ಜಗತ್ತನ್ನೇ ಭಯದಲ್ಲಿ ಮುಳುಗಿಸಿರುವ ಕೊರೊನಾ ವೈರಸ್ ಬಗ್ಗೆ 1989ಕ್ಕಿಂತ ಮೊದಲೇ ಭಾರತೀಯರು ಅದನ್ನು ಪತ್ತೆ ಮಾಡಿದ್ದರು ಎನ್ನುವ ಸುದ್ದಿಯೊಂದು ಎಲ್ಲೆಡೆ ಹರಿದಾಡುತ್ತಿದೆ. ನೆಗಡಿ ತರಬಲ್ಲ ವೈರಸ್ ಗಳಲ್ಲಿ ಕರೋನಾ ವೈರಸ್ ಸಹ ಹೊಂದು ಎನ್ನುವ ಬಗ್ಗೆ ಬರೆದ ಲೇಖನ ತುಣುಗಳು ಹರಿದಾಡುತ್ತಿದೆ.

ತರಂಗ ಮಾಸಪತ್ರಿಕೆಯಲ್ಲಿ ಕೊರೊನಾ ವೈರಸ್ ಬಗ್ಗೆ ಬರೆದಿರುವ ಬಗ್ಗೆ ಪತ್ರಿಕೆ ತುಣುಕು ಇದಾಗಿದೆ. ಅದರಲ್ಲಿ ನೆಗಡಿ ವೈರಸ್ ಗಳ ಬಗ್ಗೆ ಬರೆಯುವಾಗ ಕೊರೊನಾ ವೈರಸ್ ಬಗ್ಗೆಯೂ ಚಿತ್ರ ಸಹಿತ ಕಪ್ಪು, ಬಿಳುಪು ಬಣ್ಣದಲ್ಲಿ ಇದ್ದ ಪುಟ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಕೊರೊನಾ ವೈರಸ್ ಗೆ ಇದು ಔಷಧವೇ?

ಪತ್ರಿಕೆ ತುಣುಕನ್ನು ಬೆಂಗಳೂರಿನವರೊಬ್ಬರು ಫೇಸ್ ಬುಕ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವಾಟ್ಸ್ ಆ್ಯಪ್ ಗಳಲ್ಲಿಯೂ ಅದು ಹರಿದಾಡುತ್ತಿದೆ. ತರಂಗ ಪತ್ರಿಕೆಯ ಸಹೋದರ ಪತ್ರಿಕೆ ಉದಯವಾಣಿ ಪತ್ರಿಕೆ ತನ್ನ ಅಧಿಕೃತ ಟ್ವೀಟರ್ ನಲ್ಲಿ ಇದು ತರಂಗದಲ್ಲಿ ಪ್ರಕಟವಾದ ಲೇಖನದ ತುಣುಕು ಎಂದು ಹಂಚಿಕೊಂಡಿದೆ. ಅಲ್ಲದೆ, ಪತ್ರಿಕೆ ತುಣುಕಿನ ಕೆಳ ಭಾಗದಲ್ಲಿಯೂ ತರಂಗ, ಪುಟ 13 ಮತ್ತು 1989 ಇಸವಿಯ ನಮೂದು ಕಾಣಿಸುತ್ತಿದೆ.

ಕೊರೊನಾ ವೈರಸ್ ಗೆ ಇದು ಔಷಧವೇ?

ಪತ್ರಿಕೆ ಪುಟದಲ್ಲಿ ಕೊರೊನಾ ಬಗ್ಗೆ ಏನಿದೆ?
ಎಲ್ಲ ವೈರಸ್ ಗಳು ಬದುಕಲು ಹಿಡಿದಿರುವುದು ಮನುಷ್ಯರನ್ನೇ. ಇತರೆ ಪ್ರಾಣಿಗಳಲ್ಲಿ ನೆಗಡಿಯ ವೈರಸ್ ಇದ್ದಿದ್ದನ್ನು ಯಾರೂ ಗುರುತಿಸುವುದಿಲ್ಲ. ನೆಗಡಿಯ ವೈರಸ್ ಗಳಿಂದ ತನ್ನನ್ನು ರಕ್ಷಿಸಿಕೊಳ್ಳುವ ಶಕ್ತಿ ದೇಹಕ್ಕಿದೆ. ಆದರೆ, ಆ ಚೈತನ್ಯ ಎಲ್ಲರಲ್ಲಿಯೂ ಒಂದೇ ರೀತಿ ಇರುವುದಿಲ್ಲ. ಅದಕ್ಕೆ ಕೆಲವರಿಗೆ ವೈರಸ್ ತಾಗಿಯೂ ನೆಗಡಿ ಬರುವುದಿಲ್ಲ. ಕೆಲವರಿಗೆ ಬಂದ ನೆಗಡಿ ವಾರ ಕಳೆದರೂ ಮುಗಿಯುವುದಿಲ್ಲ. ದೇಹದ ಪ್ರತಿರೋಧ ವ್ಯವಸ್ಥೆಗೂ, ಆಹಾರ ಪೋಷಕಾಂಶಗಳಿಗೂ, ಮನಸ್ಥಿತಿಗೂ ಸಂಬಂಧವಿದೆ.  ಮನಸ್ಸಿನಲ್ಲಿ ಸದಾ ಚಿಂತೆ ಮೂಡಿದಂತೆ ಕೆಲಸ ಮಾಡಿದರೂ ದೇಹದ ಶಕ್ತಿ ಕುಂದಿದಂತೆಯೇ.  ಪ್ರತಿರೋಧಕ ಶಕ್ತಿ ಮಕ್ಕಳಲ್ಲಿ ವಯಸ್ಕರಿಗಿಂತ ಚುರುಕಾಗಿಲ್ಲದ ಕಾರಣಕ್ಕೆ ಬೇಗ ಬಾಧಿಸುತ್ತದೆ ಎನ್ನುವುದು ಪತ್ರಿಕೆ ಪುಟದಲ್ಲಿರುವ ಲೇಖನದ ಸಾರಾಂಶ.

ಕೊರೊನಾ ವೈರಸ್ ಗೆ ಇದು ಔಷಧವೇ?