ರಾಜ್ಯದಲ್ಲಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿಕಾರ್ಡ್‌) ಗಳಿಗೆ ಬ್ಯಾಕ್‌ಲಾಗ್ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ
ಲೆಕ್ಕಾಧಿಕಾರಿ – 05
ಹಿರಿಯ ಲೆಕ್ಕಾಧಿಕಾರಿ – 03
ಪ್ರಥಮ ದರ್ಜೆ ಸಹಾಯಕರು – 07
ಕಿರಿಯ ಕ್ಷೇತ್ರಾಧಿಕಾರಿ – 09
ಬೆರಳಚ್ಚುಗಾರರು / ಗಣಕಯಂತ್ರ ನಿರ್ವಾಹಕರು – 07
ಸಹಾಯಕರು – 04
ಜವಾನರು – 13
ಒಟ್ಟು – 43

ವೇತನ ಶ್ರೇಣಿ
ಲೆಕ್ಕಾಧಿಕಾರಿ : 17650-32000 ರೂ.
ಹಿರಿಯ ಲೆಕ್ಕಾಧಿಕಾರಿ: 14550-26700 ರೂ.
ಪ್ರಥಮ ದರ್ಜೆ ಸಹಾಯಕರು: 14550-26700 ರೂ.
ಕಿರಿಯ ಕ್ಷೇತ್ರಾಧಿಕಾರಿ: 11600-21000 ರೂ.
ಬೆರಳಚ್ಚುಗಾರರು / ಗಣಕಯಂತ್ರ ನಿರ್ವಾಹಕರು: 11600-21000 ರೂ.
ಸಹಾಯಕರು: 10400-16400 ರೂ.
ಜವಾನರು: 9600-14550 ರೂ.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 16-03-2020
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 16-04-2020
ಅರ್ಜಿ ಶುಲ್ಕ ಪಾವತಿಗೆ ಕೊನೆ ದಿನಾಂಕ – 17-04-2020

ವಿದ್ಯಾರ್ಹತೆ
ಲೆಕ್ಕಾಧಿಕಾರಿ ಹುದ್ದೆಗೆ ಬಿಕಾಂ / ಬಿಬಿಎಂ / ಬಿಬಿಎ / ಬಿಸಿಎ / ಪದವೀಧರರಾಗಿರಬೇಕು.
ಹಿರಿಯ ಲೆಕ್ಕಾಧಿಕಾರಿ ಮತ್ತು ಎಫ್‌ಡಿಎ ಹುದ್ದೆಗೆ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು.
ಕಿರಿಯ ಕ್ಷೇತ್ರಾಧಿಕಾರಿ ಮತ್ತು ಬೆರಳಚ್ಚುಗಾರರು ಹುದ್ದೆಗೆ ದ್ವಿತೀಯ ಪಿಯುಸಿ.
ಸಹಾಯಕ ಹುದ್ದೆಗೆ ಎಸ್‌ಎಸ್‌ಎಲ್‌ಸಿ.
ಜವಾನ ಹುದ್ದೆಗೆ 8 ನೇ ತರಗತಿ ಪಾಸ್‌.
ಉನ್ನತ ಶ್ರೇಣೀಯ ಹುದ್ದೆಗಳಿಗೆ ಕಂಪ್ಯೂಟರ್ ಬಳಕೆ ಗೊತ್ತಿರಬೇಕು.

ವಯೋಮಿತಿ
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 40 ವರ್ಷ ದಾಟಿರಬಾರದು.

ಅರ್ಜಿ ಶುಲ್ಕ
500 ರೂ ಜತೆಗೆ 30 ರೂ. ಅಂಚೆ ಶುಲ್ಕ ಪಾವತಿಸಬೇಕು. ಕರ್ನಾಟಕದ ಅಂಚೆ ಕಚೇರಿಯಲ್ಲಿ ಅರ್ಜಿ ಶುಲ್ಕ ಪಾವತಿಸಬಹುದು.

ಅರ್ಜಿ ಸಲ್ಲಿಕೆಗೆ ಹೇಗೆ?
ಅಭ್ಯರ್ಥಿಗಳು ಪಿಕಾರ್ಡ್‌ ಬ್ಯಾಂಕ್‌ ಅಧಿಕೃತ ವೆಬ್‌ಸೈಟ್‌ ಮೂಲಕ ಅರ್ಜಿ ಸಲ್ಲಿಸಬಹುದು. Click Hear
https://recruit-app.com/cccpcardbl2020