ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನಮಂತ್ರಿಗಳ ಆತ್ಮ ನಿರ್ಭರ ಭಾರತ ಕಾರ್ಯಕ್ರಮದಡಿ ಪಶು ಸಂಗೋಪನಾ ವಲಯದ ಪಶುಪಾಲನಾ ಮೂಲಭೂತ ಸೌಕರ್ಯ ನಿಧಿ ಯೋಜನೆಯಡಿ ಪಶು ಸಂಗೋಪನಾ ಪೂರಕ ಚಟುವಟಿಕೆಗಳ ಉದ್ಯಮ ಆರಂಭಿಸಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಡೈರಿ ಉತ್ಪನ್ನಗಳ ಸಂಸ್ಕರಣೆ ಮತ್ತು ಉತ್ಕøಷ್ಟ ಡೈರಿ ಪದಾರ್ಥಗಳ ಉತ್ಪಾದನೆ ಮತ್ತು ಸಂಸ್ಕರಣಾ ಘಟಕಗಳ ಸ್ಥಾಪನೆ, ಮಾಂಸದ ಉತ್ಪಾದನೆ, ಮಾಂಸದ ಸಂಸ್ಕರಣೆ ಮತ್ತು ಮಾಂಸ ಸಂಸ್ಕರಣಾ ಘಟಕಗಳ ಸ್ಥಾಪನೆ ಹಾಗೂ ಪಶು ಆಹಾರ ತಯಾರಿಕಾ ಘಟಕಗಳ ಸ್ಥಾಪನೆಗೆ ಅರ್ಜಿ ಆಹ್ವಾನಿಸಲಾಗಿದೆ.

ಸಾರ್ವಜನಿಕ ಸಹಭಾಗಿತ್ವದಲ್ಲಿ ಉದ್ಯಮಗಳು ಆರಂಭಿಸಲು ಅವಕಾಶವಿದ್ದು, ಜಿಲ್ಲೆಯಲ್ಲಿ 30 ಜನರಿಗೆ ಅವಕಾಶಗಳಿವೆ. ಈಗಾಗಲೇ ಘಟಕಗಳ ಸ್ಥಾಪಿಸಿದ್ದರೆ ವಿಸ್ತರಣೆಗೂ ಅವಕಾಶವಿದೆ. ರಾಷ್ಟ್ರೀಕೃತ ಬ್ಯಾಂಕ್‍ಗಳ ಮೂಲಕ ಸಾಲ ಸೌಲಭ್ಯ ಒದಗಿಸಲಾಗುವುದು.

ಬ್ಯಾಂಕ್‍ಗಳಿಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಗಳನ್ನು www.ahidf.udyamimitra.in ವೆಬ್‍ಸೈಟ್‍ಗೆ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ.

ಈ ಕುರಿತಂತೆ ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕರು ಅಥವಾ ಆಯಾ ತಾಲೂಕಾ ಸಹಾಯಕ ನಿರ್ದೇಶಕರಿಗೆ ಸಂಪರ್ಕಿಸಲು ಉಪನಿರ್ದೇಶಕ ಡಾ.ರಾಜೀವ ಎನ್.ಕೂಲೇರ ಅವರು ಕೋರಿದ್ದಾರೆ.

ಉಪನಿರ್ದೇಶಕರು, ಪಶು ಸಂಗೋಪನಾ ಇಲಾಖೆ, ಹಾವೇರಿ ದೂ.ಸಂ.08375-249038/7760627272, ಸಹಾಯಕ ನಿರ್ದೇಶಕ ಕಚೇರಿ, ಪಶು ಆಸ್ಪತ್ರೆ ದೂ.08375-232033 ಮೊ.9480667062 (ಹಾವೇರಿ), ದೂ.08379-262413/ಮೊ.9901118508(ಹಾನಗಲ್),

08376-282339/ಮೊ.7022075543 (ಹಿರೇಕೆರೂರು), 9141010778/7411450502 (ರಟ್ಟಿಹಳ್ಳಿ), -08375-267395/9480422963 (ರಾಣೇಬೆನ್ನೂರು), 08378-255251/ ಮೊ.9108579345(ಶಿಗ್ಗಾಂವ), 08375-228540/ 9901784498 (ಬ್ಯಾಡಗಿ), 08378-241563/9740821508(ಸವಣೂರು) ಸಂಪರ್ಕಿಸಲು ಕೋರಲಾಗಿದೆ.