Select Page

ರೈತರ ಮಕ್ಕಳ ಶಿಷ್ಯವೇತನ: ಪಡೆಯುವುದು ಹೇಗೆ? ಪೂರ್ಣ ವಿವರ ಇಲ್ಲಿದೆ

ರೈತರ ಮಕ್ಕಳ ಶಿಷ್ಯವೇತನ: ಪಡೆಯುವುದು ಹೇಗೆ? ಪೂರ್ಣ ವಿವರ ಇಲ್ಲಿದೆ

ರಾಜ್ಯ ಸರ್ಕಾರ ಹೊಸದಾಗಿ ಜಾರಿಗೊಳಿಸಿರುವ ರೈತ ಮಕ್ಕಳ ಶಿಷ್ಯವೇತನ ಸೌಲಭ್ಯ ಇಂದಿನಿAದ ಜಾರಿಯಾಗಲಿದೆ. ಆದರೆ, ರೈತರು ಮಕ್ಕಳು ಶಿಷ್ಯವೇತನವನ್ನು ಪಡೆಯುವುದು ಹೇಗೆ?, ಯಾವ ರೈತರ ಮಕ್ಕಳು ಈ ಶಿಷ್ಯವೇತನಕ್ಕೆ ಅರ್ಹರು?, ಅರ್ಜಿ ಸಲ್ಲಿಸುವುದು ಹೇಗೆ? ಇದರ ಪೂರ್ಣ ಮಾಹಿತಿ ಇಲ್ಲಿದೆ. ಈ ಲೇಖನವನ್ನು ಪೂರ್ತಿಯಾಗಿ ಓದಿ.

ರೈತ ಮಕ್ಕಳ ಹೆಚ್ಚಿನ ಹಾಗೂ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು “ಶಿಷ್ಯವೇತನ’ ಯೋಜನೆ ಜಾರಿಗೆ ತರಲಾಗಿದೆ. 10 ನೇ ತರಗತಿ ನಂತರ ರಾಜ್ಯದ ಯಾವುದೇ ಭಾಗದಲ್ಲಿರುವ, ಅಧಿಕೃತವಾಗಿ ನೊಂದಣಿಯಾಗಿರುವ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್ಗಳವರೆಗೆ ಪ್ರವೇಶ ಪಡೆದಿರುವ ಕರ್ನಾಟಕ ರಾಜ್ಯದ ರೈತರ ಅರ್ಹ ಮಕ್ಕಳ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಮಾಡಲಾಗುತ್ತದೆ.

ಯಾವುದೇ ಮಕ್ಕಳಿಗೆ ಪೋಷಕರು ಇಲ್ಲದೇ ಇದ್ದ ಸಂದರ್ಭದಲ್ಲಿ ಉಳುಮೆ ಮಾಡುವಂತಹ, ಕೃಷಿ ಮಾಡುವಂತಹ ಜಮೀನನ್ನು ಅವರು ಹೊಂದಿರಬೇಕು. ಈ ರೈತರ ಮಕ್ಕಳು ಕರ್ನಾಟಕ ರಾಜ್ಯದ ಅನುದಾನದಿಂದ ಪಾವತಿಸುವಂತಹ ಒಂದು ಶಿಷ್ಯವೇತನಕ್ಕೆ ಮಾತ್ರ ಅರ್ಹರಾಗುತ್ತಾರೆ.

ಆದರೆ, ಮೆರಿಟ್, ಅರ್ಹತಾ ಪರೀಕ್ಷೆ, ಶೈಕ್ಷಣಿಕ ಪರೀಕ್ಷೆಗಳಲ್ಲಿ ರ್ಯಾಂಕ್ ಇತ್ಯಾದಿಗಳ ಆಧಾರದ ಮೇಲೆ ಪಡೆಯುವ ಶಿಷ್ಯವೇತನ, ಪ್ರಶಸ್ತಿ, ಪ್ರತಿಫಲ ಇವುಗಳನ್ನು ರೈತರ ಮಕ್ಕಳು ಪಡೆದಿದ್ದರೂ ಈ ಶಿಷ್ಯವೇತನವನ್ನು ಪಡೆಯಲು ಅರ್ಹರಾಗಿರುತ್ತಾರೆ.

ರೈತರ ಮಕ್ಕಳ ತಂದೆ- ತಾಯಿ ಇಬ್ಬರೂ ಕೃಷಿ ಜಮೀನಿನ ಒಡೆಯರಾಗಿದ್ದರೆ, ಈ ಯೋಜನೆಯಲ್ಲಿ ಒಂದು ಶಿಷ್ಯ ವೇತನಕ್ಕೆ ಮಾತ್ರ ವಿದ್ಯಾರ್ಥಿಗಳು ಅರ್ಹರಾಗಿರುತ್ತಾರೆ. ಈ ಶಿಷ್ಯವೇತನವು ಶಿಕ್ಷಣದ ಯಾವುದೇ ಕೋರ್ಸಿನ ಸೆಮಿಸ್ಟರ್, ಶೈಕ್ಷಣಿಕ ವರ್ಷಗಳಿಗೆ ಮಿತಿಯಾಗಿರತಕ್ಕದ್ದು.

