ಭಾರತೀಯ ಜೀವ ವಿಮಾ ನಿಗಮದಲ್ಲಿ (ಎಲ್ಐಸಿ) ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಿವಿಲ್, ಎಲೆಕ್ಟ್ರಿಕಲ್, ಸ್ಟ್ರಕ್ಚರಲ್, ಎಂಇಪಿ ವಿಭಾಗದ ಅಸಿಸ್ಟಂಟ್ ಎಂಜಿನಿಯರ್ ಮತ್ತು ಅಸಿಸ್ಟಂಟ್ ಆರ್ಕಿಟೆಕ್ಟ್‌, ಅಸಿಸ್ಟಂಟ್ ಅಡ್ಮಿನಿಸ್ಟ್ರೇಟಿವ್ ಆಫೀಸರ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ನೋಟಿಪಿಕೇಷನ್ ಹೊರಡಿಸಿದೆ. ಫೆ.25ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಕೆಳಗಿನ ವಿವರ ನೋಡಿ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ: ಒಟ್ಟು- 218
ಸಹಾಯಕ ಎಂಜಿನಿಯರ್ (ಸಿವಿಲ್)- 29
ಸಹಾಯಕ ಎಂಜಿನಿಯರ್ (ಎಲೆಕ್ಟ್ರಿಕಲ್)- 10
ಸಹಾಯಕ ಎಂಜಿನಿಯರ್  (ಸ್ಟ್ರಕ್ಚರಲ್)-  04
ಸಹಾಯಕ ಎಂಜಿನಿಯರ್  (ಎಂಇಪಿ)- 03
ಅಸಿಸ್ಟಂಟ್ ಆರ್ಕಿಟೆಕ್ಟ್‌- 04
ಅಸಿಸ್ಟಂಟ್ ಅಡ್ಮಿನಿಸ್ಟ್ರೇಟಿವ್ ಆಫೀಸರ್ (ಚಾರ್ಟರ್ಡ್‌ ಅಕೌಂಟಂಟ್)- 40
ಅಸಿಸ್ಟಂಟ್ ಅಡ್ಮಿನಿಸ್ಟ್ರೇಟಿವ್ ಆಫೀಸರ್ (Actuarial)- 30
ಅಸಿಸ್ಟಂಟ್ ಅಡ್ಮಿನಿಸ್ಟ್ರೇಟಿವ್ ಆಫೀಸರ್ (ಕಾನೂನು)- 40
ಅಸಿಸ್ಟಂಟ್ ಅಡ್ಮಿನಿಸ್ಟ್ರೇಟಿವ್ ಆಫೀಸರ್ (ರಾಜ್‌ಭಾಷಾ)- 08
ಅಸಿಸ್ಟಂಟ್ ಅಡ್ಮಿನಿಸ್ಟ್ರೇಟಿವ್ ಆಫೀಸರ್ (ಐಟಿ)- 50

ಇನ್ನಿತರ ಸರಕಾರಿ ಉದ್ಯೋಗ ಮಾಹಿತಿಗಾಗಿ Click hear

ವಿದ್ಯಾರ್ಹತೆ, ವಯೋಮಿತಿ
ಆಯಾ ಹುದ್ದೆಗಳಿಗೆ ಅನುಗುಣವಾಗಿ ಬಿಇ / ಬಿ.ಟೆಕ್, ಪದವಿ ಪಾಸ್ ಮಾಡಿರಬೇಕು.
ಅರ್ಜಿ ಸಲ್ಲಿಸಲು ಕನಿಷ್ಠ 21 ವರ್ಷ ಆಗಿರಬೇಕು. ಗರಿಷ್ಠ 30 ವರ್ಷ ಮೀರಿರಬಾರದು. ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇದೆ.

ಅರ್ಜಿ ಶುಲ್ಕ
– ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 700 ರೂ.
– ಎಸ್‌ಸಿ / ಎಸ್‌ಟಿ / ವಿಶೇಷಚೇತನ ಅಭ್ಯರ್ಥಿಗಳಿಗೆ 85 ರೂ.
– ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್‌ ಬಳಸಿ ಪಾವತಿಸಲು ಅವಕಾಶ ಇದೆ.

ಪ್ರಮುಖ ದಿನಾಂಕಗಳು
ಆನ್‌ಲೈನ್‌ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 25-02-2020
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 15-03-2020
ಆನ್‌ಲೈನ್‌ ಪ್ರಿಲಿಮಿನರಿ ಪರೀಕ್ಷೆಗೆ ಅಡ್ಮಿಟ್‌ ಕಾರ್ಡ್‌ ಡೌನ್‌ಲೋಡ್‌ ಬಿಡುಗಡೆ ದಿನಾಂಕ : 27-03-2020
ಪ್ರಿಲಿಮಿನರಿ ಪರೀಕ್ಷೆ ದಿನಾಂಕ : 04-04-2020

ಅರ್ಜಿ ಸಲ್ಲಿಸುವ ವಿಳಾಸ Apply online

ಇನ್ನಿತರ ಸರಕಾರಿ ಉದ್ಯೋಗ ಮಾಹಿತಿಗಾಗಿ Click hear