ಕಾಂತಾರ ಸಕ್ಸಸ್: ದೈವಕ್ಕೆ ಕೋಲ ಕೊಟ್ಟು ಹರಕೆ ತೀರಿಸಿದ ಚಿತ್ರ ತಂಡ

ಕಾಂತಾರ ಸಕ್ಸಸ್: ದೈವಕ್ಕೆ ಕೋಲ ಕೊಟ್ಟು ಹರಕೆ ತೀರಿಸಿದ ಚಿತ್ರ ತಂಡ

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಿರ್ದೇಶನ ಮಾಡಿ ನಟಿಸಿರುವ ‘ಕಾಂತಾರ’ ಸಿನಿಮಾ ಸೂಪರ್ ಸಕ್ಸಸ್ ಕಂಡಿದ್ದು, ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಚಿತ್ರ ಆಸ್ಕರ್ ಅಂಗಳದವರೆಗೂ ತಲುಪಿದೆ. ಅದ್ಭುತ ಯಶಸ್ಸಿನ ಬಳಿಕ ಸಿನಿಮಾ ತಂಡ ಕೂಡ ದೇವಕ್ಕೆ ಕೋಲ ಕೊಟ್ಟು ಹರಕೆ ತೀರಿಸಿದೆ.

ಇತ್ತೀಚೆಗೆ ಮಂಗಳೂರು ಭಾಗದಲ್ಲಿ ಪಂಜುರ್ಲಿ ದೈವಕ್ಕೆ ಕೋಲ ಕೊಟ್ಟು ಇಡೀ ‘ಕಾಂತಾರ’ ಚಿತ್ರತಂಡ ಹರಕೆ ತೀರಿಸಿತ್ತು. ರಿಷಬ್ ಶೆಟ್ಟಿ, ಹೊಂಬಾಳೆ ಸಂಸ್ಥೆಯ ರೂವಾರಿ ವಿಜಯ್ ಕಿರಗಂದೂರು, ನಟಿ ಸಪ್ತಮಿ ಗೌಡ ಹಾಗೂ ರಿಷಬ್ ಶೆಟ್ಟಿ ಅವರ ಪತ್ನಿ ಪ್ರಗತಿ ಶೆಟ್ಟಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ದೈವ ಕೋಲದ ಹರಕೆ ಕ್ಷಣ ಹೇಗಿತ್ತು ಎಂಬುದನ್ನ ಹೊಂಬಾಳೆ ಫಿಲ್ಮ್ಸ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ. ಕಾಂತಾರ ಚಿತ್ರದ ‘ವರಾಹ ರೂಪಂ’ ಹಾಡನ್ನು ಬಳಸಿ, ಈ ವೀಡಿಯೋವನ್ನ ಅಪ್‌ಲೋಡ್ ಮಾಡಲಾಗಿದೆ.

https://www.instagram.com/reel/CnoAZnWDKEl/?igshid=YmMyMTA2M2Y=

ನೀವು ಪ್ರಕೃತಿಗೆ ಶರಣಾಗಿ ಮತ್ತು ಜೀವನದಲ್ಲಿ ಯಶಸ್ಸು ಮತ್ತು ಸ್ವಾತಂತ್ರ್ಯವನ್ನು ನಿಮಗೆ ನೀಡಿದ ದೇವರನ್ನು ಆರಾಧಿಸಿ. ಕಾಂತಾರ ತಂಡವು ದೈವದ ನಿಜ ರೂಪವನ್ನು ವೀಕ್ಷಿಸಿತು, ದೈವದ ಆಶೀರ್ವಾದವನ್ನು ಪಡೆಯಲಾಯಿತು. ಹರಕೆ ತೀರಿಸಿದ ಕ್ಷಣಗಳು ಎಂದು ಹೊಂಬಾಳೆ ಫಿಲ್ಮ್ಸ್ ಮತ್ತು ರಿಷಬ್ ಶೆಟ್ಟಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಕಾಂತಾರ ಸಕ್ಸಸ್‌ಗೆ ದೈವ ಕೋಲದ ವೀಡಿಯೋಗೆ ಅಭಿಮಾನಿಗಳ ಕಾಮೆಂಟ್ ಗಳ ಸುರಿಮಳೆಯೇ ಹರಿದು ಬರುತ್ತಿದೆ. ಹಾಗೆಯೇ ಈ ವೇಳೆ ಆದಷ್ಟು ಬೇಗ ‘ಕಾಂತಾರ-2’ ಸಿನಿಮಾಗೆ ಚಾಲನೆ ಕೊಡಿ ಎಂದು ಫ್ಯಾನ್ಸ್ ಬೇಡಿಕೆ ಇಟ್ಟಿದ್ದಾರೆ.

Leave a reply

Your email address will not be published. Required fields are marked *