
ತಲೆ ಹೊಟ್ಟು ನಿವಾರಿಸಿ, ಸಿಲ್ಕಿ ಕೂದಲು ಪಡೆಯಲು ಹಿತ್ತಲ ಮದ್ದು ಮೆಂತ್ಯ

ತಲೆ ಹೊಟ್ಟು ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆಯೇ?, ಕೂದಲು ಸಿಲ್ಕಿಯಾಗುತ್ತಿಲ್ಲ. ಪದೇ ಪದೆ ಕೂದಲು ಗಂಟು (ಕರ್ಲಿ) ಕಟ್ಟುವ ಸಮಸ್ಯೆಗೆ ಮನೆಯಲ್ಲಿಯೇ ಪರಿಹಾರ ಬೇಕಿದ್ದರೆ ಈ ಲೇಖನ ಪೂರ್ತಿ ಓದಿ.
ಸಮಸ್ಯೆ ಬಂದಾಗಲೆಲ್ಲ ಬಗೆ ಬಗೆಯ ಶ್ಯಾಂಪುವನ್ನೆಲ್ಲಾ ಹಚ್ಚಿ ತಲೆ ಕೂದಲನ್ನು ಹಾಳು ಮಾಡಿ ಕೊಳ್ಳುತ್ತಿವಿ. ಅಲ್ಲದೇ ಜಾಹೀರಾತಿಗೆ ಮರುಳಾಗಿ ಅಲ್ಲಿ ತೋರಿಸುವ ಶ್ಯಾಂಪು ಅಥವಾ ಔಷಧವನ್ನು ಬಳಸುತ್ತೇವೆ. ಆದರೂ ಸಹ ತಲೆ ಹೊಟ್ಟು ನಿವಾರಣೆಯಾಗುವುದಿಲ್ಲ.

ಇದನ್ನೂ ಓದಿ: ಕೂದಲು ಕಪ್ಪಗಾಗಬೇಕೆ? ಕರಿ ಬೇವಿನಲ್ಲಿದೆ ಆರೋಗ್ಯದ ಗುಟ್ಟು
ನಮ್ಮ ಗೃಹ ಬಳಕೆಯ ವಸ್ತುವಿನಲ್ಲೇ ಪರಿಹಾರವಿದ್ದರೂ ಅದನ್ನು ಬಳಸದೇ ಜಾಹಿರಾತಿನ ಮೊರೆ ಹೋಗುತ್ತಿದ್ದೇವೆ. ಬಹುತೇಕರಿಗೆ ತಿಳಿದಿರುವುದಿಲ್ಲ ನಮ್ಮ ಅಡುಗೆ ಮನೆಯಲ್ಲೇ ಔಷಧವಿದೆ ಎಂದು. ಹೌದು ನಾವು ದೋಸೆ ಮತ್ತು ಸಾಂಬಾರು ಪದಾರ್ಥಗಳಲ್ಲಿ ಬಳಸುವ ಮೆಂತ್ಯ ಕಾಳಿನಲ್ಲಿಯೇ ಕೂದಲಿಗೆ ಬೇಕಾದ ಔಷಧವಿದೆ. ಅದರಿಂದ ನಾವು ಮನೆಯಲ್ಲಿರುವ ವಸ್ತುವನ್ನು ಬಳಸಿ ಔಷಧ ತಯಾರಿಸಿಕೊಳ್ಳಬಹುದು.
ಆ ಔಷಧ ತಲೆಗೆ ಹಚ್ಚುವುದರಿಂದ ತಲೆಯಲ್ಲಿರುವ ಹೊಟ್ಟು ಮಾಯವಾಗುತ್ತದೆ ಮತ್ತು ಕೂದಲು ಉದುರುವುದು ನಿಲ್ಲುತ್ತದೆ. ಅಲ್ಲದೆ ಕೂದಲುಗಳು ಸುಂಧರವಾಗುತ್ತವೆ. ಕೂದಲು ಸಿಲ್ಕಿಯಾಗುತ್ತದೆ. ಇದನ್ನು ಮಹಿಳೆಯರು ಅಷ್ಟೇ ಅಲ್ಲ ಪುರುಷರು ಸಹ ಬಳಸಬಹುದು. ಇದು ತಲೆಯನ್ನೂ ತಂಪಗಿರಿಸುತ್ತದೆ.

ಇದನ್ನೂ ಓದಿ: ಕೂದಲು ಕಪ್ಪಗಾಗಬೇಕೆ? ಕರಿ ಬೇವಿನಲ್ಲಿದೆ ಆರೋಗ್ಯದ ಗುಟ್ಟು
ಔಷಧ ತಯಾರಿಸುವುದು ಹೇಗೆ?
ಮೆಂತ್ಯ ಕಾಳನ್ನು ಅರ್ಧ ದಿನ ನೆನೆಸಿ ನಂತರ ಮಿಕ್ಸಿಗೆ ಹಾಕಿ ರುಬ್ಬಬೇಕು. ನಂತರ ಅದಕ್ಕೆ ಸ್ವಲ್ಪ ಮೋಸರು ಮತ್ತು ಸ್ವಲ್ಪ ಕೊಬ್ಬರಿ ಎಣ್ಣೆ ಹಾಕಿ ಚೆನ್ನಾಗಿ ಕಲಸಿದರೆ ಔಷಧ ತಯಾರು.
ಅದನ್ನು ತಲೆಗೆ ಹಚ್ಚಬೇಕು. ಕೂದಲ ಎಳೆ ಎಳೆ ತೆಗೆದು ಈ ಮಿಶ್ರಣವನ್ನು ತಲೆ ಪೂರ್ತಿ ಹಚ್ಚಿದ ಮೇಲೆ ಅರ್ಧ ಗಂಟೆ ನಂತರ ತಲೆಯನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಹೀಗೆ ಎರಡು ದಿನಕ್ಕೊಮ್ಮೆ ಅಥವಾ ವಾರಕ್ಕೆ ಎರಡು ಬಾರಿ ಮಾಡುವುದರಿಂದ ತಲೆ ಹೊಟ್ಟು ಮಾಯವಾಗುತ್ತದೆ. ಕೂದಲೂ ಸ್ಮೂತ್ ಮತ್ತು ಸಿಲ್ಕಿ ಆಗುತ್ತದೆ. ಕೂದಲಿಗೆ ಯಾವುದೇ ಕಂಡಿಷ್ನರ್ ಬಳಸುವ ಅಗತ್ಯವಿರುವುದಿಲ್ಲ.