Select Page

ಸ್ಟೇಜ್ ಮೇಲೆ ಕುಸಿದು ಬಿದ್ದು ಕಲಾವಿದ ಸಾವು

ಸ್ಟೇಜ್ ಮೇಲೆ ಕುಸಿದು ಬಿದ್ದು ಕಲಾವಿದ ಸಾವು

ಮಂಡ್ಯ: ಕುರುಕ್ಷೇತ್ರ ನಾಟಕ ಮಾಡುತ್ತಿದ್ದ ವೇಳೆ ಸ್ಟೇಜ್ ಮೇಲೆ ಕುಸಿದು ಬಿದ್ದದು ಕಲಾವಿದರೊಬ್ಬರು ಮೃತಪಟ್ಟಿದ್ದಾರೆ. ಮಳವಳ್ಳಿ ತಾಲೂಕಿನ ಬಂಡೂರು ಗ್ರಾಮದ ಬಸವನಗುಡಿ ಬಳಿ ಈ ದುರ್ಘಟನೆ ಸಂಭವಿಸಿದೆ.

ದುಗ್ಗನಹಳ್ಳಿಯ ನಂಜಯ್ಯ ಮೃತ ಕಲಾವಿದ. ಬಂಡೂರಲ್ಲಿ ಕುರುಕ್ಷೇತ್ರ ನಾಟಕ ನಡೆಯುತ್ತಿತ್ತು. ಈ ನಾಟಕದಲ್ಲಿ ನಂಜಯ್ಯ ಅವರು ಸಾತ್ಯಕಿ ಪಾತ್ರ ಮಾಡುತ್ತಿದ್ದರು.

ನಾಟಕದಲ್ಲಿ ಕೃಷ್ಣ ಸಂಧಾನದ ಸನ್ನಿವೇಶ ಶುರುವಾಗಿತ್ತು. ಇನ್ನೇನು ಸತ್ಯಾಕಿ ಪಾತ್ರಧಾರಿ ನಂಜಯ್ಯ ಡೈಲಾಗ್ ಹೇಳಬೇಕಿತ್ತು, ಅಷ್ಟರಲ್ಲಿ ಕುಸಿದು ಬೀಳುತ್ತಾರೆ. ತಕ್ಷಣ ಅಲ್ಲಿದ್ದವರು ಓಡಿ ಹೋಗಿ ಅವರನ್ನು ಎಬ್ಬಿಸಲು ಪ್ರಯತ್ನಿಸುತ್ತಾರೆ. ಆದ್ರೆ ಅವರು ಏಳುವುದಿಲ್ಲ, ಆಗ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತದೆ.

ಅಲ್ಲಿಂದ ನಂಜಯ್ಯನ್ನ ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋದರು. ಅವರನ್ನು ಪರೀಕ್ಷಿಸಿದ ವೈದ್ಯರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿಸಿದರು.

ಹೀಗಾಗಿ ನಾಟಕವನ್ನು ಅರ್ಧದಲ್ಲೇ ಸ್ಥಗೀತಗೊಳಿಸಲಾಯಿತು. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನಾಟಕ ನೋಡಲು ಬಂದವರು ಈ ಸನ್ನಿವೇಶ ಕಂಡು ಮಮ್ಮಲ ಮರುಗಿದರು.

Leave a reply

Your email address will not be published. Required fields are marked *