KPSC: 1279 SDA ಹುದ್ದೆಗಳಿಗೆ ಅರ್ಜಿ ಆಹ್ವಾನ

KPSC: 1279 SDA ಹುದ್ದೆಗಳಿಗೆ ಅರ್ಜಿ ಆಹ್ವಾನ

2019-20ನೇ ಸಾಲಿನ ರಾಜ್ಯದ ವಿವಿಧ ಇಲಾಖೆಗಳು ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಉಳಿಕೆ ಮೂಲ ವೃಂದದ ಮತ್ತು ಹೈದೆರಾಬಾದ್ ಕರ್ನಾಟಕ ವೃಂದದ ಕಿರಿಯ ಸಹಾಯಕ/ ದ್ವಿತೀಯ ದರ್ಜೆ ಸಹಾಯಕ (SDA) ಹುದ್ದೆಗಳ ಭರ್ತಿಗೆ ಅರ್ಜಿ ಕರೆಯಲಾಗಿದೆ. ಕರ್ನಾಟಕ ಲೋಕಸೇವಾ ಆಯೋಗವು ಫೆಬ್ರವರಿ 29 ರಂದು ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ.

ಕರ್ನಾಟಕ ರಾಜ್ಯದಲ್ಲಿರುವ 29 ಸರಕಾರಿ ಇಲಾಖೆಗಳಲ್ಲಿ ಕಿರಿಯ ಸಹಾಯಕ/ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದೆ. ಅಭ್ಯರ್ಥಿಗಳು ಕೂಡಲೇ ಕೆಳಗಿನ ವಿವರಗಳನ್ನು ಓದಿ ನೇಮಕಾತಿ ಆದೇಶದ ಪ್ರಕಾರ ಅರ್ಜಿ ಸಲ್ಲಿಸಬಹುದು.

ಸರಕಾರಿ ಇತರ ಉದ್ಯೋಗಗಳ ಮಾಹಿತಿಗೆ ಅಕ್ಷರಗಳ ಮೇಲೆ ಕ್ಲಿಕ್ ಮಾಡಿ

ಹುದ್ದೆಗಳ ವಿವರ
ಉಳಿಕೆ ಮೂಲ ವೃಂದ ಹುದ್ದೆಗಳು : 1080
ಹೈದೆರಾಬಾದ್ ಕರ್ನಾಟಕ ವೃಂದದ ಹುದ್ದೆಗಳು : 199
ಒಟ್ಟು ಹುದ್ದೆಗಳು : 1279

ಅರ್ಜಿ ಸಲ್ಲಿಕೆಗೆ ಪ್ರಾರಂಭ: 9-3-2020
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 9-4-2020
ಶುಲ್ಕ ಪಾವತಿಸಲು ಕೊನೆ ದಿನಾಂಕ : 13-4-2020

ಪರೀಕ್ಷೆ ದಿನಾಂಕ
ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ದಿನಾಂಕ : 6-6-2020
ಸ್ಪರ್ಧಾತ್ಮಕ ಪರೀಕ್ಷೆ ದಿನಾಂಕ : 7-6-2020

ಅರ್ಜಿ ಸಲ್ಲಿಕೆ ಹೇಗೆ?
ಅಭ್ಯರ್ಥಿಗಳು ಕೆಪಿಎಸ್‍ಸಿ ಅಧಿಕೃತ ವೆಬ್‍ಸೈಟ್ www.kpsc.kar.nic.in ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಭಾವಚಿತ್ರ, ಸಹಿ, ವಯೋಮಿತಿ, ವಿದ್ಯಾರ್ಹತೆ ಹಾಗೂ ಕೋರಿದ ಮೀಸಲಾತಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಅಪ್ ಲೋಡ್ ಮಾಡಿದ ನಂತರ ಶುಲ್ಕವನ್ನು ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಬಹುದು.

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಒಟ್ಟು ಮೂರು ಹಂತಗಳಲ್ಲಿ ಇದೆ.
ಮೊದಲನೇ ಹಂತ – ಪ್ರೊಫೈಲ್ ಕ್ರಿಯೇಟ್ ಮಾಡುವುದು.
ಎರಡನೇ ಹಂತ– ಅರ್ಜಿ ಸಲ್ಲಿಕೆ.
ಮೂರನೇ ಹಂತ– ಅರ್ಜಿ ಶುಲ್ಕ ಪಾವತಿಸಬೇಕು.

​ಅರ್ಜಿ ಶುಲ್ಕ
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ- 635 ರೂ.
ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ- 335 ರೂ.
ಮಾಜಿ ಸೈನಿಕ ಅಭ್ಯರ್ಥಿಗಳಿಗೆ – 85 ರೂ.
SC, ST, ಅಂಗವಿಕಲ, ಪ್ರವರ್ಗ-1 ಅಭ್ಯರ್ಥಿಗಳಿಗೆ ಪ್ರೊಸೆಸಿಂಗ್ ಶುಲ್ಕ 35 ರೂ. ಮಾತ್ರ ಪಾವತಿಸಬೇಕು.

​ಶೈಕ್ಷಣಿಕ ಅರ್ಹತೆ
ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಪಾಸ್ ಮಾಡಿರಬೇಕು.
ಕನ್ನಡ ಮಾಧ್ಯಮ ಅಭ್ಯರ್ಥಿ, ಗ್ರಾಮೀಣ ಮಾಧ್ಯಮ ಅಭ್ಯರ್ಥಿ ಮೀಸಲಾತಿ ಸೌಲಭ್ಯ ಇದೆ.
ಅರ್ಜಿ ಸಲ್ಲಿಸುವಾಗಲೇ ಈ ಎಲ್ಲ ದಾಖಲಾತಿಗಳು, ಅಂಕ, ಅಂಕಪಟ್ಟಿ ಅಪ್ ಲೋಡ್ ಮಾಡಬೇಕಾಗುತ್ತದೆ.

​ವೇತನ ಮತ್ತು ಪಿಂಚಣಿ ಸೌಲಭ್ಯ
ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ ಮಾಸಿಕ ವೇತನ 21400-42000 ರೂ. ವರೆಗೆ ಸಿಗಲಿದೆ. ಸರ್ಕಾರದ ಆದೇಶ ಸಂಖ್ಯೆ ಎಫ್ ಡಿ (ಎಸ್ ಪಿ ಎಲ್) 04 ಪಿಇಟಿ 2005, ದಿನಾಂಕ 31-03-2006 ಮತ್ತು ಅದರ ತಿದ್ದುಪಡಿಗಳ ಅನ್ವಯ ಪಿಂಚಣಿ ಸೌಲಭ್ಯ ದೊರೆಯಲಿದೆ.

ಉಳಿಕೆ ಮೂಲ ವೃಂದದ ಎಸ್‍ಡಿಎ ಹುದ್ದೆ ಅಧಿಸೂಚನೆ

ಹೈದೆರಾಬಾದ್ ಕರ್ನಾಟಕ ವೃಂದದ ಎಸ್‍ಡಿಎ ಹುದ್ದೆ ಅಧಿಸೂಚನೆ

1 Comment

  1. Basangoud

    Nice job

    Reply

Leave a reply

Your email address will not be published. Required fields are marked *