
ಔಷಧಿ ಸಸ್ಯ ಕೃಷಿಗೆ ಭರ್ಜರಿ ಬೇಡಿಕೆ: ಆದಾಯದ ದ್ವಿಗುಣಕ್ಕೆ ಸರಳ ದಾರಿ

ಕೊರೊನಾ ಬಂದ ನಂತರ ಔಷಧಿ ಸಸ್ಯ ಬೆಳೆಗೆ ಭಾರೀ ಬೇಡಿಕೆ ಬಂದಿದ್ದು, ಔಷಧಿ ಸಸ್ಯ ಕೃಷಿಗೆ ವ್ಯಾಪಕ ಅವಕಾಶ ತೆರೆದುಕೊಂಡಿದೆ. ಅದರಲ್ಲಿ ಯಾವ ಔಷಧಿ ಸಸ್ಯಗಳಿಗೆ ಎಷ್ಟು ಬೇಡಿಕೆ ಇದೆ. ಅದನ್ನು ಹೇಗೆ ಬೆಳೆಯಬೇಕು.
ಯಾವ ಪ್ರದೇಶಕ್ಕೆ ಯಾವ ಔಷಧಿ ಸಸ್ಯ ಕೃಷಿ ಮಾಡಬಹುದು ಎನ್ನುವ ಬಗ್ಗೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಔಷಧಿ ಸಸ್ಯಗಳ ವಿಭಾಗದ ಪ್ರಾಧ್ಯಾಪಕ ಕೆ.ಆರ್. ಶ್ರೀನಿವಾಸಪ್ಪ ಅವರು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಅದರ ವಿವರ ಇಲ್ಲಿದೆ.
ರೇಷ್ಮೆಗೆ ಬಂಗಾರದ ಬೆಲೆ: ತಜ್ಞರ ಭವಿಷ್ಯ
ಕೇಂದ್ರ ಸರ್ಕಾರದ ಆತ್ಮ ನಿರ್ಭರ ಭಾರತ ಯೋಜನೆಯಡಿ ಔಷಧಿ ಸಸ್ಯಗಳನ್ನು ಬೆಳೆಸಬೇಕು ಎಂದು ಹೇಳಲಾಗುತ್ತಿದೆ. ವಿದೇಶಗಳಿಂದ ಔಷಧಿ ಸಸ್ಯಗಳನ್ನು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿ, ದೇಶೀಯ ರೈತರಿಂದ ಔಷಧಿ ಬೆಳೆ ಬೆಳೆಸುವ ಬಗ್ಗೆ ಸಿದ್ಧತೆ ನಡೆಯುತ್ತಿದೆ. ಹಾಗಾಗಿ ಔಷಧಿ ಸಸ್ಯ ಕೃಷಿಗೆ ಭಾರೀ ಬೇಡಿಕೆ ಬರಲಿದೆ. ಸರ್ಕಾರದಿಂದಲೂ ಉತ್ತೇಜನ ಸಿಗಲಿದೆ.
ಬೆಂಡೆ ಬೆಳೆಗೆ ಹಳದಿ ವೈರಸ್ ನಂಜು: ನಿಯಂತ್ರಣ ಕ್ರಮಗಳು
ಭಾರತದಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಔಷಧಿ ಸದಸ್ಯಗಳು ಇವೆ. ಕರ್ನಾಟಕದಲ್ಲಿ 100 ಕ್ಕೂ ಔಷಧಿ ಬೆಳೆಗಳನ್ನು ರೈತರು ಬೆಳೆಯುತ್ತಿದ್ದಾರೆ. ಈಗ ಅದನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆದು ಆರ್ಥಿಕ ಆದಾಯ ಹೆಚ್ಚಿಸಿಕೊಳ್ಳಬಹುದು.