ಕೋರ್ಸ್ನ ಸೆಮಿಸ್ಟರ್‌ನಲ್ಲಿ, ಶೈಕ್ಷಣಿಕ ವರ್ಷದಲ್ಲಿ ಅನುತ್ತೀರ್ಣ ಹೊಂದಿ ಪುನಃ ಆ ಸೆಮಿಸ್ಟರ್, ಶೈಕ್ಷಣಿಕ ವರ್ಷದಲ್ಲಿ ವಿದ್ಯಾಭ್ಯಾಸದ ಪುನರಾವರ್ತನೆಯಾದರೆ (ಪುನಃ ಪರೀಕ್ಷೆ ತೆಗೆದುಕೊಂಡರೆ) ವಿದ್ಯಾರ್ಥಿಗಳು ಶಿಷ್ಯವೇತನ ಪಡೆಯಲು ಅರ್ಹರಾಗಿರುವುದಿಲ್ಲ.

ಈ ಶಿಷ್ಯವೇತನವನ್ನು ಯಾವುದಾದರೂ ಒಂದು ವಿಧದ ಕೋರ್ಸ್ಗೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಬಹುದು.

ಶಿಷ್ಯವೇತನ ಎಷ್ಟು?

ಪದವಿಯ ಮುಂಚೆ ಪಿ.ಯು.ಸಿ, ಐ.ಟಿ.ಐ, ಡಿಪ್ಲೋಮಾ ಕೋರ್ಸ ವಿದ್ಯಾರ್ಥಿಗಳಿಗೆ ರೂ.2,500/-, ವಿದ್ಯಾರ್ಥಿನಿಯರಿಗೆ ರೂ.3,000/-, ಬಿ.ಎ, ಬಿ.ಎಸ್ಸಿ, ಬಿ.ಕಾಂ ಇತ್ಯಾದಿ ಎಂ.ಬಿ.ಬಿ.ಎಸ್, ಬಿ.ಇ/, ಬಿ.ಟೆಕ್ ಮತ್ತು ವೃತ್ತಿಪರ ಕೋರ್ಸಗಳನ್ನು ಹೊರತುಪಡಿಸಿ ವಿದ್ಯಾರ್ಥಿಗಳಿಗೆ ರೂ.5,000 ಹಾಗೂ ವಿದ್ಯಾರ್ಥಿನಿಯರಿಗೆ ರೂ.5,500.

Read More: ಈರುಳ್ಳಿ ಹಳದಿ ರೋಗ ಭಾದೆ ನಿವಾರಣೆಗೆ ಕ್ರಮ

ಎಲ್.ಎಲ್.ಬಿ, ಪ್ಯಾರಾ ಮೆಡಿಕಲ್, ಬಿ.ಫಾರ್ಮ, ನರ್ಸಿಂಗ್ ಇತ್ಯಾದಿ ವೃತ್ತಿಪರ ಕೋರ್ಸ್ಗಳ ವಿದ್ಯಾರ್ಥಿಗಳಿಗೆ ರೂ.7,500, ವಿದ್ಯಾರ್ಥಿನಿಯರಿಗೆ ರೂ.8,000, ಎಂ.ಬಿ.ಎಸ್, ಬಿ.ಇ, ಬಿ.ಟೆಕ್ ಮತ್ತು ಸ್ನಾತಕೋತ್ತರ ಕೋರ್ಸ್ಗಳಿಗನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ರೂ.10,000 ಹಾಗೂ ವಿದ್ಯಾರ್ಥಿನಿಯರಿಗೆ ರೂ. 11,000 ವಾರ್ಷಿಕ ಹಣ ನೀಡಲಾಗುತ್ತದೆ.

Read More: ಜೇನು ಕೃಷಿ ಮಾಡುವುದು ಎಷ್ಟು ಸುಲಭ ಗೊತ್ತಾ?

ಪ್ರೂಟ್ಸ್ ತಂತ್ರಾAಶದಲ್ಲಿ ನೊಂದಣಿಯಾಗದೆ (ಎಫ್‌ಐಡಿ) ಇರುವಂತ ರೈತರು ಪಹಣಿ, ಆಧಾರ ಝರಾಕ್ಸ್, ಬ್ಯಾಂಕ್ ಪಾಸ್ ಬುಕ್ ಝರಾಕ್ಸ್ ಕೂಡಲೇ ರೈತ ಸಂಪರ್ಕ ಕೇಂದ್ರಗಳಿಗೆ ನೀಡಿ ಎಫ್‌ಐಡಿ ಮಾಡಿಸಿಕೊಂಡು ಈ ಸೌಲಭ್ಯ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗೆ ತಾಲ್ಲೂಕು ಮಟ್ಟದ ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಹಾಗೂ ಹೋಬಳಿಯ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದು ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.

Read more: ಎಂಜಿನಿಯರ್ ಆಸೆ ಬಿಟ್ಟು ಕೃಷಿಯಲ್ಲೇ ಲಕ್ಷ ರೂ. ಗಳಿಸುವ ರೈತ

Trackbacks/Pingbacks

  1. ಗಂಗಾ-ಕಲ್ಯಾಣ ನೀರಾವರಿ ಸೌಲಭ್ಯಕ್ಕೆ ಅರ್ಜಿ ಆಹ್ವಾನ | - […] ರೈತರ ಮಕ್ಕಳ ಶಿಷ್ಯವೇತನ: ಪಡೆಯುವುದು ಹೇಗೆ? … […]

Leave a reply

Your email address will not be published. Required fields are marked *