ಭೀಮಣ್ಣ ನಾಯ್ಕಗೆ ಕೆಪಿಸಿಸಿ ಮಹತ್ವದ ಹುದ್ದೆ

ಭೀಮಣ್ಣ ನಾಯ್ಕಗೆ ಕೆಪಿಸಿಸಿ ಮಹತ್ವದ ಹುದ್ದೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್ ಮುಖಂಡ ಭೀಮಣ್ಣ ನಾಯ್ಕಗೆ ಕೆಪಿಸಿಸಿ ಮಹತ್ವದ ಹುದ್ದೆ ನೀಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರು ಆದೇಶ ಮಾಡಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಗಟ್ಟಿ ಗೊಳಿಸಲು ಹೊಸ ತಂಡ ರಚಿಸಿರುವ ಡಿ.ಕೆ. ಶಿವಕುಮಾರ ಅವರು ಮಂಗಳವಾರ ಕೆಪಿಸಿಸಿ (ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ) ವಕ್ತಾರರ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಉತ್ತರ ಕನ್ನಡ ಜಿಲ್ಲೆಯಿಂದ ಕೆಪಿಸಿಸಿ ವಕ್ತಾರರಾಗಿ ಭೀಮಣ್ಣ ನಾಯ್ಕ ಅವರಿಗೆ ಜವಾಬ್ದಾರಿ ವಹಿಸಲಾಗಿದೆ.

ಸಂವಹನ ಮತ್ತು ಮಾಧ್ಯಮ ವಿಭಾಗದ ವಕ್ತಾರರಾಗಿ ಇವರನ್ನು ನೇಮಿಸಲಾಗಿದೆ. ಅಂದರೆ, ಇವರು ಪಕ್ಷದ ಪರವಾಗಿ ಮಾಧ್ಯಮ ಹೇಳಿಕೆ, ಮಾಧ್ಯಮಗಳಲ್ಲಿ ಚರ್ಚೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಹಾಗಾಗಿ ಈ ಹುದ್ದೆ ಸಾಕಷ್ಟು ಮಹತ್ವದ್ದಾಗಿದೆ. ಪಕ್ಷದ ಮುಖವಾಣಿ ರೀತಿ ಇವರ ಕೆಲಸಗಳು ನಡೆಯುತ್ತವೆ.

ಭೀಮಣ್ಣ ನಾಯ್ಕ ಅವರು ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಜಕೀಯವಾಗಿ ಇನ್ನಷ್ಟು ಪ್ರಭಾವಿಯಾಗಲು ಈ ಹುದ್ದೆ ಮಹತ್ವದ್ದಾಗಿದೆ.

Leave a reply

Your email address will not be published. Required fields are marked *