ಉಚಿತವಾಗಿ ತೋಟ ಮಾಡಿ ನರೇಗಾ ಯೋಜನೆಯಡಿ ಹಣ ಗಳಿಸಿ
ಔಷಧಿ ಸದಸ್ಯಗಳನ್ನು ಅಡಕೆ, ತೆಂಗಿನ ತೋಟಗಳಲ್ಲಿ ಅಂತರ ಬೆಳೆಯಾಗಿಯೂ ಬೆಳೆಯಬಹುದು. ಪಚೋಲಿ, ಭೂ ಆಮ್ಲಿಕಾ (ನೆಲ ನಲ್ಲಿ), ಹಿಪ್ಪಳಿ (ಉದ್ದ ಮೆಣಸು) ಅರೆ ನೆರಳು ಪ್ರದೇಶದಲ್ಲಿ ಬೆಳೆಯಬಹುದು. ಹಿಪ್ಪಳಿ ಕಷಾಯ ಶಿತ, ಕೆಮ್ಮು ನೆಗಡಿಗೆ ದಿವ್ಯೌಷಧ.
ಕೃಷಿಯಲ್ಲೇ ತಿಂಗಳ ಪಗಾರ; ನಗರ ಉದ್ದೋಗಕ್ಕೆ ಸೆಡ್ಡು ಹೊಡೆದ ಯುವ ರೈತ
ಬೇಡಿಕೆ ಇರುವ ಸರಳ ಕೃಷಿಯ ಸಸ್ಯಗಳು?
ರೋಗ ನಿರೋಧಕ ಶಕ್ತಿ ಹೆಚ್ಚಿಸ ಬಲ್ಲ ಅಮೃತ ಬಳ್ಳಿ, ತಳಸಿ, ಲವಂಗ, ಕಾಡು ನೆಲ್ಲಿ, ಹಿರೇಮದ್ದಿನ ಗಿಡ. ಅಲುವೆರಾ, ನೆಲನೆಲ್ಲಿ, ಹಿಪ್ಪಲಿ, ಶತಾವರಿ, ನಾಗದಾಳಿ, ಅಗಸೆ, ನೀರು ಬ್ರಾಹ್ಮಿ, ಒಂದೆಲಗ, ರಣಫಲ, ಚಕ್ರಮುನಿ, ಅಡುಸೋಗೆ, ದೊಡ್ಡಪತ್ರೆ, ಇನ್ಸುಲಿನ್, ಮಧುನಾಶಿನಿ, ಪಾತಾಳ ಗರುಡ ಹೀಗೆ ಹತ್ತಾರು ಸಸ್ಯಗಳನ್ನು ಬೆಳೆಯಬಹುದು.
ಕೋಲಿಯಸ್ ಎನ್ನುವ ಸಸ್ಯ ಹೊರ ರಾಜ್ಯಗಳಲ್ಲಿ ಅತಿ ಹೆಚ್ಚು ಬೇಡಿಕೆ ಹೊಂದಿದೆ. ಕೇರಳ ರಾಜ್ಯವೊಂದರಲ್ಲಿಯೇ 2-3 ಸಾವಿರ ಎಕರೆ ಪ್ರದೇಶಗಳಲ್ಲಿ ಕೋಲಿಯಸ್ ಸಸ್ಯ ಬೆಳೆಯುತ್ತಾರೆ. ಇದನ್ನು ಯಾವ ಪ್ರದೇಶದಲ್ಲಿಯೂ ಬೆಳೆಯಬಹುದು. ನೋನಿ ಕೂಡ ಪ್ರಮುಖ ಬೇಡಿಕೆ ಬೆಳೆಯಾಗಿದೆ.
ಯಾವ ಪ್ರದೇಶಕ್ಕೆ ಯಾವ ಸಸ್ಯ ಬೆಸ್ಟ್?
ದಕ್ಷಿಣ ಭಾರತದಲ್ಲಿ 100ಕ್ಕೂ ಹೆಚ್ಚು ತಳಿಗಳನ್ನು ಬೆಳೆಯಲಾಗುತ್ತಿದೆ. ಅದರಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಅಶ್ವಗಂಧ, (5 ತಿಂಗಳ ಬೆಳೆ, ಫಲವತ್ತತೆ ಇಲ್ಲದ ಒಣ ಪ್ರದೇಶದಲ್ಲಿಯೂ ಬೆಳೆಯಬಹುದು). ಮುಕುನ, ಗುಡುಚಿ, ಕೋಲಿಯಸ್ ಯೋಗ್ಯ. ನೆಲಬೇವು, ನೆಲನಲ್ಲಿ, ಬ್ರಾಹ್ಮಿ, ಅಮೃತ ಬಳ್ಳಿ ರಾಜ್ಯದ ಎಲ್ಲಿ ಬೇಕಾದರೂ ಬೆಳೆಯಬಹುದು.
