Select Page

ವಿಡಿಯೊ: ಕುಮಟಾಬಳಿ ಗ್ಯಾಸ್ ಟ್ಯಾಂಕರ್ ಪಲ್ಟಿ: ಎಲ್ಲೆಲ್ಲೂ ಭಯದ ವಾತಾವರಣ

ವಿಡಿಯೊ: ಕುಮಟಾಬಳಿ ಗ್ಯಾಸ್ ಟ್ಯಾಂಕರ್ ಪಲ್ಟಿ: ಎಲ್ಲೆಲ್ಲೂ ಭಯದ ವಾತಾವರಣ

ಕುಮಟಾ: ಕುಮಟಾ ಹಂದಿಗೋಣ ಗ್ರಾಮದ ಬಳಿ ಗ್ಯಾಸ್ ಟೆಂಕರ್ ಪಲ್ಟಿಯಾಗಿದೆ.

ಹಂದಿಗೋಣ ಗ್ರಾಮದ ಜನರಲ್ಲಿ ಆತಂಕ ಆವರಿಸಿದೆ. ಒಲೆಗೆ ಬೆಂಕಿ ಹಚ್ಚಬೇಡಿ ಎಂದು ಗ್ರಾಮಸ್ಥರು ಎಲ್ಲರಿಗೂ ಎಚ್ಚರಿಸುತ್ತಿದ್ದಾರೆ. ಗ್ಯಾಸ್ ಸೋರಿಕೆಯಾಗುತ್ತಿರುವ ಅನುಮಾನದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಅಗ್ನಿ ಶಾಮಕ ದಳ ಸಿಬ್ಬಂದಿ ಧಾವಿಸಿದ್ದಾರೆ.

ಸ್ಥಳದಲ್ಲಿ ವಾಹನಗನ ದಟ್ಟಣೆ ಉಂಟಾಗಿದ್ದರಿಂದ ಕುಮಟಾ ಪೊಲೀಸರು ಚಂದಾವರ ಮಾರ್ಗವಾಗಿ ಮಂಗಳೂರು ಕಡೆಗೆ ವಾಹನ ವಾಹನ ಹೋಗಲು ವ್ಯವಸ್ಥೆ ಮಾಡಿದ್ದಾರೆ. ಕುಮಟಾ ಮಂಗಳೂರು ಸಂಚಾರ ಸದ್ಯ ಬಂದ್ ಆಗಿದೆ.

ಕೆಲ ವರ್ಷಗಳ ಹಿಂದೆ ಬರ್ಗಿಯಲ್ಲಿ ಇದೇ ರೀತಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿತ್ತು. ಆಗ ಭಾರೀ ಪ್ರಮಾಣದ ಅನಾಹುತ ಸಂಭವಿಸಿತ್ತು. ಹಾಗಾಗಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿರುವುದು ಜಿಲ್ಲೆಯಲ್ಲಿ ಆತಂಕ ಹೆಚ್ಚಿಸಿದೆ.

Leave a reply

Your email address will not be published. Required fields are marked *