ದಾರೆ.

ಅಖಿಲ ಭಾರತೀಯ ಲೆಕ್ಕಪರಿಶೋಧಕ ಸಂಸ್ಥೆಯು 2022ರ ನವೆಂಬರ್‌ನಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ರಮ್ಯಶ್ರೀ ದೇಶದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಎಲ್‌ಐಸಿ ಉದ್ಯೋಗಿ ರಮೇಶ್‌ ರಾವ್‌ ಮತ್ತು ನ್ಯಾಶನಲ್‌ ಇನ್ಸೂರೆನ್ಸ್‌ ಉದ್ಯೋಗಿ ಮೀರಾ ದಂಪತಿಯ ಪುತ್ರಿ ರಮ್ಯಶ್ರೀ. ಕಾಮತ್‌ ಆ್ಯಂಡ್‌ ರಾವ್‌ ಹಾಗೂ ಎಂಆರ್‌. ಪಿಎಲ್‌ ಸಂಸ್ಥೆಯ ಮಾರ್ಗದರ್ಶನದಲ್ಲಿ ತರಬೇತಿ ತೆಗೆದುಕೊಂಡಿದ್ದಾರೆ. ಸಿಎ ಇಂಟರ್‌ ಎಕ್ಸಾಮ್ ಗೆ ತ್ರಿಶಾದಲ್ಲಿ ತರಬೇತಿ ಪಡೆದಿದ್ದು, ಅಂತಿಮ ಪರೀಕ್ಷೆಗೆ ಸ್ವಯಂ ಅಧ್ಯಯನ ನಡೆಸಿದ್ದರು.

ರಮ್ಯಶ್ರೀ ಪರೀಕ್ಷೆ ತಯಾರಿ ಹೇಗಿತ್ತು…

ಪ್ರತೀ ದಿನ 12 ಗಂಟೆಗಳ ಕಾಲ ಸಿಎ ಪರೀಕ್ಷೆಗೆ ತಯಾರಿ ನಡೆಸುತ್ತಿದ್ರು. ಇವರು ಎಸೆಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 3ನೇ ರ್‍ಯಾಂಕ್‌, ಪಿಯುಸಿಯಲ್ಲಿ 5ನೇ ರ್‍ಯಾಂಕ್ ಮತ್ತು ಸಿಎ ಇಂಟರ್‌ ಎಕ್ಸಾಮ್ ನಲ್ಲಿ ದೇಶದಲ್ಲಿ 16 ನೇ ಸ್ಥಾನ ಗಳಿಸಿಕೊಂಡಿದ್ರು.

ಸಿಎಂ ಪರೀಕ್ಷೆಯಲ್ಲಿ ನವ ದೆಹಲಿಯ ಹರ್ಷ ಚೌಧರಿ ಪ್ರತಿಶತ 77.25 ಅಂಕ ಪಡೆಯೋ ಮೂಲಕ ದೇಶಕ್ಕೆ ಫಸ್ಟ್ ರ್‍ಯಾಂಕ್‌ ಬಂದಿದ್ದಾರೆ. ಇನ್ನು ದ್ವಿತೀಯ ಸ್ಥಾನ ಶಿಕಾ ಜೈನ್ ಮತ್ತು ರಮ್ಯಶ್ರೀ ಇಬ್ಬರ ಪಾಲಾಗಿದ್ದು, ತಲಾ ಪ್ರತಿಶತ 77.13 ಅಂಕ ಗಳಿಸಿದ್ದಾರೆ. ಪ್ರತಿಶತ 76.63 ಅಂಕ ಗಳಿಸಿಸೋ ಮೂಲಕ ಮೂರನೇ ಸ್ಥಾನವನ್ನು ಮಾನ್ಸಿ ಪಡೆದಿದ್ದಾರೆ.