ಮೀನುಗಾರಿಕೆ ಇಲಾಖೆಯ ಯೋಜನೆಗಳ ಕಿರು ಪರಿಚಯ
ಮಾರುಕಟ್ಟೆ ಹೇಗಿದೆ?
ಔಷಧಿ ಸದಸ್ಯಗಳನ್ನು ತರಕಾರಿ ರೀತಿ ಮಾರಲು ಆಗುವುದಿಲ್ಲ. ಹಾಗಾಗಿ ಕೃಷಿ ಮಾಡಿ ಮಾರುಕಟ್ಟೆ ಹುಡುಕುವ ಬದಲು ಒಪ್ಪಂದದ ಕೃಷಿ ಬಲು ಯೋಗ್ಯ ಎನ್ನುವುದು ತಜ್ಞರ ಸಲಹೆ. ಅಂದರೆ, ಭಾರತದಲ್ಲಿ ಸಾಕಷ್ಟು ಕಂಪನಿಗಳು ಆಯುರ್ವೇದ ಉತ್ಪನ್ನಗಳನ್ನು ಮಾರಾಟ ಮಾಡುತ್ತಿವೆ.
ಕೊರೊನಾ ನಂತರ ಅದರ ಬೇಡಿಕೆ ಹೆಚ್ಚಾಗಿದೆ. ಅಂಥ ಕಂಪನಿಗಳ ಜತೆಗೆ ರೈತರು ಒಪ್ಪಂದ ಮಾಡಿಕೊಂಡು ಔಷಧಿ ಸಸ್ಯಗಳನ್ನು ಬೆಳೆದರೆ ಸಾಕಷ್ಟು ಆದಾಯ ಗಳಿಸಬಹುದು. ಕಂಪನಿಗಳನ್ನು ಸಂಪರ್ಕಿಸಲು ತೋಟಗಾರಿಕೆ ಇಲಾಖೆ ನೆರವು ಪಡೆಯಬಹುದು.
ರೈತರಿಗೆ 5,000 ರೂ. ಆರ್ಥಿಕ ನೆರವು
ಔಷಧಿ ಸಸ್ಯಗಳು ಎಲ್ಲಿ ಸಿಗುತ್ತವೆ:
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ತೋಟಗಾರಿಕೆ ವಿಭಾಗದಲ್ಲಿ 200 ಕ್ಕೂ ಹೆಚ್ಚು ಔಷಧಿ ಗಿಡಗಳು ಇವೆ. ಪ್ರತಿ ಸಸಿಯನ್ನು ಗುರುತಿಸುವುದು ಹೇಗೆ, ಅದನ್ನು ಬೆಳೆಯುವ ಪದ್ಧತಿ ಹೇಗೆ ಎನ್ನುವ ಪೂರ್ಣ ವಿವರ ಗಿಡಗಳ ಬಳಿಯೇ ನೀಡಲಾಗಿದೆ. ರೈತರು ವಿಶ್ವವಿದ್ಯಾಲಯಕ್ಕೆ ಬಂದು ಸಸಿ ಪಡೆಯಬಹುದು. ನೆಲ ನೆಲ್ಲಿ, ಕಿರು ನೆಲ್ಲಿ ಬೀಜದಿಂದ ಬೆಳೆಯಬಹುದು.
ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡರೆ ಅವರೇ ಬೀಜಗಳನ್ನು ಕೊಡುತ್ತಾರೆ. ಅಂಥ ಸಸ್ಯ ಬೆಳೆಯುವುದು ರೈತರಿಗೆ ಇನ್ನೂ ಸುಲಭ. ಸಮೀಪದ ತೋಟಗಾರಿಕೆ ಇಲಾಖೆಗೂ ಭೇಟಿ ನೀಡಿ ಮಾಹಿತಿ ಪಡೆಯಬಹುದು.
ಮಾಹಿತಿಗೆ ಸಮೀಪದ ತೋಟಗಾರಿಕೆ ಇಲಾಖೆ ಸಂಪರ್ಕಿಸಬಹುದು.
ಮಾಹಿತಿ: ಚಂದನ ದೂರದರ್ಶನ