Select Page

ರೈತರಿಗೆ ಖುಷಿ ಸುದ್ದಿ; ವಿವಿಧ ಬೆಳೆಗಳ ಬೆಂಬಲ ಬೆಲೆ ಹೆಚ್ಚಳ

ರೈತರಿಗೆ ಖುಷಿ ಸುದ್ದಿ; ವಿವಿಧ ಬೆಳೆಗಳ ಬೆಂಬಲ ಬೆಲೆ ಹೆಚ್ಚಳ

ಅತಿವೃಷ್ಟಿ ಹಾನಿ, ಕೊರೊನಾ ಕಷ್ಟದ ನಡುವೆಯೇ ರೈತರಿಗೆ ಕೇಂದ್ರ ಸರ್ಕಾರ ಖುಷಿ ಸುದ್ದಿಯೊಂದು ಘೋಷಣೆ ಮಾಡಿದೆ.

ಕೇಂದ್ರ ಸರ್ಕಾರ 2021-22ನೇ ಸಾಲಿನ ಹಿಂಗಾರು ಹಂಗಾಮಿನ ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆಯಲ್ಲಿ ಭರ್ಜರಿ ಏರಿಕೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಆರ್ಥಿಕ ವ್ಯವಹಾರಗಳ ಮೇಲಿನ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

ದೇಶದ ಆಹಾರ ಧಾನ್ಯಗಳ ಬೇಡಿಕೆ ಆಧರಿಸಿ ಬೆಂಬಲ ಬೆಲೆ ಏರಿಕೆ ಮಾಡಲು ನಿರ್ಧರಿಸಲಾಗಿದೆ. ಸ್ವಾಮಿನಾಥನ್‌ ಆಯೋಗದ ವರದಿ ಆಧರಿಸಿ ಎಂಎಸ್ ಪಿ ಹೆಚ್ಚಳ ಮಾಡಲಾಗುತ್ತಿದೆ.

ಕೂಲಿ ಆಳುಗಳ ವೆಚ್ಚ, ಎತ್ತು ಮತ್ತು ಯಂತ್ರಗಳ ಬಳಕೆ, ಭೂಮಿ ಗುತ್ತಿಗೆ, ಬೀಜ, ಗೊಬ್ಬರ ಖರೀದಿ ವೆಚ್ಚ ಸೇರಿದಂತೆ ರೈತರು ಮಾಡುವ ಹಲವು ಹೂಡಿಕೆಗಳನ್ನು ಪರಿಗಣಿಸಿ ಕೇಂದ್ರ ಸರ್ಕಾರದಿಂದ ಬೆಂಬಲ ಬೆಲೆ ನೀತಿ ನಿರ್ಧರಿಸಲಾಗಿದೆ.

ಧಾನ್ಯ2020-21ರ ಎಂಎಸ್‌ಪಿ2021-22ರ ಎಂಎಸ್‌ಪಿಎಂಎಸ್‌ಪಿ ಹೆಚ್ಚಳರೈತರಿಗೆ ಲಾಭ
ಗೋಧಿ1925197550106%
ಬಾರ್ಲಿ152516007565%
ಕಡಲೆ4875510022578%
ಬೇಳೆ ಕಾಳು4800480030078%
ಕಿರುಧಾನ್ಯ ಮತ್ತು ಸಾಸಿವೆ4425465022593%
ಕುಸುಬೆ5215532711250%

Leave a reply

Your email address will not be published. Required fields are marked *