ಲಾಭದಾಯಕ ಅಣಬೆ ಬೇಸಾಯ

ಲಾಭದಾಯಕ ಅಣಬೆ ಬೇಸಾಯ

ಅತಿ ಹೆಚ್ಚು ಆದಾಯ ಕೊಡುವ ಕೃಷಿಯಲ್ಲಿ ಅಣಬೆ ಕೃಷಿ ಕೂಡ ಒಂದು. ಪ್ರಪಂಚದಲ್ಲಿ ನೈಸರ್ಗಿಕವಾಗಿ ಹತ್ತು ಸಾವಿರಕ್ಕಿಂತ ಹೆಚ್ಚು ಅಣಬೆಗಳಿವೆ, ಅವುಗಳಲ್ಲಿ ಐನೂರಕ್ಕಿಂತ ಹೆಚ್ಚು ಅಣಬೆಗಳನ್ನು ತಿನ್ನುತ್ತಾರೆ. ಕೆಲವು ಅಣಬೆಗಳು ವಿಷಪೂರಿತವಾಗರುತ್ತವೆ. ಆದರೆ ಕೆಲವು ಅಣಬೆಗಳನ್ನು ಮಾರಾಟಕ್ಕೆ ಕೃತಕವಾಗಿ ಬೆಳೆಯುತ್ತಾರೆ.

ತಿನ್ನುವ ಅಣಬೆಗಳನ್ನು ಒಂದು ಉತ್ತಮವಾದ ತರಕಾರಿ ಎಂದು ಪರಿಗಣಿಸಬಹುದು. ಇವುಗಳು ಹೆಚ್ಚು ಪೌಷ್ಠಿಕಾಂಶಗಳನ್ನು ಹೋಂದಿದ್ದು, ಸಸಾರಜನಕ, ಮುಖ್ಯವಾದ ಅನ್ನಾಂಗಗಳು ಮತ್ತು ಖನಿಜಾಂಶಗಳು ಹೊಂದಿವೆ.

ತಿನ್ನುವ ಅಣಬೆಗಳಲ್ಲಿ ಕೊಬ್ಬಿನ ಮತ್ತು ಸಕ್ಕರೆ ಅಂಶ ಕಡಿಮೆ ಇದೆ. ಆದ್ದರಿಂದ ಇವು ಮದುಮೇಹ ಮತ್ತು ಹೃದಯ ರೋಗಿಗಳಿಗೆ ಒಳ್ಳೆಯ ಆಹಾರ. ಇವು ಮೃದುವಾಗಿದ್ದು ಎಲ್ಲಾ ಮಾಸಲೆಗಳನ್ನು ಅಳವಡಿಸಿಕೊಳ್ಳುವುದರಿಂದ ಹಲವಾರು ರುಚಿಯಾದ ತಿಂಡಿ ತಿನಿಸುಗಳನ್ನು ತಯಾರಿಸಬಹುದು. ಕೆಲವು ಅಣಬೆಗಳನ್ನು ಔಷಧಿಯಾಗಿಯೂ ಉಪಯೋಗಿಸುತ್ತಾರೆ.

ಅಣಬೆ ಬೇಸಾಯವು ಅಲ್ಪಾವಧಿ ಬೆಳೆ ಮತ್ತು ಕೊಟ್ಟಡಿಯೊಳಗೆ ಬೆಳೆಯುವ ಬೆಳೆ. ಇವುಗಳನ್ನು ಸ್ವಂತಕ್ಕೆ ಹವ್ಯಾಸವಾಗಿ ಅಥವಾ ವಾಣಿಜ್ಯ ಬೆಳೆಯಾಗಿ ಬೆಳೆಯಬಹುದು.

ಬೇಸಾಯಕ್ಕೆ ಯೋಗ್ಯವಾದ ಹಲವಾರು ಅಣಬೆಗಳಿವೆ. ಅವುಗಳಲ್ಲಿ ಹೆಚ್ಚಾಗಿ ಬಿಳಿಗುಂಡಿ (ಬಟನ್) ಅಣಬೆ ಅಥವಾ ಯುರೋಪಿನ ಬಿಳಿಗುಂಡಿ ಅಣಬೆ, ಕಪ್ಪೆ ಚಿಪ್ಪಿನ (ಅಯಿಸ್ಟರ್) ಅಣಬೆ ಅಥವಾ ಡಿಂಗ್ರಿ ಅಣಬೆ, ಹಾಲು (ಮಿಲ್ಕಿ) ಅಣಬೆ, ಭತ್ತದ ಹುಲ್ಲಿನ ಅಣಬೆ, ಜಪಾನಿನ ಶಿಟಾಕೆ ಮುಂತಾದ ಅಣಬೆಗಳನ್ನು ಬೆಳೆಯುತ್ತಾರೆ.

ಬೇರೆ ಬೇರೆ ಅಣಬೆಗೆ ತನ್ನದೇ ಆದ ಹವಾಗುಣ ಬೇಕಾಗುತ್ತದೆ ಮತ್ತು ಬೇಸಾಯ ಕ್ರಮವು ಪ್ರತಿ ಅಣಬೆಗೆ ಬೇರೆ ಬೇರೆ ಆಗಿರುತ್ತದೆ. ಆದರೆ ಯಾವುದೇ ಅಣಬೆ ಬೆಳೆಯುವಾಗ ಸ್ವಚ್ಛತೆ ಕಾಪಾಡುವುದು ಬಹಳ ಮುಖ್ಯ.

