ಪಶು ವೈದ್ಯಾಧಿಕಾರಿಗಳ ನೇಮಕಕ್ಕೆ ಅರ್ಜಿ ಆಹ್ವಾನ

ಪಶು ವೈದ್ಯಾಧಿಕಾರಿಗಳ ನೇಮಕಕ್ಕೆ ಅರ್ಜಿ ಆಹ್ವಾನ

ಪಶುಪಾಲನಾ ಮತ್ತು ಪಶುವ್ಯದ್ಯಕೀಯ ಸೇವಾ ಇಲಾಖೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಸ್ಥಳೀಯ ವೃಂದಕ್ಕೆ ಮೀಸಲಿಟ್ಟ ಪಶುವೈದ್ಯಾಧಿಕಾರಿಗಳ ಹುದ್ದೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಇವು ಗ್ರೂಪ್ ಎ ವೃಂದದ ಕಿರಿಯ ವೇತನ ಶ್ರೇಣಿಯ ಹುದ್ದೆಯಾಗಿದ್ದು, ಅರ್ಹ ಅಭ್ಯರ್ಥಿಗಳು ಫೆಬ್ರವರಿ 29ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ವೇತನ ಶ್ರೇಣಿ: 52,650 ರೂ. ದಿಂದ 97,100 ರೂ.
ಯಾವ ವರ್ಗಕ್ಕೆ ಎಷ್ಟು ಹುದ್ದೆ:
ಒಟ್ಟು 61 ಹುದ್ದೆಗಳು ಖಾಲಿ ಇವೆ. ಇವುಗಳಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 11, ಪರಿಶಿಷ್ಟ ಜಾತಿ 15, ಪರಿಶಿಷ್ಟ ಪಂಗಡ 04, ಪ್ರವರ್ಗ-1ರ 02, ಪ್ರವರ್ಗ-2ಎ 19, ಪ್ರವರ್ಗ 2ಬಿ ಮತ್ತು ಪ್ರವರ್ಗ 3ಎ ಅಭ್ಯರ್ಥಿಗಳಿಗೆ 04 ಹಾಗೂ ಪ್ರವರ್ಗ 3ಬಿ ವರ್ಗದ ಅಭ್ಯರ್ಥಿಗಳಿಗೆ 02 ಹುದ್ದೆಗಳನ್ನು ಮೀಸಲಿಡಲಾಗಿದೆ.
ಅರ್ಹತೆಗಳೇನು?
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಫೆಬ್ರವರಿ 29ರೊಳಗೆ ಯಾವುದೇ ಪಶುವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯದಿಂದ ಅಥವಾ ಪಶು ವಿಶ್ವವಿದ್ಯಾಲಯ ಅಥವಾ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಿಂದ ಕನಿಷ್ಠ ಶೇಕಡಾ 50 ರಷ್ಟು ಅಂಕಗಳೊಂದಿಗೆ ಬಿವಿಎಸ್‍ಸಿ ಅಥವಾ ಎ ಎಚ್ ಪದವಿ ಪಡೆದಿರಬೇಕು. ಜೊತೆಗೆ ಭಾರತೀಯ ಪಶುವೈದ್ಯಕೀಯ ಪರಿಷತ್ತಿನ ಕಾಯ್ದೆ 1984ರ ಅಡಿಯಲ್ಲಿ ಕರ್ನಾಟಕ ಪಶುವೈದ್ಯಕೀಯ ಪರಿಷತ್ತಿನಲ್ಲಿ ಹೆಸರು ನೋದಾಯಿಸಿದ್ದು, ನೋಂದಣಿ ಚಾಲ್ತಿಯಲ್ಲಿರಬೇಕು.
ಗರಿಷ್ಠ ವಯೋಮಿತಿ:
ಸಮಾನ್ಯ ವರ್ಗದ ಅಭ್ಯರ್ಥಿಗಳಾಗಿದ್ದಲ್ಲಿ 35 ವರ್ಷ, ಪ್ರವರ್ಗ 2(ಎ), 2ಬಿ, 3ಎ ಮತ್ತು 3ಬಿ ವರ್ಗದ ಅಭ್ಯರ್ಥಿಗಳಿಗೆ 38 ವರ್ಷ ಹಾಗೂ ಪರಿಶಿಷ್ಟ ಜಾತಿ/ಪಂಗಡ ಮತ್ತು ಪ್ರವರ್ಗ-1ರ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 40 ವರ್ಷ ನಿಗದಿಪಡಿಸಲಾಗಿದೆ.
ಅರ್ಜಿ ಶುಲ್ಕ :
ಸಾಮಾನ್ಯ ಪ್ರವರ್ಗ 2, 2ಬಿ, 3ಎ ಹಾಗೂ 3ಬಿ ವರ್ಗದ ಅಭ್ಯರ್ಥಿಗಳಿಗೆ 520ರೂ. ಹಾಗೂ ಪರಿಶಿಷ್ಟ ಜಾತಿ/ಪಂಗಡ, ಪ್ರವರ್ಗ-1, ಮಾಜಿ ಸೈನಿಕ ಅಭ್ಯರ್ಥಿಗಳು ಹಾಗೂ ವಿಶೇಷ ಚೇತನ ಅಭ್ಯರ್ಥಿಗಳಿಗೆ 270ರೂ. ಶಲ್ಕ ಪಾವತಿಸಲು ಸೂಚಿಸಲಾಗಿದೆ. ರಾಜ್ಯದ ಯಾವುದೇ ಇ-ಅಂಚೆ ಕಚೇರಿಯಲ್ಲಿ ಶುಲ್ಕ ಪಾವತಿಸಬಹುದಾಗಿದೆ. ಶುಲ್ಕ ಪಾವತಿಸಲು ಮಾರ್ಚ್ 4 ಕೊನೆ ದಿನ. ಮಾಹಿತಿಗೆ ದೂರವಾಣಿ ಸಂಖ್ಯೆ: 18004250012, 080 23417100.
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

Leave a reply

Your email address will not be published. Required fields are marked *