ಅಣಬೆ ಕೊಠಡಿ ಹೇಗಿರಬೇಕು
ಅಣಬೆ ಬೇಸಾಯದ ಮನೆ ಮತ್ತು ಕೊಠಡಿಗಳು ಶುಚಿಯಾಗಿಡುವುದು. ಅಣಬೆ ಮಾರುಕಟ್ಟೆ ಅಥವಾ ಬೇಡಿಕೆಯನ್ನು ದೃಢಪಡಿಸಿಕೊಂಡು ಬೆಳೆಯುವುದು ಉತ್ತಮ. ಕಾರಣ ಕಟಾವು ಮಾಡಿದ ಅಣಬೆಗಳನ್ನು ಹೆಚ್ಚು ಕಾಲ ತಾಜಾವಾಗಿ ಇಡುವುದಕ್ಕೆ ಕಷ್ಟ ಮತ್ತು ಬೆಳೆದ ನಂತರ ಕಟಾವು ಮಾಡುವುದನ್ನು ಮುಂದೂಡುವುದಕ್ಕೆ ಆಗುವುದಿಲ್ಲ. (ಆದರೆ ಚಿಪ್ಪಿನ ಅಣಬೆಯನ್ನು ಒಣಗಿಸಿ ಹೆಚ್ಚು ದಿನ ಇಡಬಹುದು).

ಅಣಬೆ ಬೇಸಾಯದಲ್ಲಿ ರೋಗಗಳು ಕಾಣಿಸಿಕೊಂಡರೆ ಹತೋಟಿ ಕಷ್ಟ. ಅದಕ್ಕೆ ರೋಗಗಳು ಬಾರದಂತೆ ಮುನ್ನಚ್ಚರಿಕೆ ವಹಿಸುವುದು ಬಹಳ ಮುಖ್ಯ.

ಮುಖ್ಯವಾಗಿ ಬರುವ ರೋಗಗಳೆಂದರೆ ಬೇರೆ ಬೇರೆ ಶಿಲೀಂಧ್ರಗಳು ಹುಲ್ಲಿನ ಮೇಲೆ ಬೆಳೆದು ಹಸಿರು, ನೀಲಿ ಕಪ್ಪು ಬಣ್ಣಕ್ಕೆ ತಿರುಗುವುದು. ಅಂತಹ ಚೀಲಗಳಿದ್ದರೆ ಅವುಗಳ ಮೇಲೆ ಶೇ. 5 ರಷ್ಟು ಪಾರ್ಮಲಿನ್ ದ್ರಾವಣ ಸಿಂಪಡಿಸಿ ಅವುಗಳನ್ನು ದೂರ ಎಸೆಯಬೇಕು.

ಮುನ್ನಚ್ಚರಿಕೆಗಳು:
ಸರಿಯಾಗಿ ಹುಲ್ಲನ್ನು ಪಾಶ್ಚರೀಕರಣ ಮಾಡುವುದು. ಉತ್ತಮವಾದ ಬೀಜ ಉಪಯೋಗಿಸುವುದು. ಅಣಬೆ ಮನೆಯಲ್ಲಿ ಮತ್ತು ಸುತ್ತ ಶುಚಿಯಾಗಿಡಬೇಕು (ಶೇ. 0.1 ರಷ್ಟು ಬ್ಯಾವಿಸ್ಟಿನ್ ಮತ್ತು ನವಾನ್ ಗಳನ್ನು ಗೋಡೆಗಳ ಮೇಲೆ ಮತ್ತು ಮನೆಯ ಸುತ್ತ ಸಿಂಪಡಿಸುವುದು. ಹೀಗೆ ಅಣಬೆಯನ್ನು ಸಣ್ಣ ಪ್ರಮಾಣದಲ್ಲಿ ತಮ್ಮ ಮನೆಗೆ ಅಥವಾ ಸಣ್ಣ ಘಟಕವಾಗಿ ಬೆಳೆದು ಉತ್ತಮ ಆಹಾರವನ್ನು ಪಡೆಯಬಹುದು ಮತ್ತು ಅಲ್ಪಾವಧಿಯ ವಾಣಿಜ್ಯ ಬೆಳೆಯಾಗಿಯೂ ಬೆಳೆಯಬಹುದು.

ಬೀಜ ಎಲ್ಲಿ ಸಿಗುತ್ತದೆ?
ಅಣಬೆಗೆ ಕುರಿತಾಗಿಯೇ ತೋಟಗಾರಿಕೆ ಇಲಾಖೆಯಲ್ಲಿ ಒಂದು ವಿಭಾಗವಿದೆ. ರಾಜ್ಯ ಸರಕಾರ ರಾಜ್ಯದ ಸುಮಾರು 11 ಜಿಲ್ಲೆಗಳಲ್ಲಿ ಬೋಜೋತ್ಪಾದನೆ ಮಾಡುತ್ತದೆ. ಆಸಕ್ತ ರೈತರು ಈ ಕೇಂದ್ರಗಳ ಮೂಲಕ ಅಣಬೆ ಬೀಜಗಳನ್ನು ಪಡೆಯಬಹದು. ಜತೆಗೆ ಅಣಬೆ ಬೇಸಾಯದ ಬಗ್ಗೆ ಈ ಕೇಂದ್ರಗಳ ಮೂಲಕ ತರಬೇತಿ ಪಡೆಯಬಹುದು.

Leave a reply

Your email address will not be published. Required fields are marked *